Anchor Anushree: ಗುಟ್ಟಾಗಿ ನಡೆದೇ ಹೋಯ್ತು ಆಂಕರ್ ಅನುಶ್ರೀ ಮದುವೆ!? ಪೋಟೋ ನೋಡಿ ಫ್ಯಾನ್ಸ್‌ ಶಾಕ್..

Anchor Anushree Marriage: ಕನ್ನಡಿಗರ ಮನೆಮಗಳು ಅನುಶ್ರೀ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.. ತಮ್ಮ ಅಚ್ಚ ಕನ್ನಡದ ಸ್ವಚ್ಚ ಮಾತಿನ ಮೂಲಕವೇ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿರುವ ಮಂಗಳೂರು ಚೆಲುವೆ ಎಂದರೇ ಕಿರುತೆರೆ ಪ್ರೇಕ್ಷಕರಿಗೆಲ್ಲ ಅಚ್ಚುಮೆಚ್ಚು.. ಇದೀಗ ಈ ಬೆಡಗಿಯ ಮದುವೆಯ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಗುಲ್ಲೆಬ್ಬಿಸಿದೆ.. 

1 /7

ಕಷ್ಟಗಳನ್ನು ಮೆಟ್ಟಿ ನಿಂತರೇ ಎಂತಹ ಯಶಸ್ಸು ಕೂಡ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದಕ್ಕೆ ಅನುಶ್ರೀ ಅವರೇ ಒಂದು ನಿದರ್ಶನ ಎಂದರೇ ಅತಿಶಯೋಕ್ತಿಯಲ್ಲ.. ಸ್ಟಾರ್‌ ಹಿರೋಯಿನ್‌ಗಳ ರೇಂಜ್‌ಗೆ ಜನಪ್ರಿಯತೆ ಗಳಿಸಿದ ಅನುಶ್ರೀ ಅವರ ಕುರಿತಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.. ಅದೇನೆಂದರೇ...   

2 /7

ಜಿರೋದಿಂದ ಜೀವನವನ್ನು ಶುರುಮಾಡಿದ ಆಂಕರ್‌ ಅನುಶ್ರೀ ಇಂದು ಎಲ್ಲರೂ ತಿರುಗಿ ನೋಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ.. ಇದಕ್ಕೆಲ್ಲ ಕಾರಣ ಅವರು ಪಟ್ಟ ಕಷ್ಟ. ಇಷ್ಟೆಲ್ಲ ಖ್ಯಾತಿ ಗಳಿಸಿರುವ ಈ ಮಂಗಳೂರು ಚೆಲುವೆ ಇನ್ನು ಯಾಕೆ ಮದುವೆಯಾಗಿಲ್ಲ ಎನ್ನುವುದು ಅವರ ಫ್ಯಾನ್ಸ್‌ ಪ್ರಶ್ನೆ..   

3 /7

ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು.. ತಾಯಿ ಪಟ್ಟ ಕಷ್ಟ ನೋಡಿದಕ್ಕಾಗಿ ಇವರು ಇಷ್ಟು ದಿನವಾದ್ರೂ ಮದುವೆ ಯೋಚನೆ ಮಾಡಿರಲಿಲ್ಲ.. ಆದರೆ ಇತ್ತೀಚೆಗೆ ಜೀ ಕನ್ನಡ ಅವಾರ್ಡ್‌ ಕಾರ್ಯಕ್ರಮದಲ್ಲಿ ಮುಂದಿನ ವರ್ಷ ಮದುವೆಯಾಗುವುದಾಗಿ ಹೇಳಿದ್ದರು.   

4 /7

ಆದರೆ ಇದೀಗ ಅನುಶ್ರೀ ಅವರ ಮದುವೆ ಗುಟ್ಟಾಗಿ ನಡೆದೇ ಹೋಗಿದೆ ಎನ್ನುವ ಸುದ್ದಿ ಹಾಗೂ ಕೆಲವು ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.. ಆದರೆ ಅವೆಲ್ಲವನ್ನು ಯಾರೋ ಕಿಡಿಗೇಡಿಗಳು ಎಡಿಟ್‌ ಮಾಡಿ ವೈರಲ್‌ ಮಾಡುತ್ತಿದ್ದಾರೆ ಎನ್ನಲಾಗಿದೆ..   

5 /7

ಅಲ್ಲದೇ ವೈರಲ್‌ ಆಗಿರುವ ಅನುಶ್ರೀ ಮದುವೆ ಸುದ್ದಿ ಹಾಗೂ ಪೋಟೋಗಳು ಸತ್ಯವಲ್ಲ.. ಅವು ಬರೀ ವದಂತಿಗಳೇ ಆಗಿವೆ ಎಂದು ಹೇಳಲಾಗ್ತಿದೆ.. ಇದರೊಂದಿಗೆ ಅನುಶ್ರೀ ಸಹ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.. ಹೀಗಾಗಿ ಅವರ ಫ್ಯಾನ್ಸ್‌ ಕೂಡ ಇವೆಲ್ಲವೂ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದಾರೆ..   

6 /7

ಇನ್ನು ಕನ್ನಡದ ಚೆಂದದ ಚೆಲುವೆ ಅನುಶ್ರೀ ಆಂಕರಿಂಗ್‌ನಲ್ಲಿ ಎಲ್ಲರನ್ನೂ ಮೀರಿಸಿದ್ದಾರೆ.. ಅವರಿಲ್ಲವಾದರೇ ಶೋಗಳೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್‌ ಹೆಚ್ಚಿಸಿಕೊಂಡಿದ್ದಾರೆ.. ಇದಲ್ಲದೇ ಅನು ತಮ್ಮದೇ ಆದ ಸ್ವಂತ ಯ್ಯೂಟೂಬ್‌ ಚಾನೆಲ್‌ನ್ನು ಸಹ ಹೊಂದಿದ್ದಾರೆ..   

7 /7

ಇನ್ನು ಅನುಶ್ರೀ ಅವರ ಮದುವೆ ಸಂಬಂಧಿಸಿದ ಹಲವಾರು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.. ಆದರೆ ಇದದ್ಯಾವುದಕ್ಕೂ ಅನುಶ್ರೀ ಪ್ರತಿಕ್ರಿಯೆ ನೀಡಿಲ್ಲ.. ಹೀಗಾಗಿ ಅವೆಲ್ಲವೂ ಬರೀ ವದಂತಿಗಳಾಗಿ ಉಳಿದಿದ್ದು ಸತ್ಯಕ್ಕೆ ಸಮೀಪಿಸಿಲ್ಲ..