rohit sharma: ಗಬ್ಬಾ ಟೆಸ್ಟ್ ನಲ್ಲೂ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ಮುಂದುವರಿದಿದೆ. ಕೇವಲ 10 ರನ್ ಗಳಿಸಿ ರೋಹಿತ್ ನಿರ್ಗಮಿಸಿದ್ದರಿಂದ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಹೊರಬಂದ ಫೋಟೋವೊಂದು ಸಂಚಲನ ಮೂಡಿಸಿದೆ. ಈ ಫೋಟೋ ರೋಹಿತ್ ಶರ್ಮಾ ಟೆಸ್ಟ್‌ನಿಂದ ನಿವೃತ್ತಿಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿದೆ.
ಇದನ್ನೂ ಓದಿ-ಜೈಲಿನಿಂದ ಬಂದ ಚಪ್ಪಲಿ ಬಿಟ್ಟು ಹೊಸ ಚಪ್ಪಲಿ ಹಾಕಿ ಮನೆಗೆ ಹೋದ ಪವಿತ್ರ ಗೌಡ! ಇದೇನಾ ಕಾರಣ?
ಹೌದು ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಶರ್ಮಾ ತಮ್ಮ ತಂಡವನ್ನು ಕಠಿಣ ಪರಿಸ್ಥಿತಿಯಿಂದ ಪಾರುಮಾಡುವಲ್ಲಿ ಮತ್ತೊಮ್ಮೆ ಸೋತಿದ್ದಾರೆ... ಅಲ್ಪ ರನ್ ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ತಲುಪಿದರು. ಆದರೆ, ಅದಾದ ಬಳಿಕ ಹೊರಬಿದ್ದ ಫೋಟೋವೊಂದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸುತ್ತಿದೆ. ಈ ಫೋಟೋ ನಂತರ ರೋಹಿತ್ ನಿವೃತ್ತಿ ಬಗ್ಗೆ ಚರ್ಚೆ ಜೋರಾಗಿದೆ.
The worrying part was Rohit Sharma never looked like surviving the spell from Pat Cummins. Worked over & knocked out, his gloves now left lying in front of the dugout #AusvInd pic.twitter.com/u1WKIjdMKd
— Bharat Sundaresan (@beastieboy07) December 17, 2024
ಗಬ್ಬಾ ಟೆಸ್ಟ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಅವರು 27 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿದರು ಮತ್ತು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರಿಗೆ ಕ್ಯಾಚ್ ನೀಡಿದರು. ನಂತರ, ಪೆವಿಲಿಯನ್ ಕಡೆಗೆ ಹೋಗುವಾಗ, ಅವರು ತಮ್ಮ ಹ್ಯಾಂಡ್‌ಗ್ಲೌಸ್ ತೆಗೆದು ಡಗ್ಔಟ್ನಲ್ಲಿ ಎಸೆದರು. ಅವರ ಎರಡೂ ಕೈಗವಸುಗಳು ಡಗ್‌ಔಟ್‌ನಲ್ಲಿ ಬುಲೆಟಿನ್ ಬೋರ್ಡ್‌ನ ಹಿಂದೆ ಬಿದ್ದಿದ್ದವು. ಇದರೊಂದಿಗೆ ರೋಹಿತ್ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಬಹುದು ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ಜನರು ಭಾವಿಸುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.