ಕನ್ನಡ್‌ ಬರಲ್ಲ.. ಅನ್ನೋದಕ್ಕಿಂತ ಕನ್ನಡದಲ್ಲೇ ಹೆಸರು ಹೇಳೋಕೆ ನನಗೆ ಹೆಮ್ಮೆ.! 

ಕನ್ನಡ ಭಾಷೆಯಲ್ಲಿ ಹೆಸರು ಹೇಳಿದರೆ ಎನೋ.. ಒಂಥರಾ ಹೆಮ್ಮೆ ಅನ್ಸುತ್ತೆ ನನಗೆ. ಕನ್ನಡ ಬರದೇ ಇರೋವರಿಗೆ ಮಾತಾಡೋದಕ್ಕೆ ಉತ್ಸಾಹ ನೀಡ್ತಾರೆ ಇಲ್ಲಿಯ ಜನ.. ʼಕನ್ನಡʼ ಈ ನಾಡಿನ ಆತ್ಮ ಅಂದ್ರೆ ತಪ್ಪಾಗಲ್ಲ.. 

Written by - Krishna N K | Last Updated : Nov 1, 2024, 01:03 PM IST
    • ಮಧ್ಯಪ್ರದೇಶದ ಯುವತಿಯ ಕನ್ನಡ ಪ್ರೀತಿ
    • ಕನ್ನಡದಲ್ಲೇ ಪುಸ್ತಕ ಬರೆದ ಜೋಯಾ
    • ಕರುನಾಡು ಅಂದ್ರೆ ಈಕೆಗೆ ತುಂಬಾ ಇಷ್ಟ
ಕನ್ನಡ್‌ ಬರಲ್ಲ.. ಅನ್ನೋದಕ್ಕಿಂತ ಕನ್ನಡದಲ್ಲೇ ಹೆಸರು ಹೇಳೋಕೆ ನನಗೆ ಹೆಮ್ಮೆ.!  title=

Kannada Rajyotsava 2024 : ಕರ್ನಾಟಕ, ಭಾರತದಲ್ಲಿನ ಒಂದು ಅದ್ಭುತವಾದ ರಾಜ್ಯ.. ʼಕನ್ನಡʼ ಈ ಮಣ್ಣಿನ ನಾಡಿ ಮಿಡಿತ.. ಇಲ್ಲಿನ ಆಚಾರ ವಿಚಾರಗಳು ಅತ್ಯದ್ಬುತ. ಉತ್ತರ ಕರ್ನಾಟಕದ ಮಂದಿ, ಕರಾವಳಿ ಸೌಂದರ್ಯ, ದಕ್ಷಿಣ ಕನ್ನಡದ ಜನರು ತೋರಿಸುವ ಆತಿಥ್ಯ, ಅವರ ಮಾತುಗಳು, ಸಂಪ್ರದಾಯ ನನ್ನ ಮನಸಿಗೆ ತುಂಬಾ ಹತ್ತಿರವಾದವು.. ಇವೇಲ್ಲವನ್ನ ನೋಡಿ ಅನುಭವಿಸಿದ ಮೇಲೆ ನನಗೆ ಅನಿಸಿದ್ದು, ʼಕರುನಾಡು ಪುಣ್ಯ ಭೂಮಿʼ... ಅಂತ..

ಈ ನಾಡಿನ ಅಧಿದೇವತೆ ಚಾಮುಂಡೇಶ್ವರಿ.. ಮಹಿಷಾಸುರನನ್ನ ಸಂಹರಿಸಿ ಮಹಿಷಾಸುರ ಮರ್ದಿನಿಯಾಗಿ ನೆಲೆಸಿದ ಮೈಸೂರು.. ಹನುಮನ ಜನ್ಮಸ್ಥಳ ಹಂಪಿ ಹತ್ತಿರದ ಅಂಜನಾದ್ರಿ ಬೆಟ್ಟ, ರಾಮ ಭಕ್ತಿಗೆ ಕೈಗನ್ನಡಿಯಂತಿದೆ.. ಅಷ್ಟೇ ಅಲ್ಲ.. ಕಿಷ್ಕಿಂದೆ ಪ್ರದೇಶದಲ್ಲಿ ರಾಮ ಮತ್ತು ಲಕ್ಷ್ಮಣ ಸುಗ್ರೀವನನ್ನ ಭೇಟಿಯಾಗಿದ್ದರು ಎನ್ನುವ ಅಂಶ ನನ್ನನ್ನು ಪುಳಕಿತಗೊಳಿಸಿತು.. ಕರುನಾಡಿಗೆ ರಾಮಾಯಣ ಚರಿತ್ರೆ ಇದೆ ಎನ್ನು ಸತ್ಯ ತಿಳಿಸಿತು.. 

ನನಂತೆ ಈ ನಾಡಿಗೆ ಯಾರೇ ಬರಲಿ, ಯಾವ ಭಾಷಿಗರೇ ಆಗಿರಲಿ, ಎಲ್ಲರನ್ನೂ ವಿಶಾಲ ಹೃದಯದಿಂದ ಸ್ವಾಗತಿಸುವುದು ಇಲ್ಲಿನ ಜನರ ಪದ್ದತಿ.. ಅದರಲ್ಲೂ ಇಲ್ಲಿಗೆ ಬಂದವರನ್ನು ಎಂದಿಗೂ ಹೊರಗಿನವಂತೆ ಪರಿಗಣಿಸಿ, ಕಡೆಗಣಿಸಿ ನೋಡುವುದಿಲ್ಲ.. ಸಮಾನತೆ, ಪ್ರೀತಿ, ಗೌರವ, ಆತಿಥ್ಯ.. ಕನ್ನಡಿಗರ ಪ್ರಧಾನ ಧ್ಯೇಯ..

ಕನ್ನಡ ಭಾಷೆಯಲ್ಲಿ ಹೆಸರು ಹೇಳಿದರೆ ಎನೋ.. ಒಂಥರಾ ಹೆಮ್ಮೆ ಅನ್ಸುತ್ತೆ ನನಗೆ. ಕನ್ನಡ ಬರದೇ ಇರೋವರಿಗೆ ಮಾತಾಡೋದಕ್ಕೆ ಉತ್ಸಾಹ ನೀಡ್ತಾರೆ ಇಲ್ಲಿಯ ಜನ.. ʼಕನ್ನಡʼ ಈ ನಾಡಿನ ಆತ್ಮ ಅಂದ್ರೆ ತಪ್ಪಾಗಲ್ಲ.. ಬೇರೆ ಭಾಷೆಗೆ ಗೌರವ ನೀಡುವ ಈ ಜನ, ನಮ್ಮ ನೆಲದ ಭಾಷೆ ಕಲಿಯಿರಿ ಅಂತ ಹೇಳುವ ವಿಧಾನ ನನಗೆ ತುಂಬಾ ಇಷ್ಟ..

ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿ, ದಕ್ಷಿಣ ಕನ್ನಡ ಎಲ್ಲಿದ್ರು, ಈ ರಾಜ್ಯದ ಸೊಬಗು ಪ್ರತ್ಯೇಕ. ಅಲ್ಲಿನ ಪುರಾತನ ದೇವಾಲಯಗಳು, ಜಾನಪದ ಕಲೆ, ಜನರ ಸಂಸ್ಕೃತಿ ಈ ನಾಡಿನ ಜೀವ. ಕರ್ನಾಟಕದ ಬಾವುಟ ನೋಡಿದ್ರೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ.. ಹೆಣ್ಣು ಮಕ್ಕಳು ಕೆನ್ನೆ ಮೇಲೆ ಇಟ್ಟುಕೊಳ್ಳುವ ಅರಿಶಿನ ಮತ್ತು ಹಣೆ ಮೇಲೆ ಇಡುವ ಕುಂಕುಮ ಇಲ್ಲಿನ ಬಾವುಟ ಬಣ್ಣದ.. ಇದನ್ನ ನೋಡಿದ್ರೆ, ಈ ನಾಡು ಹೆಣ್ಣಿಗೆ ನೀಡುವ ಪ್ರಾಮುಖ್ಯತೆ ತಿಳಿಸುತ್ತೆ..

ಒಂದು ಲೋಟ ನೀರು ಕೇಳಿದರೆ ಪಾನಕ ಕೊಡುವ ಇಲ್ಲಿನ ಜನರ ಅತಿಥಿ ಸತ್ಕಾರ ನನಗೆ ತುಂಬಾ ಇಷ್ಟವಾಯಿತು.. ಪರಭಾಷಿಗಳೆನ್ನದೇ ನನಗೆ ಇಲ್ಲಿನ ಜನ ತೋರಿದ ಪ್ರೀತಿ ಅಮ್ಮನ ಪ್ರೀತಿಯಂತೆ ನನ್ನ ಉಸಿರಿರುವರೆಗೂ ಸದಾ ನನ್ನೊಂದಿಗೆ ಇರುತ್ತದೆ...

ಕರ್ನಾಟಕ ನನಗೆ ಯಾವಾಗ್ಲು ಸ್ವಾಗತಿಸುವಂತ ಜಾಗ. ನನ್ನ ಗೆಳೆಯರು ಶಿಕ್ಷಕರು ಎಲ್ಲರು ತುಂಬ ಸಹಾಯ ಮತ್ತು ಪ್ರೋತ್ಸಾಹ ನೀಡ್ತಾರೆ.. ಈ ವಿಷಯದಲ್ಲಿ ನಾನು ತುಂಬಾ ಪುಣ್ಯವಂತೆ, ಮುಖ್ಯವಾಗಿ ನಾನು ಆಕ್ಸ್‌ಫರ್ಡ್ ಕಾಲೇಜ್ ಆಫ್ ಸೈನ್ಸ್ ಗೆ ಧನ್ಯವಾದಗಳು ಹೇಳಬೇಕು, ಕರುನಾಡಿಗೆ ಧಾನ್ಯವಾದ ಹೇಳಬೇಕು.. ನೀವೆಲ್ಲರು ನನ್ನನ್ನೂ ಮಗಳಂತೆ ಸ್ವೀಕರಿಸಿ ಆದರಿಸಿದಿರಿ.. ನಿಮಗೆ ನನ್ನ ತುಂಬು ಹೃದಯ ಧನ್ಯವಾದಗಳು... 

ಅಂದಹಾಗೆ.. ನಾನು ಜೋಯಾ.. ಮಧ್ಯಪ್ರದೇಶದಿಂದ ಬಂದು ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜ್ ಆಫ್ ಸೈನ್ಸ್ ಕಾಲೇಜ್‌ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದೇನೆ.. ಕನ್ನಡ ಭಾಷೆ, ಕರುನಾಡು ಕುರಿತು ನನ್ನ ಅನುಭವಗಳನ್ನು ಪುಸ್ತಕರೂಪದಲ್ಲಿಯೂ ಹೊರ ತಂದಿದ್ದೇನೆ.. ಇದು ನನ್ನ ಕನ್ನಡಾಭಿಮಾನ.. ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News