ಮಂತ್ರಿ ಸ್ಥಾನವನ್ನೇ ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಮನೆಬಾಗಿಲಿಗೆ ಹುಡುಕಿಕೊಂಡು ಬಂತು ಪ್ರಧಾನಿ ಸ್ಥಾನ!

Dr Manmohan Singh refused ministerial post in Pandit Jawaharlal cabinet | ಮಂತ್ರಿ ಸ್ಥಾನವನ್ನೇ ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಮನೆಬಾಗಿಲಿಗೆ ಹುಡುಕಿಕೊಂಡು ಬಂತು ಪ್ರಧಾನಿ ಸ್ಥಾನ!

Written by - Yashaswini V | Last Updated : Dec 27, 2024, 09:19 AM IST
  • ಆಗಷ್ಟೇ ಸ್ವಾತಂತ್ರ್ಯ ಪಡೆದಿದ್ದ ಬರಡು ಭಾರತಕ್ಕೆ ಭದ್ರ ಬುನಾದಿ ಹಾಕಲು ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಪರಿಣಿತರ ಹುಡುಕಾಟದಲ್ಲಿದ್ದರು.
  • ಆಗ ಕಣ್ಣಿಗೆ ಬಿದ್ದವರೇ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಓದಿಕೊಂಡು ಬಂದಿದ್ದ ಡಾ. ಮನಮೋಹನ್. ಅವರನ್ನು ವಿತ್ತಸಚಿವರಾಗುವಂತೆ ಆಹ್ವಾನಿಸಿದರು.
  • ಕಡೆಗೆ ಸೋನಿಯಾ ಗಾಂಧಿ ಪ್ರಧಾನಿ ಸ್ಥಾನವನ್ನು ತ್ಯಾಗಮಾಡಿ ಆ ಹುದ್ದೆಗೆ ನೀವೇ ಸೂಕ್ತ ಎಂದು ಹೇಳಿದಾಗ ಡಾ. ಮನಮೋಹನ್ ಸಿಂಗ್ ನಿರಾಕರಿಸಲು ಸಾಧ್ಯವಾಗಲಿಲ್ಲ.
ಮಂತ್ರಿ ಸ್ಥಾನವನ್ನೇ ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಮನೆಬಾಗಿಲಿಗೆ ಹುಡುಕಿಕೊಂಡು ಬಂತು ಪ್ರಧಾನಿ ಸ್ಥಾನ! title=

Dr Manmohan Singh Journey: ಜಗತ್ತಿನ ಅರ್ಥವ್ಯವಸ್ಥೆಯ ಭೂಪಟದಲ್ಲಿ ಭಾರತದ ಭವಿಷ್ಯವನ್ನೇ ಬದಲಿಸಿದ ಡಾ. ಮನಮೋಹನ್ ಸಿಂಗ್ ಅವರಿಗೆ 1962ರಲ್ಲೇ ಅಂದಿನ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ತಮ್ಮ ಸರ್ಕಾರದಲ್ಲಿ ಮಂತ್ರಿ ಆಗುವಂತೆ ಆಹ್ವಾನಿಸಿದ್ದರು. ಆದರೆ ಮನಮೋಹನ್ ಸಿಂಗ್ ಒಪ್ಪಿರಲಿಲ್ಲ. ಕಡೆಗೆ ಮಂತ್ರಿ ಸ್ಥಾನವನ್ನು ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಮನೆಬಾಗಿಲಿಗೆ ಪ್ರಧಾನಿ ಸ್ಥಾನವೇ ಹುಡುಕಿಕೊಂಡು ಬಂತು.

ಆಗಷ್ಟೇ ಸ್ವಾತಂತ್ರ್ಯ ಪಡೆದಿದ್ದ ಬರಡು ಭಾರತಕ್ಕೆ ಭದ್ರ ಬುನಾದಿ ಹಾಕಲು ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿದ್ದವರ ಹುಡುಕಾಟದಲ್ಲಿದ್ದರು. ಆಗ ಕಣ್ಣಿಗೆ ಬಿದ್ದವರೇ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಓದಿಕೊಂಡು ಬಂದಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ತಮ್ಮ ಸರ್ಕಾರದಲ್ಲಿ ವಿತ್ತಸಚಿವರಾಗುವಂತೆ ಆಹ್ವಾನಿಸಿದರು. ಆದರೆ ಮನಮೋಹನ್ ಸಿಂಗ್ ಒಪ್ಪಲಿಲ್ಲ.

ಇದನ್ನೂ ಓದಿ- ಡಾ. ಮನಮೋಹನ್ ಸಿಂಗ್ ಅವರನ್ನು ಹಾಡಿ ಹೊಗಳಿದ್ದ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ!

ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಡಾ. ಮನಮೋಹನ್ ಸಿಂಗ್ ಇಬ್ಬರೂ ಶ್ರೇಷ್ಠ ನಾಯಕರಾಗಿದ್ದರು. ನೆಹರೂ ಮುಕ್ತವಾಗಿ ಯುವಕ ಡಾ. ಸಿಂಗ್ ಅವರನ್ನು ಆಹ್ವಾನಿಸಿದರು. ಅಷ್ಟೇ ನಯವಾಗಿ ಸಿಂಗ್ ಮಂತ್ರಿ ಸ್ಥಾನವನ್ನು ನಿರಾಕರಿಸಿದರು. ತನಗೆ ನೆಚ್ಚಿನ ಉಪನ್ಯಾಸಕ ವೃತ್ತಿಯೇ ಹೆಚ್ಚು ತೃಪ್ತಿದಾಯಕ ಎಂದರು. ಅದಕ್ಕಿಂತ ಮಿಗಿಲಾಗಿ ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬರಲಾರೆ ಎಂದು ಹೇಳಿದ್ದರು. 

ಇದನ್ನೂ ಓದಿ- ಡಾ. ಮನಮೋಹನ್ ಸಿಂಗ್ 2 ಬಾರಿ ಪ್ರಧಾನಿಯಾದರೂ, ಹುಟ್ಟೂರಿಗೆ ಹೋಗಬೇಕೆನಿಸಿದರೂ ಇದೊಂದು ಕಾರಣಕ್ಕೆ ಹೋಗಲೇ ಇಲ್ಲ…!

ನಂತರ ಡಾ. ಮನಮೋಹನ್ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಆದರು. ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾದರು. ಕಡೆಗೆ 2014ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾಗ ಪ್ರಧಾನ ಮಂತ್ರಿ ಸ್ಥಾನವೇ ಹರಿಸಿಬಂತು. ಸೋನಿಯಾ ಗಾಂಧಿ ಪ್ರಧಾನಿ ಸ್ಥಾನವನ್ನು ತ್ಯಾಗಮಾಡಿ ಆ ಮಹತ್ತರವಾದ ಹುದ್ದೆಗೆ ನೀವೇ ಸೂಕ್ತ ಎಂದು ಹೇಳಿದಾಗ ಡಾ. ಮನಮೋಹನ್ ಸಿಂಗ್ ನಿರಾಕರಿಸಲು ಸಾಧ್ಯವಾಗಲಿಲ್ಲ. ಅನಂತರ 10 ವರ್ಷ ಪ್ರಧಾನಿಯಾಗಿ ಹಲವು ಮಹತ್ವದ ಕಾನೂನುಗಳನ್ನು ತಂದು ಆಧುನಿಕ ಭಾರತಕ್ಕೂ ಮುನ್ನೋಟವನ್ನು ಕಟ್ಟಿಕೊಟ್ಟರು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News