ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಸಂಜೆ 7 ಗಂಟೆಯ ನಂತರ ‘ಟೀ’ ಕುಡಿಯಬಾರದು..!

Tea benefits : ಹಿತಮಿತವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದೇ ಚಹಾವನ್ನು ಪದೇ ಪದೇ ಕುಡಿಯುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.. ಅಲ್ಲದೆ ಈ ಕೆಳಗೆ ನೀಡಿರುವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸಂಜೆ ಟೀ ಕುಡಿಯಲೇಬಾರದು..

1 /7

ಬೆಳಿಗ್ಗೆ ಎದ್ದಾಗ ಅನೇಕರು ಚಹಾ ಮತ್ತು ಕಾಫಿಯಂತಹ ಬಿಸಿ ಪಾನೀಯಗಳನ್ನು ಕುಡಿಯಲು ಇಷ್ಟ ಪಡುತ್ತಾರೆ.. ಇವು ದೇಹವನ್ನು ರಿಫ್ರೆಶ್ ಮಾಡುತ್ತವೆ ಎಂದು ಹಲವರು ನಂಬುತ್ತಾರೆ. ಇವುಗಳಲ್ಲಿರುವ ಕಾಫಿ ಬೀಜಗಳು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.. ಆದರೆ, ಹಿತಮಿತವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದೇ ಚಹಾವನ್ನು ಪದೇ ಪದೇ ಕುಡಿಯುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.  

2 /7

ತಲೆನೋವು ಮತ್ತು ಆಲಸ್ಯವನ್ನು ನಿವಾರಿಸಲು ಬೇಕಾದಾಗೆಲ್ಲ ಚಹಾವನ್ನು ಕುಡಿಯುತ್ತಾರೆ. ಆದರೆ ರಾತ್ರಿ ಟೀ ಕುಡಿಯಬೇಡಿ ಎನ್ನುತ್ತಾರೆ ವೈದ್ಯರು. ಅದು ಸಂಜೆ 7 ಗಂಟೆಯ ನಂತರ ಚಹಾ ಕುಡಿಯುವುದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.. ಇದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು..? ಬನ್ನಿ ತಿಳಿಯೋಣ..   

3 /7

ಗ್ಯಾಸ್: ಅತಿಯಾಗಿ ಟೀ ಕುಡಿಯುವುದರಿಂದ ಕೆಲವರಲ್ಲಿ ಗ್ಯಾಸ್ ಉಂಟಾಗುತ್ತದೆ. ಈ ಬಿಸಿ ಪಾನೀಯದಲ್ಲಿರುವ ಸಂಯುಕ್ತಗಳು ಅಸಿಡಿಟಿ, ಆಸಿಡ್ ರಿಫ್ಲಕ್ಸ್ ಇತ್ಯಾದಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಎದೆಯುರಿ, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿರುವವರು ರಾತ್ರಿ ವೇಳೆ ಟೀ ಕುಡಿಬೇಡಿ...  

4 /7

ನಿದ್ರಾಹೀನತೆ: ರಾತ್ರಿಯಲ್ಲಿ ಚಹಾ ಕುಡಿಯುವುದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಚಹಾದಲ್ಲಿ ಕೆಫೀನ್ ಇರುತ್ತದೆ, ಇದು ಶಕ್ತಿಯನ್ನು ಸೃಷ್ಟಿಸುತ್ತದೆ. ನೀವು ಮಲಗುವ ಮುನ್ನ ಚಹಾವನ್ನು ಸೇವಿಸಿದರೆ, ಕೆಫೀನ್ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು.    

5 /7

ನಿರ್ಜಲೀಕರಣ: ಈ ಬಿಸಿ ಪಾನೀಯವು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ನೀವು ಆಗಾಗ್ಗೆ ಚಹಾವನ್ನು ಸೇವಿಸಿದರೆ, ನಿಮ್ಮ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಇದು ಅನೇಕ ರೋಗಗಳಿಗೆ ಮೂಲ ಕಾರಣವೂ ಆಗಿರಬಹುದು. ವಿಶೇಷವಾಗಿ ರಾತ್ರಿಯಲ್ಲಿ ಚಹಾ ಕುಡಿಯುವುದರಿಂದ ಅಪಾಯ ಹೆಚ್ಚು..    

6 /7

ಹೃದಯ ಬಡಿತ: ಚಹಾದಲ್ಲಿರುವ ಕೆಫೀನ್ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಚಹಾ ಕುಡಿಯುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಇದು ನರಗಳ ಪ್ರಚೋದನೆಯನ್ನೂ ಹೆಚ್ಚಿಸುತ್ತದೆ. ಹೃದ್ರೋಗದಿಂದ ಬಳಲುತ್ತಿರುವ ಜನರಿಗೆ ಇದು ಅಪಾಯಕಾರಿ. ಹೃದಯದ ಸಮಸ್ಯೆಹೊಂದಿರುವವರು ಚಹಾವನ್ನು ಕುಡಿಯಬೇಕು ಅಂದ್ರೆ ವೈದ್ಯರನ್ನು ಸಂಪರ್ಕಿಸಿ.  

7 /7

ಸಂಜೆ ಟೀ ಕುಡಿದ ನಂತರ ಕೆಲವರಿಗೆ ರಾತ್ರಿ ಹೊಟ್ಟೆ ಉರಿ ಅಥವಾ ಅಸಿಡಿಟಿ ಸಮಸ್ಯೆ ಎದುರಾಗಬಹುದು. ವಾಸ್ತವವಾಗಿ, ಚಹಾವು ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಹೊಟ್ಟೆ ನೋವನ್ನು ಉಂಟುಮಾಡುತ್ತದೆ, ಇದರಿಂದ ನಿದ್ರಾ ಭಂಗವಾಗುತ್ತದೆ. ರಾತ್ರಿಯ ಊಟಕ್ಕೂ ಮುನ್ನ ಟೀ ಕುಡಿಯುವುದರಿಂದ ಹೊಟ್ಟೆ ಸಮಸ್ಯೆಗಳು ಉದ್ಭವಿಸಬಹುದು..