ಉಪ್ಪಿಗೆ ಆಘಾತ..!! ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ UI Movie HD print ಲೀಕ್‌..

UI movie hd print leak : ಹಲವು ನಿರೀಕ್ಷೆಗಳ ನಡುವೆ ಡಿ.20ರಂದು ಬಿಡುಗಡೆಯಾದ ಉಪೇಂದ್ರ ನಿರ್ದೇಶಿಸಿ ನಟಿಸಿರುವ UI Movie ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಉಪ್ಪಿ ಸಿನಿಮಾಗೂ ಪೈರಸಿ ಭೂತದ ಕಾಟ ಶುರುವಾಗಿದ್ದು, ನಿರ್ಮಾಪಕರ ತಲೆ ಬಿಸಿಯಾಗಿದೆ.. 

Written by - Krishna N K | Last Updated : Dec 21, 2024, 01:29 PM IST
    • ಡಿ.20ರಂದು ಬಿಡುಗಡೆಯಾದ ಉಪೇಂದ್ರ ನಿರ್ದೇಶಿಸಿ ನಟಿಸಿರುವ UI Movie
    • UI Movie ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆ
    • ಉಪ್ಪಿ ಸಿನಿಮಾಗೂ ಪೈರಸಿ ಭೂತದ ಕಾಟ ಶುರುವಾಗಿದೆ.
ಉಪ್ಪಿಗೆ ಆಘಾತ..!! ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ UI Movie HD print ಲೀಕ್‌.. title=

UI Movie : ಸಾಮಾನ್ಯವಾಗಿ ಸಿನಿಮಾ ಮಾಡುವಾಗ ನಿರ್ದೇಶಕರು, ನಿರ್ಮಾಪಕರು, ಹೀರೋಗಳು ಹಾಗೂ ಚಿತ್ರತಂಡ ಬಹಳ ಎಚ್ಚರಿಕೆಯಿಂದ ಪ್ಲಾನ್ ಮಾಡುತ್ತಾರೆ. ಅದರಲ್ಲೂ ಸಿನಿಮಾದ ಬಗ್ಗೆ.. ಒಂದು ಚಿಕ್ಕ ಅಪ್ಡೇಟ್ ಕೂಡ ಲೀಕ್ ಆಗದಂತೆ ನೋಡಿಕೊಳ್ಳುತ್ತಾರೆ.. ಪ್ರೇಕ್ಷಕರು ಸಹ ಸಿನಿಮಾದ ಕುರಿತು ಅಧಿಕೃತ ಘೋಷಣೆಯವರೆಗೂ ಕಾಯುತ್ತಾರೆ.. 

ಆದರೆ ಕೆಲವು ಬಾರಿ ಅನಿರೀಕ್ಷಿತ ಕಾರಣಗಳಿಂದ ಅಥವಾ ಇತರರಿಂದ ಸಿನಿಮಾದ ವಿಡಿಯೋಗಳು, ಫೋಟೋಗಳು ಸೋರಿಕೆಯಾಗುತ್ತವೆ. ಈ ರೀತಿ ಸಣ್ಣಪುಟ್ಟ ಫೋಟೋಗಳು, ದೃಶ್ಯಗಳು ಲೀಕ್ ಆದರೆ ಪರವಾಗಿಲ್ಲ.. ಆದರೆ ಅದ್ಧೂರಿ ಬಜೆಟ್ಟಿನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ತೆರೆಕಾಣುವ ಸಿನಿಮಾಗಳು ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್‌ ಆದ್ರೆ ನಿರ್ಮಾಪಕರ ಪರಿಸ್ಥಿತಿ ಹೇಗಿರುತ್ತೆ ಹೇಳಿ..

ಇದನ್ನೂ ಓದಿ:ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದ ಕಂಟೆಸ್ಟೆಂಟ್ ಇವರು!

ಇದೀಗ ಉಪೇಂದ್ರ ಅವರ ಸಿನಿಮಾ UI ಕೂಡ ಇಂತಹದೊಂದು ಸಮಸ್ಯೆ ಎದುರಿಸುತ್ತಿದೆ. ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದೆ.. ಅಲ್ಲದೆ ಯೋಚಿಸುವಂತೆ ಮಾಡುತ್ತಿದೆ.. ಸಿನಿಮಾ ನೋಡಿದ ಎಷ್ಟೋ ಜನರು ಇನ್ನೊಂದು ಬಾರಿ ನೋಡುವುದಾಗಿ ಹೇಳುತ್ತಿದ್ದಾರೆ..

UI ಪೈರಸಿ ವೆಬ್‌ಸೈಟ್‌ಗಳಾದ Movierulez, Tamilrockerz, Filmyzilla, I Bomma, Moviesda, Tamilyogi, Tamil Blasters ಮತ್ತು ಕೆಲವು ಇತರ ಟೆಲಿಗ್ರಾಮ್ ಚಾನಲ್‌ಗಳು ಸೇರಿದಂತೆ ಅನೇಕ ವೆಬ್‌ಸೈಟ್‌ಗಳಲ್ಲಿ ವಿಶೇಷವಾಗಿ 1080p, 720p, 480p ನಲ್ಲಿ ಉಚಿತವಾಗಿ ಲಭ್ಯವಿದೆ. ಆದ್ರೆ ದಯವಿಟ್ಟು ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ ಎನ್ನವುದು ನಮ್ಮ ಮನವಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News