ಬಿಗ್ ಬಿ ಫ್ಯಾಮಿಲಿ ಬಳಿಕ ಈಗ ಈ ನಟಿಗೂ ಕರೋನಾ ಪಾಸಿಟಿವ್

ನಟಿ ರಾಚೆಲ್ ವೈಟ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

Last Updated : Jul 13, 2020, 11:48 AM IST
ಬಿಗ್ ಬಿ ಫ್ಯಾಮಿಲಿ ಬಳಿಕ ಈಗ ಈ ನಟಿಗೂ ಕರೋನಾ ಪಾಸಿಟಿವ್ title=

ನವದೆಹಲಿ: ನಟಿ ರಾಚೆಲ್ ವೈಟ್ ಅವರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ತಾನು ಮಾರಕ ಕರೋನಾ ವೈರಸ್‌ನ ಹಿಡಿತದಲ್ಲಿದ್ದೇನೆ ಮತ್ತು ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿ ಇರುವುದಾಗಿ ನಟಿ ಟ್ವಿಟರ್‌ನಲ್ಲಿ ದೃಢಪಡಿಸಿದ್ದಾರೆ. 

ರಾಚೆಲ್ ಅವರ ಈ ಟ್ವೀಟ್ ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ. ಎಲ್ಲರೂ ಅವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದಾರೆ.

 
 
 
 

 
 
 
 
 
 
 
 
 

Corona-lisa ! 😷 . Your safety in your hands, literally, with these fabric face masks from @faballey . 2 benefits for me would be that I need not worry about remembering to duly discard a disposable face mask , with this it’s wash, wear, and repeat ! Also, It’s the affordable option. ☝️👌😇❤️

A post shared by Rachel White (@whitespeaking) on

ಈ ಕುರಿತಂತೆ ಟ್ವೀಟ್ ಮಾಡಿರುವ ರಾಚೆಲ್ ವೈಟ್, ನಾನು ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ. ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇದ್ದೇನೆ. ನಾನು ಬೇಗನೆ ಗುಣಮುಖನಾಗಲು ಬಯಸುವ ಕಾರಣ ದಯವಿಟ್ಟು ನನಗಾಗಿ ಪ್ರಾರ್ಥಿಸಿ ಎಂದು ಬರೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಅವರ ಅಭಿಮಾನಿಗಳು  ಬಳಕೆದಾರರು ತಮ್ಮನ್ನು ತಾವು ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಮತ್ತು ಶೀಘ್ರದಲ್ಲೇ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಇನ್ನೊಬ್ಬ ಬಳಕೆದಾರರು ಚಿಂತಿಸಬೇಡಿ. ನೀವು ಶೀಘ್ರದಲ್ಲೇ ಗುಣಮುಖರಾಗಿರುತ್ತೀರಿ ಎಂದು ಬರೆದರೆ, ಮತ್ತೊಬ್ಬರು ಬೇಗ ಗುಣಮುಖರಾಗಿ. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು  ಬರೆದಿದ್ದಾರೆ. ರಾಚೆಲ್ 'ಊಂಗ್ಲಿ' ಮತ್ತು 'ಹರ್ ಹರ್ ಬಯೋಮಕೇಶ್' ಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ.

Trending News