Surya-Jyothika Daughter: ನಟ ಸೂರ್ಯ ಮತ್ತು ಜ್ಯೋತಿಕಾ ಈ ವರ್ಷದ ದೀಪಾವಳಿಯನ್ನು ತಮ್ಮ ಮಗಳು ಮತ್ತು ಮಗನೊಂದಿಗೆ ಆಚರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಸೂರ್ಯ ತಮಿಳು ಚಿತ್ರರಂಗದ ಪ್ರಮುಖ ನಟ. ದಿಗ್ಗಜ ನಟ ಶಿವಕುಮಾರ್ ಅವರ ಮಗನಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸೂರ್ಯ, ಸರಣಿ ಫ್ಲಾಪ್ಗಳಲ್ಲಿ ಕಾಣಿಸಿಕೊಂಡರೂ ಕಡಿಮೆ ಅವಧಿಯಲ್ಲಿ ನಾಯಕ ನಟರಾದರು.
ನಟ ಸೂರ್ಯ ನಟಿಸಿದ ಸಿನಿಮಾಗಳು ಮೊದಲಿಗೆ ಫ್ಲಾಪ್ ಆದರೂ ಬಳಿಕ ನಟಿಸಿದ ಚಿತ್ರಗಳೆಲ್ಲವೂ ಹಿಟ್ ಆದವು.. ಅಲ್ಲಿಂದ ಇಲ್ಲಿಯವರೆಗೂ ಹಿಂದಿರುಗಿ ನೋಡಿಲ್ಲ ನಟ ಸೂರ್ಯ..
ಕಾಖಾ ಕಾಖಾ ಸಿನಿಮಾದಲ್ಲಿ ಜ್ಯೋತಿಕಾ ಜೊತೆ ಸೂರ್ಯ ನಟಿಸಿದಾಗ ಇಬ್ಬರ ನಡುವೆ ಸ್ನೇಹ ಚಿಗುರಿತ್ತು. ನಂತರ, 2006 ರಲ್ಲಿ ಇಬ್ಬರೂ ಪೋಷಕರ ಒಪ್ಪಿಗೆಯ ಮೇರೆಗೆ ವಿವಾಹವಾದರು.
ಈಗ ಅವರಿಗೆ ದಿಯಾ ಎಂಬ ಮಗಳು ಮತ್ತು ದೇವ್ ಎಂಬ ಮಗನಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ತಮ್ಮ ಮಕ್ಕಳ ಮೇಲೆ ಕ್ಯಾಮೆರಾದ ನೆರಳು ಸಾಧ್ಯವಾದಷ್ಟು ತಪ್ಪಿಸುತ್ತಾರೆ, ಕುಟುಂಬ ಕಾರ್ಯಕ್ರಮಗಳ ಸಮಯದಲ್ಲಿ ತೆಗೆದ ಚಿತ್ರಗಳನ್ನು ಮಾತ್ರ ಹಂಚಿಕೊಳ್ಳುತ್ತಾರೆ...
ಜ್ಯೋತಿಕಾ-ಸೂರ್ಯ ದಂಪತಿಗಳು ಈ ವರ್ಷ ತಮ್ಮ ಮಕ್ಕಳೊಂದಿಗೆ ಮುಂಬೈನಲ್ಲಿ ದೀಪಾವಳಿ ಸಂಭ್ರಮಿಸಿದ್ದಾರೆ ಎನ್ನಲಾಗುತ್ತಿದ್ದು, ಸಾಮಾನ್ಯವಾಗಿ ಸೂರ್ಯ-ಜ್ಯೋತಿಕಾ ದಂಪತಿಗಳು ಸೂರ್ಯ ತಂದೆ ತಾಯಿಯೊಂದಿಗೆ ದೀಪಾವಳಿ ಮತ್ತು ಪೊಂಗಲ್ನಂತಹ ವಿಶೇಷ ಸಂದರ್ಭಗಳನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಮುಂಬೈನಲ್ಲಿ ಆಚರಿಸಲಾಗಿದೆ ಎನ್ನಲಾಗಿದ್ದು ಅಚ್ಚರಿಗೆ ಕಾರಣವಾಗಿದೆ.
ಕಳೆದ ವರ್ಷ ಸೂರ್ಯ-ಜ್ಯೋತಿಕಾ ತಮ್ಮ ಮಕ್ಕಳೊಂದಿಗೆ ಮುಂಬೈಗೆ ತೆರಳಿದ್ದರು. ಮುಂಬೈನಲ್ಲಿ ನೆಲೆಸಿದ ನಂತರ ಜ್ಯೋತಿಕಾ ಬಾಲಿವುಡ್ ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ. ಆ ಮೂಲಕ ಅವರು ನಟಿಸಿದ ಸೈತಾನ್ ಚಿತ್ರ ಈ ವರ್ಷ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಅದೇ ರೀತಿ ಸೂರ್ಯ ಕೂಡ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಲು ಕಮಿಟ್ ಆಗಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಸೂರ್ಯ ನಿರ್ಮಿಸಿದ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೂರ್ಯ ಬಾಲಿವುಡ್ ಕಡೆಗೆ ಒಲವು ತೋರುತ್ತಿದ್ದರೂ ತಮಿಳು ಚಿತ್ರಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವರ ಮುಂಬರುವ ಚಿತ್ರ ಕಂಗುವ ನವೆಂಬರ್ 14 ರಂದು ಬಿಡುಗಡೆಯಾಗಲಿದೆ.
ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿಯೂ ಸೂರ್ಯ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಘೋಷಣೆ ಮಾಡಿರುವುದು ಗಮನಾರ್ಹ.