Reason for Shishir Shastri Elimination: ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಕೊನೆಯ ಹಂತಕ್ಕೆ ತಲುಪಿದ್ದು, ಸದಸ್ಯರ ಸಂಖ್ಯೆ 10ಕ್ಕೆ ಇಳಿಕೆಯಾಗಿದೆ. ಈ ಬೆನ್ನಲ್ಲೇ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದ್ದು, ಕಳೆದ ವಾರ ಶಿಶಿರ್ ಮತ್ತು ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರಹೋಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಕೊನೆಯ ಹಂತಕ್ಕೆ ತಲುಪಿದ್ದು, ಸದಸ್ಯರ ಸಂಖ್ಯೆ 10ಕ್ಕೆ ಇಳಿಕೆಯಾಗಿದೆ. ಈ ಬೆನ್ನಲ್ಲೇ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದ್ದು, ಕಳೆದ ವಾರ ಶಿಶಿರ್ ಮತ್ತು ಗೋಲ್ಡ್ ಸುರೇಶ್ ದೊಡ್ಮನೆಯಿಂದ ಹೊರಹೋಗಿದ್ದಾರೆ.
ಶಿಶಿರ್ ಎಲಿಮಿನೇಟ್ ಆದ ಬೆನ್ನಲ್ಲೇ ಭಾರೀ ಚರ್ಚೆ ಶುರುವಾಗಿತ್ತು. ಫ್ಯಾನ್ ಬೇಸ್ ಇದ್ದರೂ ಕೂಡ ಯಾಕೆ ಔಟ್ ಆಗಿದ್ದರು ಎಂಬ ಅನುಮಾನ ಮೂಡಿತ್ತು. ಆದರೆ ಇದೀಗ ಭವ್ಯಾ ಆಡಿರುವ ಒಂದು ಮಾತು ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಶಿಶಿರ್ ಮತ್ತು ಐಶ್ವರ್ಯಾ ಬಿಗ್ ಬಾಸ್ನಲ್ಲಿ ತುಂಬಾ ಕ್ಲೋಸ್ ಆಗಿದ್ದರು. ಆದರೆ ಇದೀಗ ಶಿಶಿರ್ ಔಟ್ ಆಗಿ ಹೊರಬಂದಿದ್ದು, ಐಶ್ವರ್ಯಾ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಶಿಶಿರ್ ಅವರನ್ನು ನಾಮಿನೇಟ್ ಮಾಡಿದವರ ಮೇಲೆ ಐಶ್ವರ್ಯಾ ಸಿಟ್ಟಿಗೆದ್ದಿದ್ದಾರೆ.
ಶಿಶಿರ್ ಹೊರಹೋಗುತ್ತಿದ್ದಂತೆ ಐಶ್ವರ್ಯಾ ಜೋರಾಗಿ ಕಿರುಚಾಡಿದ್ದರು. "ಶಿಶಿರ್ ಮೇಲೆ ಇಲ್ಲಸಲ್ಲದ ಅಪವಾದ ಎಲ್ಲ ಹಾಕಿದ್ದೀಯಾ. ನೀನೇ ಟಾರ್ಗೆಟ್ ಮಾಡಿದ್ದು" ಎಂದು ಐಶ್ವರ್ಯಾ, ಭವ್ಯಾ ಎದುರು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಭವ್ಯಾ, ‘ನೀನೆ ಶಿಶಿರ್ನ ಟಾರ್ಗೆಟ್ ಮಾಡಿ ಗೇಟ್ ಎದುರು ತಂದು ನಿಲ್ಲಿಸಿದ್ದು’ ಎಂದು ಆರೋಪಿಸಿದ್ದಾರೆ.
ಭವ್ಯಾ ಗೌಡ ಈ ರೀತಿ ಹೇಳುವುದಕ್ಕೂ ಒಂದು ಕಾರಣ ಇದೆ. ಮನೆಯಲ್ಲಿ ಟಾರ್ಗೆಟ್ ಮಾಡಿ ನಾಮಿನೇಷನ್ ಮಾಡಬೇಕು ಎಂಬ ಹೇಳಿಕೆಯನ್ನು ಐಶ್ವರ್ಯಾ ೀ ಹಿಂದೆ ಹೇಳಿದ್ದರು. ಅದರಂತೆ ಐಶ್ವರ್ಯಾ, ಮೋಕ್ಷಿತಾ ಅವರು ತ್ರಿವಿಕ್ರಂ ಹಾಗೂ ಭವ್ಯಾ ಅವರನ್ನು ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದರು. ಈ ಕಾರಣಕ್ಕೆ ಭವ್ಯಾ ಈ ವೇಳೆ ಟಾಂಟ್ ಹೊಡೆದು ಮಾತನಾಡಿದ್ದಾರೆ.