Allu arjun Pushpa 2 : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಚಿತ್ರ ಪುಷ್ಪ 2. ಸಧ್ಯ ಈ ಚಿತ್ರಕ್ಕಾಗಿವಿಶ್ವದಾದ್ಯಂತ ಲಕ್ಷಾಂತರ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಗ್ಲಿಂಪ್ಸ್, ಪೋಸ್ಟರ್, ಟೀಸರ್ ಗಳಿಂದ ನಿರೀಕ್ಷೆಗಳು ಹೆಚ್ಚಾಗ್ತಿದೆ.
ಹೌದು.. ಈ ಸಿನಿಮಾ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿದೆ. ಚಿತ್ರದ ದಿನಕ್ಕೊಂದು ಹೊಸ ಅಪ್ಡೇಟ್ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸುತ್ತಿದೆ. ಇತ್ತೀಚೆಗೆ ಟಾಲಿವುಡ್ನ ಯಂಗ್ ಹೀರೋಯಿನ್ ಶ್ರೀಲೀಲಾ ಅಲ್ಲು ಅರ್ಜುನ್ ಜೊತೆ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದು ಸಿನಿಮಾದ ಸ್ಪೆಷಲ್ ಅಟ್ರ್ಯಾಕ್ಷನ್ ಆಗಿದೆ.
ಚಿತ್ರ ನಿರ್ಮಾಪಕರು ನವೆಂಬರ್ 17 ರಂದು ಪಾಟ್ನಾದಲ್ಲಿ ಗ್ರ್ಯಾಂಡ್ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಡೆಸುವ ನಿರೀಕ್ಷೆಯಿದೆ. ಟ್ರೇಲರ್ ನಂತರ ಐಟಂ ಸಾಂಗ್ನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಲು ಚಿತ್ರ ನಿರ್ಮಾಪಕರು ಯೋಜಿಸುತ್ತಿದ್ದಾರೆಂದು ಎಂದು ಹೇಳಲಾಗುತ್ತಿದೆ... ಇತ್ತೀಚೆಗಷ್ಟೇ ಪುಷ್ಪಾ ಚಿತ್ರದ ರನ್ ಟೈಮ್ಗೆ ಸಂಬಂಧಿಸಿದ ಸುದ್ದಿಯೊಂದು ನೆಟ್ನಲ್ಲಿ ಹರಿದಾಡುತ್ತಿದೆ.
ಪುಷ್ಪ 2 ಚಿತ್ರೀಕರಣ ಬಹುತೇಕ ಮುಗಿದಿದೆ. ಈ ಸಮಯದಲ್ಲಿ, ಅಲ್ಲು ಅರ್ಜುನ್ ಪುಷ್ಪ 2 ರ ರನ್ ಟೈಮ್ ಬಗ್ಗೆ ಒಂದು ಕ್ರೇಜಿ ಸುದ್ದಿ ಇದೆ. ಇಲ್ಲಿಯವರೆಗೆ ಎಡಿಟಿಂಗ್ ಸಮಯ ಸುಮಾರು 3 ಗಂಟೆ 15 ನಿಮಿಷಕ್ಕೆ ಬಂದಿದೆ. ಜೊತೆಗೆ ಎರಡು ಹಾಡುಗಳು ಮತ್ತು ಕೆಲವು ಪ್ಯಾಚ್ ವರ್ಕ್ಗಳನ್ನು ಸೇರಿಸಬೇಕಾಗಿದೆ. ಇದನ್ನು ಕೂಡ ಸೇರಿಸಿದರೆ, 3 ಗಂಟೆ 40 ನಿಮಿಷಗಳವರೆಗೆ ತಲುಪಬಹುದು.
ಇದನ್ನೂ ಓದಿ:ಸಮಂತಾ ಮಾಜಿ ಪತಿ ನಾಗಚೈತನ್ಯ ಬಾಳಲ್ಲಿ ಮತ್ತೇ ಬಿರುಗಾಳಿ! ಶೋಭಿತಾ ಜೊತೆ ಎರಡನೇ ಮದುವೆ ನಡೆಯೋದೆ ಡೌಟ್?!
ಎಡಿಟಿಂಗ್ ನಲ್ಲಿ ಎಷ್ಟೇ ಕಟ್ ಮಾಡಿದರೂ 3 ಗಂಟೆ ಜಾಸ್ತಿಯಾದರೆ ಅದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.. ಪುಷ್ಪ 1 ಸುಮಾರು ಮೂರು ಗಂಟೆಗಳ ಅವಧಿಯೊಂದಿಗೆ ಬಂದು ದೊಡ್ಡ ಯಶಸ್ಸನ್ನು ಪಡೆದಿತ್ತು.. ಪುಷ್ಪ 2 ಕೂಡ ಪ್ರೇಕ್ಷಕರನ್ನು ರಂಜಿಸಲಿದೆ ಎಂಬುದು ಚಿತ್ರತಂಡದ ನಂಬಿಕೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ