Lucky Female Zodiac Sign: ವ್ಯಕ್ತಿಯ ರಾಶಿ ಚಿಹ್ನೆಯನ್ನು ನೋಡುವ ಮೂಲಕ ಪ್ರತಿಯೊಂದನ್ನು ತಿಳಿಯಬಹುದು. ಇದರಲ್ಲಿ ಮುಖ್ಯವಾಗಿ ಗುಣವೂ ಸೇರಿದೆ. ಯಾವುದೇ ಪುರುಷನು ತಾನು ವಿವಾಹವಾಗುವ ಹುಡುಗಿ ಸುಂದರವಾಗಿರಬೇಕೆಂದು ಆಶಿಸುತ್ತಾನೆ. ಅದಕ್ಕೂ ಮಿಕ್ಕಿ ಉತ್ತಮ ಗುಣನಡತೆ ಹೊಂದಿದವಳಾಗಿರಬೇಕೆಂದು ಇಚ್ಛಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವ್ಯಕ್ತಿಯ ರಾಶಿ ಚಿಹ್ನೆಯನ್ನು ನೋಡುವ ಮೂಲಕ ಪ್ರತಿಯೊಂದನ್ನು ತಿಳಿಯಬಹುದು. ಇದರಲ್ಲಿ ಮುಖ್ಯವಾಗಿ ಗುಣವೂ ಸೇರಿದೆ. ಯಾವುದೇ ಪುರುಷನು ತಾನು ವಿವಾಹವಾಗುವ ಹುಡುಗಿ ಸುಂದರವಾಗಿರಬೇಕೆಂದು ಆಶಿಸುತ್ತಾನೆ. ಅದಕ್ಕೂ ಮಿಕ್ಕಿ ಉತ್ತಮ ಗುಣನಡತೆ ಹೊಂದಿದವಳಾಗಿರಬೇಕೆಂದು ಇಚ್ಛಿಸುತ್ತಾನೆ.
ಹೀಗಿರುವಾಗ ಒಂದಷ್ಟು ರಾಶಿಗಳ ಹೆಣ್ಣುಮಕ್ಕಳು ಗಂಡನ ಪಾಲಿಗೆ ಅದೃಷ್ಟದೇವತೆಗಳಾಗಿರುತ್ತಾರೆ. ಅಂತಹ ರಾಶಿಯ ಹೆಣ್ಣು ಮಕ್ಕಳು ಗಂಡನಿಗೆ ಉತ್ತಮ ಜೀವನ ಸಂಗಾತಿಯಾಗುವುದು ಮಾತ್ರವಲ್ಲದೆ, ಮನೆಯಲ್ಲಿ ಅವರ ಉಪಸ್ಥಿತಿಯು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಗೆ ಕಾಲಿಡುತ್ತಿದ್ದಂತೆ ಗಂಡನಿಗೆ ಶ್ರೀಮಂತಿಕೆಯನ್ನೇ ತರುತ್ತಾರೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.
ವೃಷಭ ರಾಶಿ: ಈ ರಾಶಿಯ ಹುಡುಗಿಯರು ತುಂಬಾ ಜವಾಬ್ದಾರಿಯುತರು. ಹಣಕಾಸಿನ ವಿಷಯಗಳ ಬಗ್ಗೆ ಬಹಳ ಜ್ಞಾನವನ್ನು ಹೊಂದಿರುತ್ತಾರೆ. ಹಣವನ್ನು ನಿಭಾಯಿಸುವ ಕಲೆಯಲ್ಲಿ ಬಹಳ ಪ್ರವೀಣರು. ಇವರಿದ್ದ ಮನೆ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.
ಕಟಕ ರಾಶಿ: ಈ ರಾಶಿಯ ಹುಡುಗಿಯರನ್ನು ತುಂಬಾ ಕಾಳಜಿಯುಳ್ಳವರು ಎಂದು ಪರಿಗಣಿಸಲಾಗುತ್ತದೆ. ತನ್ನ ಗಂಡನನ್ನು ಸರ್ವಸ್ವವೆಂದೇ ಪ್ರೀತಿಸುತ್ತಾರೆ ಇವರು. ಇನ್ನು ಸಂಗಾತಿ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಈ ರಾಶಿಯ ಹೆಣ್ಣಿನಿಂದಾಗಿ ಗಂಡ ಅಪಾರ ಸಂಪತ್ತಿನ ಒಡೆಯನಾಗುತ್ತಾನೆ.
ಸಿಂಹ ರಾಶಿ: ಈ ರಾಶಿಯ ಹುಡುಗಿಯರು ಹೆಚ್ಚಿನ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ತನ್ನ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವರಾಗಿರುತ್ತಾರೆ. ಈ ಅಭ್ಯಾಸದಿಂದಾಗಿ ಅತ್ತೆಯ ಮನೆಯಲ್ಲಿ ಎಲ್ಲರಿಗೂ ಪ್ರಿಯವಾಗುತ್ತಾರೆ. ಅವರಿಗೆ ನಾಯಕತ್ವದ ಸಾಮರ್ಥ್ಯವಿದ್ದು, ತನ್ನ ಗಂಡನ ಪ್ರತಿಯೊಂದು ಆಸೆಯನ್ನು ಪೂರೈಸಲು ಸಹಾಯ ಮಾಡುತ್ತಾಳೆ.
ಕುಂಭ ರಾಶಿ: ಈ ರಾಶಿಯ ಹುಡುಗಿಯರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಇತರರಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಬೇಕೆಂಬ ಬಯಕೆ ಅವರ ಹೃದಯದಲ್ಲಿ ಯಾವಾಗಲೂ ಇರುತ್ತದೆ. ಅದರಲ್ಲಿ ಯಶಸ್ಸನ್ನೂ ಸಾಧಿಸುತ್ತಾರೆ. ಇನ್ನು ಇವರಿಗೆ ಇತರರಿಗೆ ಸಹಾಯ ಮಾಡಬೇಕೆಂಬ ಹಂಬಲವಿರುತ್ತದೆ. ತನ್ನ ಸಂಗಾತಿಯನ್ನು ತುಂಬಾ ಪ್ರೀತಿಸುವ ಈ ರಾಶಿಯ ಯುವತಿಯರು, ಪ್ರತಿ ಸಮಯದಲ್ಲೂ ಬೆಂಬಲವಾಗಿರುತ್ತಾರೆ.
ಮೀನ ರಾಶಿ: ಈ ರಾಶಿಯ ಹುಡುಗಿಯರು ರೋಮ್ಯಾಂಟಿಕ್ ಆಗಿರುತ್ತಾರೆ. ಜೊತೆಗೆ ಕೊಂಚ ಎಮೋಷನಲ್ ವ್ಯಕ್ತಿತ್ವದವರು. ತನ್ನ ಕನಸಿನಂತೆ ಚೆನ್ನಾಗಿ ಬದುಕುವವರಾಗಿರುತ್ತಾರೆ. ಈ ರಾಶಿಯ ಹುಡುಗಿ ಯಾವಾಗಲೂ ತನ್ನ ಸಂಗಾತಿಯನ್ನು ಬೆಂಬಲಿಸುತ್ತಾಳೆ. ಹಣದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅವರ ಆಲೋಚನೆಗಳು ಅನನ್ಯವಾಗಿರುತ್ತವೆ.
ಸೂಚನೆ: ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯದ ನಿಯಮಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.