ಬೇಡಿಕೆಯ ಹೆಚ್ಚಳದಿಂದ ಚಿನ್ನ ದುಬಾರಿಯಾಗುತ್ತಿರುತ್ತದೆ.ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಮದುವೆ ಸೀಸನ್ನಲ್ಲಿ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.
Drop in Gold Price : ಇದೀಗ ಮದುವೆಯ ಸೀಸನ್ ನಡೆಯುತ್ತಿದೆ.ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದರೂ ಈ ಬಾರಿ ಬಂಗಾರದ ದರದಲ್ಲಿ ಇಳಿಕೆ ಕಂಡು ಬಂದಿದೆ. ಮದುವೆ ಸೀಸನ್ನಲ್ಲಿ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸಾಮಾನ್ಯವಾಗಿ ಮದುವೆ ಸೀಸನ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚುತ್ತದೆ. ಬೇಡಿಕೆಯ ಹೆಚ್ಚಳದಿಂದ ಚಿನ್ನ ದುಬಾರಿಯಾಗುತ್ತಿರುತ್ತದೆ.ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಮದುವೆ ಸೀಸನ್ನಲ್ಲಿ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.
ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಮದುವೆ ಸೀಸನ್ ನಲ್ಲಿ ದಿನೇ ದಿನೇ ಕುಸಿಯುತ್ತಿದೆ. ಬಂಗಾರದ ಬೆಲೆಯಲ್ಲಿ ಒಂದೇ ಏಟಿಗೆ 1,630 ರೂ.ಯಷ್ಟು ಇಳಿಕೆ ಕಂಡಿದೆ. ಇದೀಗ ಚಿನ್ನದ ಬೆಲೆ 10 ಗ್ರಾಂಗೆ 75451 ರುಪಾಯಿ ಆಗಿದೆ.
24 ಕ್ಯಾರೆಟ್ ನಿಂದ 18 ಕ್ಯಾರೆಟ್ ವರೆಗಿನ ಬೆಲೆಯನ್ನು ಗಮನಿಸುವುದಾದರೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 7, 723 22 ಕ್ಯಾರೆಟ್ ಚಿನ್ನದ ಬೆಲೆ 7,079, 18 ಕ್ಯಾರೆಟ್ ಚಿನ್ನದ ಬೆಲೆ 5,792 ಆಗಿದೆ.
ಚಿನ್ನದ ಬೆಲೆಯನ್ನು ಹೋಲಿಕೆ ಮಾಡಿ ನೋಡುವುದಾದರೆ ಅಕ್ಟೋಬರ್ 30 ರಂದು 10 ಗ್ರಾಂ ಚಿನ್ನದ ಬೆಲೆ 79,681 ರೂ. ಆಗಿತ್ತು. ಇದೇ ದಿನಾಂಕದಂದು ಬೆಳ್ಳಿಯ ಬೆಲೆ ಕೆಜಿಗೆ 98340 ರೂ.ತಲುಪಿತ್ತು.
ಅಂದರೆ, ಸುಮಾರು 25 ದಿನಗಳಲ್ಲಿ ಚಿನ್ನದ ಬೆಲೆ 4,230 ರೂಪಾಯಿಯಷ್ಟು ಅಗ್ಗವಾಗಿದೆ. ಬೆಳ್ಳಿ ಬೆಲೆ 10,240 ರೂ.ವರೆಗೆ ಕುಸಿದಿದೆ. ಮದುವೆಯ ಸೀಸನ್ ನಲ್ಲಿ ಬಂಗಾರದ ಬೆಲೆ ಇಳಿದಿರುವುದು ನಿಜಕ್ಕೂ ಸಂತಸದ ವಿಚಾರ.
ಇನ್ನು ಫುಚರ್ ಮಾರುಕಟ್ಟೆಯನ್ನು ಗಮನಿಸುವುದಾದರೆ ಹಳದಿ ಲೋಹದ ಬೆಲೆಯಲ್ಲಿ ಇಳಿಕೆಯಾಗಿದೆ.
ಇನ್ನು ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್ನ ಅಧಿಕೃತ ವೆಬ್ಸೈಟ್ ibjarates.com ಅನ್ನು ಸಂಪರ್ಕಿಸಬಹುದು.