Pakistan ನಲ್ಲಿ ಇಂದಿಗೂ ಕೂಡ ತೆರೆಕಂಡಿಲ್ಲ Bollywoodನ ಈ ಐದು Super Hit ಚಿತ್ರಗಳು

ಪಾಕಿಸ್ತಾನದಲ್ಲಿ ನಿಷೇಧಕ್ಕೆ ಒಳಗಾದ ಭಾರತೀಯ ಚಿತ್ರಗಳ ಪಟ್ಟಿ ತುಂಬಾ ದೊಡ್ಡದಾಗಿದೆ. ಆದರೆ, ಇಂದು ನಾವು ನಿಮಗೆ ಪಾಕಿಸ್ತಾನದಲ್ಲಿ ನಿಷೆಧಿಸಲ್ಪಟ್ಟ ಮತ್ತು ಭಾರತದಲ್ಲೇ ತೆರೆಕಂಡು ಸೂಪರ್ ಹಿಟ್ ಆಗಿರುವ ಐದು ವಿಶೇಷ ಚಿತ್ರಗಳ ಕುರಿತು ಮಾಹಿತಿ ನೀಡಲಿದ್ದೇವೆ.  

Last Updated : Jul 20, 2020, 03:34 PM IST
Pakistan ನಲ್ಲಿ ಇಂದಿಗೂ ಕೂಡ ತೆರೆಕಂಡಿಲ್ಲ Bollywoodನ ಈ ಐದು Super Hit ಚಿತ್ರಗಳು title=

ನವದೆಹಲಿ: ನೆರೆ ರಾಷ್ಟ್ರವಾದರೂ ಕೂಡ, ಪಾಕಿಸ್ತಾನ ಯಾವಾಗಲೂ ಭಾರತದ ವಿರುದ್ಧ ಹೇಡಿತನದ ಕೃತ್ಯದಲ್ಲಿ ತೊಡಗಿರುತ್ತದೆ. ಇದೆ ಕಾರಣದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಯಾವಾಗಲೂ ಹಳಸಿಯೇ ಇರುತ್ತವೆ. ಭಾರತದೊಂದಿಗಿನ ಪಾಕಿಸ್ತಾನದ ಸಂಬಂಧ ಹದಗೆಟ್ಟರೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಹರಡುವುದರ ಜೊತೆಗೆ ಅದು ತನ್ನ ದೇಶದಲ್ಲಿ ಭಾರತದ ಸಂಗತಿಗಳ ಮೇಲೆ ನಿಷೇಧ ವಿಧಿಸಲು ಮುಂದಾಗುತ್ತದೆ. ಅವುಗಳಲ್ಲಿ ಭಾರತೀಯ ಚಿತ್ರಗಳೂ ಕೂಡ ಒಂದಾಗಿವೆ. ಪಾಕಿಸ್ತಾನಿ ಸಿನಿ ಅಭಿಮಾನಿಗಳು ಬಾಲಿವುಡ್ ಚಿತ್ರಗಳನ್ನು ತುಂಬಾ ಇಷ್ಟಪಡುತ್ತಾರೆ, ಆದರೆ ಅಲ್ಲಿನ ಸರ್ಕಾರವು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಭಾರತದಲ್ಲಿ ಅನೇಕ ಚಲನಚಿತ್ರಗಳನ್ನು ನಿಷೇಧಿಸುತ್ತದೆ. ಪಾಕಿಸ್ತಾನದಲ್ಲಿ ನಿಷೆಧಿತಗೊಂಡ ಭಾರತೀಯ ಚಲನಚಿತ್ರಗಳ ಪಟ್ಟಿ ಸಾಕಷ್ಟು ಉದ್ದವಾಗಿದೆ, ಆದರೆ ಇಂದು ನಾವು ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟ ಕೆಲವು ವಿಶೇಷ ಬಾಲಿವುಡ್ ಚಲನಚಿತ್ರಗಳನ್ನು ನಿಮಗೆ ಮಾಹಿತಿ ನೀಡುತ್ತಿದ್ದೇವೆ.

1. ರಾಂಝಣಾ
ಈ ಚಿತ್ರ 2013 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಸೋನಮ್ ಕಪೂರ್, ಧನುಷ್ ಮತ್ತು ಅಭಯ್ ಡಿಯೋಲ್ ಮುಖ್ಯ ಪಾತ್ರ ನಿರ್ವಹಿಸಿದ್ದರು. ಪಾಕಿಸ್ತಾನದಲ್ಲಿ, ರಾಂಝಣಾ ಚಿತ್ರವನ್ನು ಹಿಂದೂ ಹುಡುಗನನ್ನು ಪ್ರೀತಿಸುವ ಮುಸ್ಲಿಂ ಹುಡುಗಿಯ ತಪ್ಪು ಸಂದೇಶವನ್ನು ಪಸರಿಸುತ್ತದೆ ಎಂಬ ಆಧಾರದ ಮೇಲೆ ನಿಷೇಧಿಸಲಾಗಿದೆ.

2. ಫ್ಯಾಂಟಮ್
ಈ ಚಿತ್ರದಲ್ಲಿ ಸೈಫ್ ಅಲಿ ಮತ್ತು ಕತ್ರಿನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು 26/11 ಮುಂಬೈ ದಾಳಿಯಿಂದ ಪ್ರೇರಿತವಾಗಿತ್ತು, ಆದರೆ ಚಿತ್ರದ ವಿರುದ್ಧ ಜಮಾತ್-ಉದ್-ದಾವಾ ಮುಖ್ಯಸ್ಥ ಮತ್ತು 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರು ಲಾಹೋರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ, ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡದಂತೆ ಮನವಿ ಮಾಡಿದ್ದರು ಏಕೆಂದರೆ ಅದು ದೇಶದಲ್ಲಿ ತಪ್ಪು ಸಂದೇಶವನ್ನು ನೀಡುತ್ತದೆ. ಇದರ ನಂತರ, 2015 ರ ಚಲನಚಿತ್ರ ಫ್ಯಾಂಟಮ್ ಅನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ.

3. ಏಕ್ ಥಾ ಟೈಗರ್
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾರತದಲ್ಲಿ ಮಾತ್ರ ಅಲ್ಲ ಪಾಕಿಸ್ತಾನದಲ್ಲಿಯೂ ಕೂಡ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ, ಆದರೆ 2012 ರಲ್ಲಿ ಸಲ್ಮಾನ್ ಮತ್ತು ಕತ್ರಿನಾ ಅಭಿನಯದ 'ಏಕ್ ಥಾ ಟೈಗರ್' ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಯಿತು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕುರಿತು ಕೂಡ ಈ ಚಿತ್ರದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆಧಾರದ ಮೇಲೆ ಇದನ್ನು ಅಲ್ಲಿ ನಿಷೇಧಿಸಲಾಗಿದೆ.

4. ದಿ ಡರ್ಟಿ ಪಿಕ್ಚರ್ 
ಈ ಚಿತ್ರ 2011 ರಲ್ಲಿ ತೆರೆಕಂಡಿತ್ತು. ವಿದ್ಯಾ ಬಾಲನ್, ನಸೀರುದ್ದೀನ್ ಷಾ ಮತ್ತು ಎಮ್ರಾನ್ ಹಶ್ಮಿ ಅಭಿನಯದ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ.ಈ ಚಿತ್ರವು ಅನೇಕ ಬೋಲ್ಡ್ ದೃಶ್ಯಗಳನ್ನು ಹೊಂದಿದ್ದು, ಪಾಕಿಸ್ತಾನದ ಪ್ರೇಕ್ಷಕರಿಗೆ ತೋರಿಸುವುದು ತಪ್ಪು ಎಂದು ಪರಿಗಣಿಸಲಾಗಿದೆ.

5. ಬೇಬಿ
2015 ರಲ್ಲಿ ತೆರೆಕಂಡ ಬೇಬಿ ಗೂಢಚಾರಿಕೆ ಮತ್ತು RAW ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅನುಪಮ್ ಖೇರ್, ರಾಣಾ ದಗ್ಗುಬಾಟಿ, ಡ್ಯಾನಿ ಮತ್ತು ಕೆ.ಕೆ.ಮೆನನ್ ಮುಂತಾದ ನಟರು ಮುಖ್ಯ ಪಾತ್ರದಲ್ಲಿದ್ದರು. ಮುಸ್ಲಿಮರ ಕುರಿತು ಈ ಚಿತ್ರದಲ್ಲಿ ತಪ್ಪು ಚಿತ್ರೀಕರಣ ಮಾಡಲಾಗಿದೆ ಎಂಬ ಕಾರಣಕ್ಕೆ ಇದನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ.

Trending News