ಕರ್ತವ್ಯಕ್ಕೆ ಮೊದಲ ಆದ್ಯತೆ, ಮಗಳನ್ನು ಲಾಕ್‌ಡೌನ್‌ ಮುಗಿದ ನಂತರ ನೋಡುವೆ ಎಂದ ಪೋಲಿಸ್...!

ಲಾಕ್ ಡೌನ್ ಮೇ 3 ಕ್ಕೆ ವಿಸ್ತರಿಸಿದ ಬೆನ್ನಲ್ಲೇ ಈಗ ಉತ್ತರ ಪ್ರದೇಶದ ಯುವ ಪೋಲಿಸ್ ಪೇದೆ ತಮಗೆ ಕರ್ತವ್ಯವೇ ಮೊದಲು ಲಾಕ್ ಡೌನ್ ಮುಗಿದ ನಂತರ ಮಗಳನ್ನು ನೋಡುವೆ ಎಂದು ಹೇಳುವ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.

Last Updated : Apr 14, 2020, 06:47 PM IST
ಕರ್ತವ್ಯಕ್ಕೆ ಮೊದಲ ಆದ್ಯತೆ, ಮಗಳನ್ನು ಲಾಕ್‌ಡೌನ್‌ ಮುಗಿದ ನಂತರ ನೋಡುವೆ ಎಂದ ಪೋಲಿಸ್...! title=
ಸಾಂದರ್ಭಿಕ ಚಿತ್ರ

ನವದೆಹಲಿ: ಲಾಕ್ ಡೌನ್ ಮೇ 3 ಕ್ಕೆ ವಿಸ್ತರಿಸಿದ ಬೆನ್ನಲ್ಲೇ ಈಗ ಉತ್ತರ ಪ್ರದೇಶದ ಯುವ ಪೋಲಿಸ್ ಪೇದೆ ತಮಗೆ ಕರ್ತವ್ಯವೇ ಮೊದಲು ಲಾಕ್ ಡೌನ್ ಮುಗಿದ ನಂತರ ಮಗಳನ್ನು ನೋಡುವೆ ಎಂದು ಹೇಳುವ ಮೂಲಕ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.

25 ವರ್ಷದ ಕಾನ್‌ಸ್ಟೆಬಲ್ ಅವರು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ 12 ದಿನಗಳ ಹಿಂದೆ ಜನಿಸಿದ ಮಗಳ ಫೋಟೋಗಳನ್ನು ನೋಡುತ್ತಾ ಈ ರೀತಿಯಾಗಿ ಹೇಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಮಕಾಂತ್ ನಗರ ತನ್ನ ಮೊದಲ ಮಗುವನ್ನು ಭೇಟಿ ಮಾಡಲು ತನ್ನ ಹಳ್ಳಿಗೆ ಮನೆಗೆ ಹೋಗದಿರಲು  ನಿರ್ಧರಿಸಿರುವ ಕುರಿತಾಗಿ ಹೀಗೆ ಹೇಳುತ್ತಾರೆ. "ನಾನು ಮನೆಗೆ ಹೋಗುವ ಬಗ್ಗೆ ಯೋಚಿಸಿದೆ, ಆದರೆ ಈ ಸಮಯದಲ್ಲಿ ನನ್ನ ಸಹೋದ್ಯೋಗಿಗಳು ಎಷ್ಟು ಮಂದಿ ನಿರಂತರ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ನಾನು ಯೋಚಿಸಿದೆ. ಹಾಗಾಗಿ ನನ್ನ ಕರ್ತವ್ಯವನ್ನು ಉಳಿಸಿಕೊಳ್ಳಲು ರಜೆ ಕೇಳಬಾರದೆಂದು ನಾನು ನಿರ್ಧರಿಸಿದೆ" ಎಂದು ಅವರು ಹೇಳುತ್ತಾರೆ.

ನಾನು ಪ್ರತಿದಿನ ನನ್ನ ಹೆಂಡತಿ ಮತ್ತು ಕುಟುಂಬದೊಂದಿಗೆ ಮಾತನಾಡುತ್ತೇನೆ. ಆದರೆ ಈ ಲಾಕ್‌ಡೌನ್ ಜಾರಿಯಲ್ಲಿರುವ ತನಕ ನಾನು ಮನೆಗೆ ಹೋಗುವುದಿಲ್ಲ ಮತ್ತು ನನ್ನ ಕರ್ತವ್ಯದ ಅವಶ್ಯಕತೆಯಿದೆ" ಎಂದು ರಾಮಕಾಂತ್ ನಗರ ಹೇಳುತ್ತಾರೆ. ಅವರು ಉತ್ತರ ಪ್ರದೇಶದ  ಇಟಾವಾ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದು, ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ ದೂರದರ್ಶನದ ಭಾಷಣದಲ್ಲಿ ಮಾರ್ಚ್ 24 ರಂದು ಘೋಷಿಸಿದ ಲಾಕ್‌ಡೌನ್ ಮೇ 3 ರವರೆಗೆ ವಿಸ್ತರಿಸಲಿದೆ ಎಂದು ಘೋಷಿಸಿದರು. ಈ ಸ್ಥಗಿತಗೊಳಿಸುವಿಕೆಯ ಆರ್ಥಿಕ ವೆಚ್ಚವು ಅಪಾರವಾಗಿದೆ.
 

Trending News