ಇಂಟರ್ನೆಟ್ ನ ಈ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಸೆನ್ಸೇಷನ್ ಆಗಿ ಹೊರಹೊಮ್ಮುವುದು ಸೆಲಿಬ್ರಿಟಿಗಳಿಗಿಂತ ಕಮ್ಮಿ ಇಲ್ಲ.
ನವದೆಹಲಿ: ಇಂಟರ್ನೆಟ್ ನ ಈ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಸೆನ್ಸೇಷನ್ ಆಗಿ ಹೊರಹೊಮ್ಮುವುದು ಸೆಲಿಬ್ರಿಟಿಗಳಿಗಿಂತ ಕಮ್ಮಿ ಇಲ್ಲ. ಇಂದು ಬಿ-ಟೌನ್ ನಲ್ಲಿ ಇಂತಹ ಸಾಕಷ್ಟು ನಟಿ-ಮಣಿಯರಿದ್ದು, ಅವರ ವೃತ್ತಿ ಜೀವನದ ಬಾಗಿಲು ಸಾಮಾಜಿಕ ಮಾಧ್ಯಮಗಳ ಮೂಲಕವೇ ತೆರೆದುಕೊಂಡಿದೆ ಎಂದರೆ ತಪ್ಪಾಗಲಾರದು. ಇದೀಗ ಈ ಪಟ್ಟಿಗೆ ಆಶಿಕಾ ಪ್ರಾತ್ಟ್ ಕೂಡ ಸೇರಿಕೊಂಡಿದ್ದಾಳೆ. ಮೂಲತಃ ನ್ಯೂಜಿಲೆಂಡ್ ನಲ್ಲಿ ಮಾಡಲಿಂಗ್ ವೃತ್ತಿಯಲ್ಲಿ ತೊಡಗಿಕೊಂಡಿರುವ ಈ ನಟಿಯ ಬೋಲ್ಡ್ ನೆಸ್ ಯಾರು ಸಾಟಿಯಿಲ್ಲ ಎನ್ನಲಾಗುತ್ತಿದೆ. 201೦ ರಲ್ಲಿ ಬಿಡುಗಡೆಯಾದ ಕಿಂಗ್ ಫಿಷರ್ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡ ಆಶಿಕಾ, ತನ್ನ ವಯಸ್ಸಿನ 15 ವರ್ಷದಿಂದಲೇ ಮಾಡೆಲಿಂಗ್ ವೃತ್ತಿಯಲ್ಲಿ ಸಕ್ರೀಯಳಾಗಿದ್ದಾಳೆ. Miss and Mr Howick pageant ಸ್ಪರ್ಧೆಯಲ್ಲಿ ಆಶಿಕಾ ಎರಡನೇ ರನರ್ ಅಪ್ ಕೂಡ ಆಗಿದ್ದಾಳೆ. ನ್ಯೂಜಿಲೆಂಡ್ ನ ಜವಳಿ ಅಂಗಡಿ ಗ್ಲಾಸೇನ್ ನ ಟಿವಿ ಜಾಹಿರಾತಿನಲ್ಲಿಯೂ ಕೂಡ ಆಶಿಕಾ ಕಾಣಿಸಿಕೊಂಡಿದ್ದಾಳೆ. ಸದ್ಯ ಮ್ಯಾಗಜಿನ್ ಮಾಡೆಲ್ ಗಳ ಟಾಪ್ ಮಾಡೆಲ್ ಗಳ ಪಟ್ಟಿಯಲ್ಲಿ ಆಶಿಕಾ ಕೂಡ ಶಾಮೀಲಾಗಿದ್ದಾಳೆ. Vogue India ಹಾಗೂ Femina ಗಳಂತಹ ಟಾಪ್ ಮ್ಯಾಗಜಿನ್ ಗಳ ಕವರ್ ಪೇಜ್ ಗಳಲ್ಲಿಯೂ ಕೂಡ ಆಶಿಕಾ ಕಾಣಿಸಿಕೊಂಡಿದ್ದಾರೆ. ಆಶಿಕಾ ಅವರ ಈ ಎಲ್ಲ ಭಾವಚಿತ್ರಗಳನ್ನು ಅವಳ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆದುಕೊಳ್ಳಲಾಗಿದೆ.