LED lights ಬಿಸಿನೆಸ್ ಆರಂಭಿಸಿ, ಕೇವಲ ರೂ.5000 ಹೂಡಿಕೆಯ ನಂತರ...?

ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮ ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, LED ಬಲ್ಬ್ ಗಳ ಉದ್ಯಮ ಆರಂಭಿಸಬಹುದಾಗಿದೆ. ಮಿನಿಸ್ಟ್ರಿ ಆಫ್ ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ ಪ್ರೈಸಸ್ (MSME Ministry) ಅಡಿ ಹಲವು ಸಂಸ್ಥೆಗಳು LED ತಯಾರಿಸುವ ತರಬೇತಿ ನೀಡುತ್ತಿವೆ.

Last Updated : Jul 9, 2020, 03:06 PM IST
LED lights ಬಿಸಿನೆಸ್ ಆರಂಭಿಸಿ, ಕೇವಲ ರೂ.5000 ಹೂಡಿಕೆಯ ನಂತರ...? title=

ನವದೆಹಲಿ: ದೇಶಾದ್ಯಂತ ಇತ್ತೀಚಿಗೆ ಲೈಟ್ ಹೆಸರಿನಲ್ಲಿ ಕೇವಲ LED ಲೈಟ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಕಾರಣ ಎಂದರೆ ಈ ಲೈಟ್ ಬಲ್ಬ್ ಗಳು ಬೇಗ ಡಿಫ್ಯೂಸ್ ಆಗುವುದಿಲ್ಲ ಹಾಗೂ ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ. ಸಾಕಷ್ಟು ಬೇಡಿಕೆ ಇರುವ ಕಾರಣ ಅಂಗಡಿ ಮಾಲೀಕರು ಕೂಡ ಇದೀಗ ಈ ಬಲ್ಬ್ ಗಳನ್ನೇ ತಮ್ಮ ಅಂಗಡಿಯಲ್ಲಿ ಹೆಚ್ಚಾಗಿ ಮಾರಾಟಕ್ಕೆ ಇಡುತ್ತಿದ್ದಾರೆ. ಹೀಗಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಜ್ಞರೂ ಕೂಡ ಇದರ ಉದ್ಯಮ ಆರಂಭಿಸಲು ಸಲಹೆ ನೀಡುತ್ತಿದ್ದಾರೆ. ಈ ಉದ್ಯಮದ ಜೊತೆಗೆ ಹೇಗೆ ಸೇರಬೇಕು ಎಂಬುದನ್ನು ನಾವೂ ಕೂಡ ಅರಿಯೋಣ ಬನ್ನಿ

ನಿಮ್ಮ ಸ್ವಂತ ಉದ್ಯಮ ಆರಂಭಿಸಿ
ಒಂದು ವೇಳೆ ನೀವೂ ಕೂಡ ನಿಮ್ಮ ಸ್ವಂತ ಉದ್ಯಮ ಆರಂಭಿಸಲು ಯೋಜನೆ ರೂಪಿಸುತ್ತಿದ್ದರೆ, LED ಬಲ್ಬ್ ಗಳ ಉದ್ಯಮ ಆರಂಭಿಸಬಹುದಾಗಿದೆ. ಮಿನಿಸ್ಟ್ರಿ ಆಫ್ ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಂ ಎಂಟರ್ ಪ್ರೈಸಸ್ (MSME Ministry) ಅಡಿ ಹಲವು ಸಂಸ್ಥೆಗಳು LED ತಯಾರಿಸುವ ತರಬೇತಿ ನೀಡುತ್ತಿವೆ.

ಇಲ್ಲಿ ನೀವು ತರಬೇತಿ ಪಡೆಯಬಹುದಾಗಿದೆ
ದೆಹಲಿಯ ಪಶ್ಚಿಮ ವಿಹಾರದಲ್ಲಿರುವ ಭಾರತಿ ವಿದ್ಯಾಪೀಠ LED ಬಲ್ಬ್ ತಯಾರಿಸುವ ಕೋರ್ಸ್ ವೊಂದನ್ನು ಆರಂಭಿಸಿದೆ. ಈ ಕೋರ್ಸ್ ಗೆ ರೂ.5000 ಶುಲ್ಕ ನಿಗದಿಪಡಿಸಲಾಗಿದೆ. ನಮ್ಮ ಸಹಯೋಗಿ ವೆಬ್ ಸೈಟ್ ಝೀ ಬಿಸಿನೆಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಇಲ್ಲಿ ನಿಮಗೆ LEDಗೆ ಸಂಬಂಧಿಸಿದ ಅತಿ ಚಿಕ್ಕ-ಚಿಕ್ಕ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಹಾಗೂ LED ಉತ್ಪಾದನೆಯ ವಿಧಾನದ ಕುರಿತು ತರಬೇತಿ ನೀಡಲಾಗುತ್ತದೆ.

ತರಬೇತಿಯ ವೇಳೆ ನಿಮಗೆ LED, ಪಿಸಿಬಿಗೆ ಸಂಬಂಧಿಸದ ಮೂಲಭೂತ ಮಾಹಿತಿ ನೀಡಲಾಗುತ್ತದೆ. ಇದಲ್ಲದೆ LED ಡ್ರೈವರ್, ಫಿಟ್ಟಿಂಗ್-ಟೆಸ್ಟಿಂಗ್, ಬೇಕಾಗುವ ಸಾಮಗ್ರಿಗಳ ಖರೀದಿ, ಮಾರ್ಕೆಟಿಂಗ್, ಸರ್ಕಾರಿ ಸಬ್ಸಿಡಿ ಸ್ಕೀಮ್ ಗಳ ಕುರಿತು ಮಾಹಿತಿ ಇತ್ಯಾಗಿಗಳನ್ನು ಹೇಳಿಕೊಡಲಾಗುತ್ತದೆ.

ಹೇಗೆ ಅರ್ಜಿ ಸಲ್ಲಿಸಬೇಕು?
ಒಂದು ವೇಳೆ ನೀವು ತರಬೇತಿ ಪಡೆದು ಸ್ವಂತ LED ಉದ್ಯಮ ಆರಂಭಿಸಲು ಯೋಜನೆ ರೂಪಿಸಿದ್ದರೆ, 99711-2866, 82175-82663 ಅಥವಾ 88066-14948 ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಕಡಿಮೆ ವಿದ್ಯುತ್ ಬಳಕೆ
CFL ಬಲ್ಬ್ ಗಳ ಹೋಲಿಕೆಯಲ್ಲಿ LED ಬಲ್ಬ್ ಗಳಿಗೆ ಅತಿ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಬೇಕಾಗುತದೆ. ಅಷ್ಟೇ ಅಲ್ಲ ಒಂದು LED ಬಲ್ಬ್ ನ ಸಾಮಾನ್ಯ ಲೈಫ್ 5000೦ ಗಂಟೆಗಳಿಗೂ ಅಧಿಕ ಆಗಿರುತ್ತದೆ. ಇದರ ಹೋಲಿಕೆಯಲ್ಲಿ CFL ಬಲ್ಬ್ ಗಳು ಕೇವಲ 800೦ ಗಂಟೆಗಳು ಮಾತ್ರ ಬಾಳಿಕೆ ಬರುತ್ತವೆ. ಹೀಗಾಗಿ CFL ಬಲ್ಬ್ ಗಳ ಹೋಲಿಕೆಯಲ್ಲಿ LED ಬಲ್ಬ್ ಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ.

Trending News