ಬೆಳಿಗ್ಗೆ ಎದ್ದ ಕೂಡಲೇ ಈ ಒಂದು ಆರೋಗ್ಯಕರ ಪಾನೀಯವನ್ನು ಸೇವಿಸಿದರೆ,ತೂಕ ನಿಯಂತ್ರಣದಲ್ಲಿಡಬಹುದು. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಹೆಚ್ಚುವರಿ ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ.
Cinnamon water for weight loss : ಜೀವನಶೈಲಿಯ ಹೊರತಾಗಿ, ಬೊಜ್ಜು ಹೆಚ್ಚಾಗುವುದು ಅಥವಾ ದೇಹದ ತೂಕವನ್ನು ಹೆಚ್ಚಾಗುವುದು ನಾವು ಸೇವಿಸುವ ಆಹಾರವನ್ನೇ ಅವಲಂಬಿತವಾಗಿರುತ್ತದೆ. ಬೆಳಗಿನ ಉಪಾಹಾರವು ಆರೋಗ್ಯಕರವಾಗಿಲ್ಲದಿದ್ದರೆ ದೇಹವು ಶಕ್ತಿಯನ್ನು ಪಡೆಯುವುದಿಲ್ಲ. ಆಗ ಕಡುಬಯಕೆಗಳು ಹೆಚ್ಚುತ್ತವೆ. ಪದೇ ಪದೇ ಹಸಿವಾಗುವ ಕಾರಣದಿಂದಾಗಿ, ನೀವು ದಿನವಿಡೀ ಅನಾರೋಗ್ಯಕರ ಆಹಾರವನ್ನು ಸೇವಿಸುವಂತಾಗುತ್ತದೆ. ಪರಿಣಾಮ ತೂಕದಲ್ಲಿ ಗಣನೀಯವಾಗಿ ಹೆಚ್ಚಳ ಕಂಡು ಬರುತ್ತದೆ. ಇನ್ನು ರಾತ್ರಿ ಊಟದ ನಂತರ ನೇರವಾಗಿ ಮಲಗಲು ಹೋಗುವುದರಿಂದ ಬೊಜ್ಜು, ಅದರಲ್ಲಿಯೂ ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬೆಳಗಿನ ಉಪಹಾರದಂತೆ, ರಾತ್ರಿ ನಾವು ಏನನ್ನು ತಿನ್ನುತ್ತೇವೆ ಮತ್ತು ಯಾವ ಸಮಯದಲ್ಲಿ ತಿನ್ನುತ್ತೇವೆ ಎನ್ನುವುದು ನಮ್ಮ ದೇಹ ತೂಕದ ಮೇಲೆ ಬಹಳ ಪರಿಣಾಮ ಬೀರುತ್ತದೆ.
ಹಾಗೆಯೇ ಬೆಳಿಗ್ಗೆ ಎದ್ದ ಕೂಡಲೇ ಈ ಒಂದು ಆರೋಗ್ಯಕರ ಪಾನೀಯವನ್ನು ಸೇವಿಸಿದರೆ, ತೂಕ ನಿಯಂತ್ರಣದಲ್ಲಿಡಬಹುದು.ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಹೆಚ್ಚುವರಿ ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಗೆ ದಾಲ್ಚಿನ್ನಿ ಸೇವಿಸಿದರೆ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದನ್ನು ಸೇವಿಸಿದ ನಂತರ ಇಳಿಯುವ ತೂಕ ಒಂದೇ ವಾರದಲ್ಲಿ ಗಮನಕ್ಕೆ ಬರುವುದಕ್ಕೆ ಆರಂಭವಾಗುತ್ತದೆ.
ದಾಲ್ಚಿನ್ನಿ ಬಿಸಿ ಮಸಾಲೆಯಾಗಿದ್ದು, ಇದನ್ನು ಅನೇಕ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ದಾಲ್ಚಿನ್ನಿಯ ಔಷಧೀಯ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಳು ಸಹಾಯ ಮಾಡುತ್ತದೆ.
ಒಂದು ಲೋಟ ನೀರನ್ನು ಕುದಿಸಬೇಕು.ನಂತರ ಒಂದು ಚಮಚ ದಾಲ್ಚಿನ್ನಿ ಪುಡಿ ಮತ್ತು 2 ಪುಡಿಮಾಡಿದ ಕರಿಮೆಣಸನ್ನು ಆ ನೀರಿಗೆ ಸೇರಿಸಬೇಕು. ಈಗ ಈ ಮಿಶ್ರಣವನ್ನು 5 ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ.
ರುಚಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ ಮತ್ತು ರುಚಿಗೆ ತಕ್ಕಂತೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಈ ನೀರು ಬಿಸಿಯಾಗಿರುವಾಗಲೇ ಸೇವಿಸಿದರೆ ಹೆಚ್ಚು ಪರಿಣಾಮಕಾರಿ.
ಈ ನೀರನ್ನು ನಿತ್ಯ ಸೇವಿಸುತ್ತಾ ಬಂದರೆ ಒಂದೇ ವಾರದಲ್ಲಿ ಹೊಟ್ಟೆ ಕರಗುವುದು, ದೇಹ ತೂಕ ಇಳಿಯುವುದು ನಿಮ್ಮ ಗಮನಕ್ಕೆ ಬರುವುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.