ನವದೆಹಲಿ: ಮೇಕ್ ಇನ್ ಅಭಿಯಾನದಡಿ ಭಾರತೀಯ ಸೇನೆಯನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ. ಇದೀಗ ಭಾರತೀಯ ಸೇನೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರ್ಪಡೆಗೊಂಡಿದೆ. ಓಡಿಷಾದ ಇಂಟರಿಮ್ ಟೆಸ್ಟ್ ರೇಂಜ್ ನಿಂದ ಆಂಟಿ-ಟ್ಯಾಂಕ್ 'ಧ್ರುವಾಸ್ತ್ರ' ಮಿಸೈಲ್ ನ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಈ ಮಿಸೈಲ್ ಶತ್ರು ರಾಷ್ಟ್ರಗಳನ್ನು ಸಂಪೂರ್ಣ ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
ವರದಿಗಳ ಪ್ರಕಾರ ಹೆಲಿಕ್ಯಾಪ್ಟರ್ ಲಾಂಚ್ದ್ ನಾಗ್ ಮಿಸೈಲ್ (HELINA) ಹೆಸರನ್ನು ಇದೀಗ ಆಂಟಿ ಟ್ಯಾಂಕ್ ಮಿಸೈಲ್ 'ಧ್ರುವಾಸ್ತ್ರ'ಗೆ ಬದಲಾಯಿಸಲಾಗಿದೆ. ಡೈರೆಕ್ಟ್ ಹಾಗೂ ಟಾಪ್ ಅಟ್ಯಾಕ್ ಮೋಡ್ ನಲ್ಲಿ ಜುಲೈ 15 ಮತ್ತು 16ರಂದು ಇದರ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ಪರೀಕ್ಷೆ ಹೆಲಿಕ್ಯಾಪ್ಟರ್ ಸಹಾಯ ಇಲ್ಲದೆಯೇ ನಡೆಸಲಾಗಿತ್ತು.
#WATCH Trials of Helicopter-launched Nag Missile (HELINA), now named Dhruvastra anti-tank guided missile in direct and top attack mode. The flight trials were conducted on 15&16 July at ITR Balasore (Odisha). This is done without helicopter. pic.twitter.com/Jvj6geAGLY
— ANI (@ANI) July 22, 2020
'ಧುವಾಸ್ತ್ರ ಮೂರನೇ ತಲೆಮಾರಿನ 'ಫೈರ್ ಅಂಡ್ ಫರ್ಗೆಟ್' ಮಾದರಿಯ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಇದನ್ನು ಅಡ್ವಾನ್ಸಡ್ ಲೈಟ್ ಹೆಲಿಕ್ಯಾಪ್ಟರ್ ನಲ್ಲಿ ಅಳವಡಿಸಲಾಗಿದೆ.
ಈ ವ್ಯವಸ್ಥೆ ಪ್ರತಿ ಪ್ರತಿ ಋತುವಿನಲ್ಲಿ ಅಷ್ಟೇ ಅಲ್ಲ ರಾತ್ರಿಯೂ ಸಹ ಆಕ್ರಮಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಾಂಪ್ರದಾಯಿಕ ರಕ್ಷಣಾ ರಕ್ಷಾಕವಚ ಯುದ್ಧ ಟ್ಯಾಂಕ್ಗಳನ್ನು ಮಾತ್ರವಲ್ಲದೆ ಸ್ಫೋಟಕಗಳಿಂದ ರಕ್ಷಾಕವಚ ರಕ್ಷಣೆ ಹೊಂದಿರುವ ಟ್ಯಾಂಕ್ಗಳನ್ನು ಸಹ ಧ್ವಂಸಗೊಳಿಸುತ್ತದೆ.
ಧ್ರುವಸ್ತ್ರ ಕ್ಷಿಪಣಿ ಎರಡೂ ವೇದಿಕೆಗಳಲ್ಲಿ ಆಕ್ರಮಣ ಮಾಡುವುದರ ಜೊತೆಗೆ ಟಾಪ್ ಅಟ್ಯಾಕ್ ನಡೆಸುವ ಸಾಮರ್ಥ್ಯ ಕೂಡ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಕಳೆದ ವರ್ಷ ಪೋಖ್ರಾನ್ ಗುಂಡಿನ ವ್ಯಾಪ್ತಿಯಲ್ಲಿ ನಾಗ್ ಕ್ಷಿಪಣಿಯ 3 ಯಶಸ್ವಿ ಪರೀಕ್ಷೆ ನಡೆಸಿತ್ತು. ಡಿಆರ್ಡಿಒ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ನಾಗಾ ಕ್ಷಿಪಣಿ ವ್ಯವಸ್ಥೆಯನ್ನು (ನಾಮಿಸ್) 524 ಕೋಟಿ ರೂ.ಗೆ ಖರೀದಿಸಲು ರಕ್ಷಣಾ ಸ್ವಾಧೀನ ಮಂಡಳಿ ಅನುಮತಿ ನೀಡಿದೆ.