ಹೊಸ ಬ್ರಹ್ಮಾಂಡ ಪತ್ತೆ ಹಚ್ಚಿನ NASAದ ANITA, ಇಲ್ಲಿ ಸಮಯ ಹಿಮ್ಮುಖವಾಗಿ ಚಲಿಸುತ್ತಂತೆ

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸಮಾನಾಂತರ  ಬ್ರಹ್ಮಾಂಡವನ್ನು ಕಂಡುಹಿಡಿದಿದೆ. ಅಂದರೆ, ನಮ್ಮ ಬ್ರಹ್ಮಾಂಡದ ನೆರೆಹೊರೆಯಲ್ಲಿ ಮತ್ತೊಂದು  ಬ್ರಹ್ಮಾಂಡವಿದೆ ಎಂದು ಹೇಳಿದೆ.

Last Updated : May 21, 2020, 09:37 PM IST
ಹೊಸ ಬ್ರಹ್ಮಾಂಡ ಪತ್ತೆ ಹಚ್ಚಿನ NASAದ ANITA, ಇಲ್ಲಿ ಸಮಯ ಹಿಮ್ಮುಖವಾಗಿ ಚಲಿಸುತ್ತಂತೆ title=

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸಮಾನಾಂತರ  ಬ್ರಹ್ಮಾಂಡವನ್ನು ಕಂಡುಹಿಡಿದಿದೆ. ಅಂದರೆ, ನಮ್ಮ ಬ್ರಹ್ಮಾಂಡದ ನೆರೆಹೊರೆಯಲ್ಲಿ ಮತ್ತೊಂದು  ಬ್ರಹ್ಮಾಂಡವಿದೆ ಎಂದು ಹೇಳಿದೆ. ಆದರೆ ಇಲ್ಲಿ ಸಮಯ ಉಲ್ಟಾ ಚಲಿಸುತ್ತದೆ. ಪ್ಯಾರೆಲಲ್ ಯೂನಿವರ್ಸ್ ಬಗ್ಗೆ ಅಂಟಾರ್ಕ್ಟಿಕಾದಲ್ಲಿ ಒಂದು ಸಂಶೋಧನೆಯೊಂದನ್ನು ನಡೆಸಲಾಗಿದೆ. ಇದರ ಆಧಾರದ ಮೇಲೆ, ನಾಸಾ ವಿಜ್ಞಾನಿಗಳು ತಾವು ಮತ್ತೊಂದು  ಬ್ರಹ್ಮಾಂಡವನ್ನು ಕಂಡುಹಿಡಿದಿದ್ದೇವೆ ಎಂದು ವಾದ ಮಂಡಿಸಿದ್ದಾರೆ.

ದೀರ್ಘ ಕಾಲದಿಂದ ಹಲವು ವಿಜ್ಞಾನಿಗಳು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಆದರೆ, ಕೆಲವು ವಿಜ್ಞಾನಿಗಳು ಈ ವಾದವನ್ನು ತಳ್ಳಿಹಾಕಿದ್ದಾರೆ. ಅಂಟಾರ್ಕ್ಟಿಕಾದ ವಿಜ್ಞಾನಿಗಳು ನಡೆಸಿರುವ ಪ್ರಯೋಗವು ಮತ್ತೊಂದು ಬ್ರಹ್ಮಾಂಡದ ಅಂಶವನ್ನು ಸಾಬೀತುಪಡಿಸಲು ಯತ್ನಿಸಿದೆ. ಇದಕ್ಕಾಗಿ ವಿಜ್ಞಾನಿಗಳು Antarctic Impulsive Transient Antenna - ANITA ಅನ್ನು ಒಂದು ಬೃಹತ್ ಬಲೂನಿನ ಸಹಾಯದಿಂದ ಎತ್ತರಕ್ಕೆ ತಲುಪಿಸಿದ್ದಾರೆ.

ಈ ಬಲೂನ್ ಅನ್ನು ಒಳಗಾಳಿ ಹೆಚ್ಚಾಗಿರುವ ಎತ್ತರಕ್ಕೆ ಏರಿಸಲಾಗಿದೆ. ಅಲ್ಲಿ ಯಾವುದೇ ರೇಡಿಯೋ ಶಬ್ದವಿರುವುದಿಲ್ಲ ಹಾಗೂ ಶಕ್ತಿಯುತವಾದ ಕಣಗಳು ಬಾಹ್ಯಾಕಾಶದಿಂದ ಭೂಮಿಯತ್ತ ಬರುತ್ತಲೇ ಇರುತ್ತವೆ.  ಈ ಕಣಗಳು ಭೂಮಿಯ ಮೇಲಿರುವ ಕಣಗಳಿಗಿಂತ ಹಲವು ಲಕ್ಷ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ ಎನ್ನಲಾಗಿದೆ.

ಶೂನ್ಯಕ್ಕೆ ಹತ್ತಿರದಲ್ಲಿರುವ ಮತ್ತು ಉಪ ಪರಮಾಣು ನ್ಯೂಟ್ರಿನೊಗಳಂತೆ ಕಡಿಮೆ ಶಕ್ತಿಯುಳ್ಳ ಈ ಕಣಗಳು ಇತರ ಯಾವುದೇ ಕನಗಳಿಗೆ ಘರ್ಷಿಸದೇ ಭೂಮಿಯ ಮೂಲಕ ಹಾದುಹೋಗುತ್ತವೆ. ಆದರೆ, ಎಚ್ಚಿನ ಶಕ್ತಿಯ ಕಣಗಳು ಮಾತ್ರ ಭೂಮಿಯ ಘನ ದ್ರವ್ಯದ ಕಣಗಳಿಗೆ ಡಿಕ್ಕಿ ಹೊಡೆಯುತ್ತವೆ.

ಬಾಹ್ಯಾಕಾಶದಿಂದ ಕೆಳಗೆ ಬರುವಾಗ ಮಾತ್ರ ಈ ಹೆಚ್ಚಿನ ಶಕ್ತಿಯ ಕಣಗಳನ್ನು ಪತ್ತೆಹಚ್ಚಬಹುದು. ಆದರೆ, ANITA ಮೂಲಕ ಭೂಮಿಯಿಂದ ಮೇಲಕ್ಕೆ ಬರುತ್ತಿರುವ ಇಂತಹ ನ್ಯೂಟ್ರಿನೋಗಳನ್ನು ಪತ್ತೆ ಹಚ್ಚಲಾಗಿದೆ. ಅಷ್ಟೇ ಅಲ್ಲ ಈ ಕಣಗಳು ಭೂಮಿಯ ಸಮಯಕ್ಕೆ ವಿರುದ್ಧವಾಗಿ ಚಲಿಸುತ್ತಿದ್ದು, ಇವು ಸಮಾನಾಂತರ  ಬ್ರಹ್ಮಾಂಡ ಕಂಡು ಹಿಡಿದ ವಾದವನ್ನು ಪುಷ್ಟಿಕರಿಸುತ್ತವೆ.

ಹಾಗಾದರೆ ನಿಜವಾಗಿಯೂ ಎರಡು ಬ್ರಹ್ಮಾಂಡಗಳಿವೆಯೇ? 13.8 ಶತಕೋಟಿ ವರ್ಷಗಳ ಹಿಂದೆ ಬಿಗ್-ಬ್ಯಾಂಗ್ ಸಮಯದಲ್ಲಿ ಎರಡು ಬ್ರಹ್ಮಾಂಡಗಳು ಸೃಷ್ಟಿಯಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ನಾವು ವಾಸಿಸುವ ಬ್ರಹ್ಮಾಂಡ ಹಾಗೂ  ಎರಡನೆಯದು, ನಮ್ಮ ಪ್ರಕಾರ, ಹಿಂದಕ್ಕೆ ಚಲಿಸುತ್ತಿದೆ ಎಂದು ಹೇಳಿದ್ದಾರೆ. ಅಂದರೆ, ಸಮಯ ಅಲ್ಲಿ ಭೂಮಿಗೆ ವಿರುದ್ಧವಾಗಿ ಚಲಿಸುತ್ತಿದೆ. ಒಂದಕ್ಕಿಂತ ಹೆಚ್ಚು ಬ್ರಹ್ಮಾಂಡದ ಸಿದ್ಧಾಂತವು ಹಲವು ವರ್ಷಗಳಷ್ಟು ಹಳೆಯದಾಗಿದೆ.

ನಮ್ಮ ಬ್ರಹ್ಮಾಂಡದಲ್ಲಿ ಭೂಮಿ ಇರುವಂತೆ ಎರಡನೇ ಬ್ರಹ್ಮಾಂಡದಲ್ಲಿಯೂ ಕೂಡ ಪೃಥ್ವಿ ಇರುವ ಸಾಧ್ಯತೆ ಇದೆ. ಹಲವು ಬ್ರಹ್ಮಾಂಡಗಳ ಕುರಿತಂತೆ ವಿಜ್ಞಾನಿಗಳ ನಡುವೆ ಒಟ್ಟು ಐದು ವಾದಗಳಿವೆ. ಇದರಲ್ಲಿ ಬಿಗ್ ಬ್ಯಾಂಗ್ ಹೊರತಾಗಿಯೂ ಕೂಡ ಇನ್ನೊಂದು ವಾದವಿದ್ದು, ಇದರಲ್ಲಿ ಬ್ಲಾಕ್ ಹೋಲ್ ಘಟನೆಯ ವಿರುದ್ಧ ಪ್ರಕ್ರಿಯೆ ಹೊಸ ಬ್ರಹ್ಮಾಂಡದಲ್ಲಿ ಹುಟ್ಟಿಕೊಂಡಿದೆ ಎಂದು ಹೇಳುತ್ತದೆ. ಇನ್ನೊಂದೆಡೆ ದೊಡ್ಡ ಬ್ರಹ್ಮಾಂಡಗಳಿಂದ ಇತರೆ ಸಣ್ಣ ಬ್ರಹ್ಮಾಂಡಗಳು ನಿರ್ಮಾಣಗೊಂಡಿವೆ ಎಂಬ ವಾದ ಕೂಡ ಇದೆ.

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಕೊನೆಯ ಸಂಶೋಧನೆ ಕೂಡ ಹಲವು ಬ್ರಹ್ಮಾಂಡವನ್ನು ಆಧರಿಸಿತ್ತು. ಅಂದರೆ ನಮ್ಮ ಬ್ರಹ್ಮಾಂಡವನ್ನು ಹೊರತುಪಡಿಸಿ ಇನ್ನೂ ಅನೇಕ ಬ್ರಹ್ಮಾಂಡಗಳು ಅಸ್ತಿತ್ವದಲ್ಲಿವೆ ಎಂಬುದಾಗಿತ್ತು. 2018ರಲ್ಲಿ ಅವರ ಈ ಪೇಪರ್ ಪ್ರಕಟಿಸಲಾಗಿತ್ತು. ಹಾಕಿಂಗ್ ಮಂಡಿಸಿದ ಥಿಯರಿ ಪ್ರಕಾರ ಈ ಬ್ರಹ್ಮಾಂಡಗಳೂ ಕೂಡ ನಮ್ಮ ಬ್ರಹ್ಮಾಂಡಗಳಂತೆಯೇ ಇರುವ ಸಾಧ್ಯತೆ ಇದ್ದು, ಅವುಗಳಲ್ಲಿಯೂ ಕೂಡ ಭೂಮಿಯಂತಹ ಗ್ರಹ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಭೂಮಿಯಂತಹ ಗ್ರಹ ಅಷ್ಟೇ ಅಲ್ಲ ನಮ್ಮ ರೀತಿಯ ಸಮಾಜ ಹಾಗೂ ಜನರೂ ಕೂಡ ಇರುವ ಸಾಧ್ಯತೆ ಇದೆ. ಭೂಮಿಗಿಂತ ವಿಭಿನ್ನವಾಗಿರುವ ಗ್ರಹಗಳನ್ನು ಹೊಂದಿದ ಬ್ರಹ್ಮಾಂಡಗಳೂ ಕೂಡ ಇರುವ ಸಾಧ್ಯತೆಯನ್ನು ಅವರು ವರ್ತಿಸಿದ್ದರು. ಅಲ್ಲಿ ಸೂರ್ಯ ಅಥವಾ ನಕ್ಷತ್ರಗಳು ಇರದೇ ಇರಬಹದು. ಆದರೆ, ಭೌತಿಕಶಾಸ್ತ್ರದ ನಿಯಮಗಳು ಮಾತ್ರ ನಮ್ಮಂತೆಯೇ ಇರಬಹುದು ಎಂದು ಹಾಕಿಂಗ್ ವಾದ ಮಂಡಿಸಿದ್ದರು.

Trending News