ನವದೆಹಲಿ: ವರ್ಷ 2022ರವರೆಗೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದೆ ಸರಣಿಯಲ್ಲಿ ಇದೀಗ ಕ್ರಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯಲ್ಲಿಯೇ, ಪಶು ಕ್ರಿದಿತ್ ಕಾರ್ಡ್ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನಯಡಿ ಕೂಡ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ.
ಪಶು ಸಂಗೊಪನೆಗೆ ಒತ್ತು ನೀಡುವ ಉದ್ದೇಶದಿಂದ ಈ ಸಾಲ ನೀಡಲಾಗುತ್ತಿದೆ. ಈ ಯೋಜನೆಯ ಅಡಿ ಮೀನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೇಕೆ-ಕುರಿ ಸಾಕಾಣಿಕೆ, ಗೋವು-ಎಮ್ಮೆ ಸಾಕಾಣಿಕೆಗಾಗಿ ರೈತರಿಗೆ ಸಾಲ ನೀಡಲಾಗುತ್ತದೆ.
ಹರ್ಯಾಣ ಸರ್ಕಾರ ಪಶುಸಂಗೋಪನೆಗೆ ಒಟ್ಟು ನೀಡುವ ಉದ್ದೇಶದಿಂದ ಪಶುಧನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಭಿಸಿದೆ.
ಬಡ್ಡಿ ರಹಿತ ಸಾಲ
ಈ ಯೋಜನೆಯ ಅಡಿ 1.60 ಲಕ್ಷ ರೂ. ವರೆಗಿನ ಸಾಲ ಪಡೆಯಲು ಪಶುಪಾಲಕರು ಅಥವಾ ರೈತರು ಕೇವಲ ಪಶುಸಂಗೋಪನಾ ಹಾಗೂ ಡೆಯರಿ ಇಲಾಖೆಯ ಉಪನಿರ್ದೇಶಕರ ಅಫಿಡವಿಟ್ ಮಾತ್ರ ಸಲ್ಲಿಸಬೇಕು. ಈ ಹಣಕ್ಕೆ ಯಾವುದೇ ರೀತಿಯ ಬಡ್ಡಿ ವಿಧಿಸಲಾಗುವುದಿಲ್ಲ. ಇದಕ್ಕೂ ಮೊದಲು ರೈತರು ತಮ್ಮ ಪಶುವಿನ ವಿಮೆ ಕೂಡ ಮಾಡಬೇಕು ಹಾಗೂ ಇದಕ್ಕಾಗಿ ಕೇವಲ ರೂ.100 ಮಾತ್ರ ಪಾವತಿಸಬೇಕು . ಈ ಯೋಜನೆಯಡಿ ಪಡೆದ ಸಾಲಕ್ಕೆ ರೈತರು ಶೇ.7ರಷ್ಟು ಬಡ್ಡಿ ಪಾವತಿಸಬೇಕು. ಆದರೆ, ಇದರಲ್ಲಿಯೂ ಕೂಡ ಸರ್ಕಾರ ಶೇ.3 ಸಬ್ಸಿಡಿ ನೀಡುತ್ತಿದ್ದರೆ, ಉಳಿದ ಶೇ. 4ರಷ್ಟು ಬಡ್ಡಿಯನ್ನು ಹರಿಯಾಣಾ ಸರ್ಕಾರ ಭರಿಸಲಿದೆ. ಹೀಗಾಗಿ ಈ ಯೋಜನೆಯಡಿ ರೈತರು ಪಡೆಯುವ ಒಟ್ಟು ಸಾಲ ಬಡ್ಡಿ ರಹಿತವಾಗಲಿದೆ.
ಎಷ್ಟು ಸಾಲ ಸಿಗುತ್ತದೆ.
ಈ ಯೋಜನೆಯ ಅಡಿ ರಾಜ್ಯದಲ್ಲಿನ ಯಾವ ರೈತರ ಬಳಿ ಒಂದು ಹಸು ಇದೆಯೋ, ಅವರಿಗೆ ರಾಜ್ಯ ಸರ್ಕಾರ ರೂ.40783 ಸಾಲ ನೀಡುತ್ತದೆ. ಈ ಸಾಲವನ್ನು ಒಟ್ಟು 6 ಮಾಸಿಕ ಕಂತುಗಳ ರೂಪದಲ್ಲಿ ಕ್ರೆಡಿಟ್ ಕಾರ್ಡ್ ಮಾಧ್ಯಮದ ಮೂಲಕ ಸಿಗಲಿದೆ. ಇದೆ ರೀತಿ ಒಂದು ಎಮ್ಮೆ ಹೊಂದಿದವರಿಗೆ ರೂ.60, 249 ಸಾಲ ನೀಡಲಾಗುತ್ತದೆ. ಈ ಹಣ ರೈತರಿಗೆ ಒಟ್ಟು 1 ವರ್ಷದ ಅವಧಿಯೊಳಗೆ ನೀಡಲಾಗುತ್ತದೆ. ಇದಕ್ಕೆ ವಾರ್ಷಿಕವಾಗಿ ಶೇ.4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸುವವರಿಗೆ ಶೇ.100 ರಷ್ಟು ಬಡ್ಡಿ ವಿನಾಯ್ತಿ ನೀಡಲಾಗುತ್ತದೆ.1.60 ಲಕ್ಷ ರೂ.ಗಳಿಗಿಂತ ಹೆಚ್ಚಿನ ಸಾಲ ಪಡೆಯುವವರಿಗೆ ಬಡ್ಡಿಯಲ್ಲಿ ಯಾವುದೇ ರೀತಿಯ ವಿನಾಯ್ತಿ ನೀಡಲಾಗುವುದಿಲ್ಲ ಮತ್ತು ಬಡ್ಡಿ ಸಾಮಾನ್ಯವಾಗಿರಲಿದೆ.
ಈ ಕಾರ್ಡ್ ಹೇಗೆ ಪಡೆಯಬೇಕು
-ನೀವು ನಿಮ್ಮ ಬ್ಯಾಂಕ್ಗೆ ಶಾಖೆಗೆ ಹೋಗಿ ಪಶು ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಬೇಕು.
-ಅರ್ಜಿಯೊಂದಿಗೆ, ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಗಾತ್ರದ ಫೋಟೋ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
- ಈ ಯೋಜನೆ ಹರಿಯಾಣದ ನಿವಾಸಿಗಳಿಗೆ ಮಾತ್ರ ಎಂಬುದನ್ನು ನೆನಪಿನಲ್ಲಿಡಿ.
- ಅರ್ಜಿ ನಮೂನೆಯನ್ನು ಪರಿಶೀಲಿಸಿದ ನಂತರ, ನಿಮ್ಮ ಪಶು ಕ್ರೆಡಿಟ್ ಕಾರ್ಡ್ ಅನ್ನು 1 ತಿಂಗಳೊಳಗೆ ಸಿದ್ಧಗೊಳ್ಳುತ್ತದೆ.