Robin Utthappa Wife: ರಾಬಿನ್ ಉತ್ತಪ್ಪ ಅವರು ನಿವೃತ್ತ ಭಾರತೀಯ ಕ್ರಿಕೆಟಿಗರಾಗಿದ್ದಾರೆ.. ಅವರು ತಮ್ಮ ತಂಡಕ್ಕೆ ವಿಕೆಟ್-ಕೀಪರ್-ಬ್ಯಾಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ರಾಬಿನ್ ತಮ್ಮ ಕೊನೆಯ ಐಪಿಎಲ್‌ನಲ್ಲಿ ದೇಶೀಯ ಮಟ್ಟದಲ್ಲಿ ಕೇರಳ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ಪ್ರತಿನಿಧಿಸಿದರು.
ಮಾಜಿ ಕ್ರಿಕೆಟಿಗ ಉತ್ತಪ್ಪ ಅವರು 2007 ರ T20I ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ಸೆಪ್ಟೆಂಬರ್ 14, 2022 ರಂದು, ಅವರು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.
ಇನ್ನು ರಾಬಿನ್ ಉತ್ತಪ್ಪ ಅವರ ವೈಯಕ್ತಿಕ ವಿಚಾರಕ್ಕೆ ಬಂದರೇ ಇವರು ಮಾಜಿ ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ಅವರನ್ನು ವಿವಾಹವಾಗಿದ್ದಾರೆ. ಶೀತಲ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರಾಗಿದ್ದು, 9 ನೇ ವಯಸ್ಸಿನಲ್ಲಿ ಟೆನಿಸ್ ಆಡಲು ಪ್ರಾರಂಭಿಸಿದರು.
ಶೀತಲ್ ಹಲವಾರು ಟೆನಿಸ್ ಪಂದ್ಯಗಳನ್ನು ಆಡಿದದು, ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಶೀತಲ್ ಅವರು ತಮ್ಮ 33 ನೇ ವಯಸ್ಸಿನಲ್ಲಿ ಆಟದಿಂದ ನಿವೃತ್ತರಾದರು.
ಶೀತಲ್ ತಮ್ಮ ವೃತ್ತಿಜೀವನದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್ (ITF) ನಲ್ಲಿ 5 ಸಿಂಗಲ್ಸ್ ಮತ್ತು 13 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದರು. ಪ್ರಸ್ತುತ, ಅವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ತಮ್ಮ ನಿವೃತ್ತ ಜೀವನವನ್ನು ಆನಂದಿಸುತ್ತಿದ್ದಾರೆ.
ಶೀತಲ್ ಅವರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, 102K ಫಾಲೋವರ್ಸ್ ಹೊಂದಿದ್ದಾರೆ.. ಆಗ್ಗಾಗೆ ಫಿಟ್‌ನೆಸ್-ವರ್ಕೌಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ..
ಶೀತಲ್ ಹಾಗೂ ರಾಬಿನ್ ಅವರ ಲವ್ ಸ್ಟೋರಿ ಬಗ್ಗೆ ಮಾತನಾಡುವುದಾದರೇ ಇಬ್ಬರೂ 5-6 ವರ್ಷಗಳ ಡೇಟಿಂಗ್ ಮಾಡಿ ಬಳಿಕ ಮದುವೆಯಾಗಲು ಯೋಚಿಸಿ.. ಬಳಿಕ ತಮ್ಮ ಹುಟ್ಟುಹಬ್ಬದಂದೇ ಶೀತಲ್ ಅವರಿಗೆ ಪ್ರಪೋಸ್ ಮಾಡಿದದ್ದರಂತೆ.. ಇದಕ್ಕೆ ಅವರು ಕೂಡಲೇ ಗ್ರೀನ್ ಸಿಗ್ನಲ್ ಕೂಡಾ ಕೊಟ್ಟಿದ್ದರಂತೆ..
ರಾಬಿನ್ ಉತ್ತಪ್ಪ ಅವರ ಪತ್ನಿ ಹಿಂದೂ ಹಿನ್ನೆಲೆಯಿಂದ ಬಂದಿದ್ದರೂ, ಇಬ್ಬರೂ ಕ್ರಿಶ್ಚಿಯನ್ ಸಂಪ್ರದಾಯಗಳನ್ನು ಅನುಸರಿಸಿ 3 ಮಾರ್ಚ್ 2016 ರಂದು ವಿವಾಹವಾದರು. ದಂಪತಿಗಳು ಮದುವೆಯಾಗಿ 8 ವರ್ಷಗಳು ಕಳೆದಿವೆ. ಮದುವೆಯಲ್ಲಿ ಜೂಹಿ ಚಾವ್ಲಾ ಸೇರಿದಂತೆ ಐಪಿಎಲ್ ಪ್ರಪಂಚದ ಬಹಳಷ್ಟು ಸೆಲೆಬ್ರಿಟಿಗಳು ಭಾಗವಹಿಸಿದ್ದರು..
ರಾಬಿನ್ ಉತ್ತಪ್ಪ ಮತ್ತು ಶೀತಲ್ ಗೌತಮ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗ (ನೀಲೆ ನೋಲನ್ ಉತ್ತಪ್ಪ) ಅಕ್ಟೋಬರ್ 10, 2017 ರಂದು ಜನಿಸಿದರು ಮತ್ತು ಅವರ ಮಗಳು (ಟ್ರಿನಿಟಿ ಥಿಯಾ ಉತ್ತಪ್ಪ) ಜುಲೈ 13, 2022 ರಂದು ಜನಿಸಿದರು.