ದೇಸೀಯ ವಿಮಾನ ಯಾತ್ರಿಗಳಿಗೊಂದು ಸಂತಸದ ಸುದ್ದಿ, ವಿಮಾನಯಾನ ಸಚಿವಾಲಯದಿಂದ ಮಹತ್ವದ ಘೋಷಣೆ

ದೇಶೀಯ ವಿಮಾನ ಯಾತ್ರೆ ಕೈಗೊಳ್ಳಲು ಬಯಸುವ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಸಂತಸದ ಸುದ್ದಿಯೊಂದನ್ನು ನೀಡಿದ್ದು, ಇದರಿಂದ ಕೋಟ್ಯಂತರ ಪ್ರಯಾಣಿಕರಿಗೆ ಲಾಭ ಸಿಗಲಿದ್ದು, ಅಗ್ಗದ ದರದಲ್ಲಿ ವಿಮಾನಯಾನ ಕೈಗೊಳ್ಳಬಹುದಾಗಿದೆ.  

Last Updated : Jul 25, 2020, 05:29 PM IST
ದೇಸೀಯ ವಿಮಾನ ಯಾತ್ರಿಗಳಿಗೊಂದು ಸಂತಸದ ಸುದ್ದಿ, ವಿಮಾನಯಾನ ಸಚಿವಾಲಯದಿಂದ ಮಹತ್ವದ ಘೋಷಣೆ title=

ನವದೆಹಲಿ: ದೇಶೀಯ ವಿಮಾನಯಾನ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಪ್ರಮುಖ ಘೋಷಣೆ ಮಾಡಿದೆ. ಇದರಿಂದ ಕೋಟ್ಯಂತರ ಪ್ರಯಾಣಿಕರಿಗೆ ಲಾಭವಾಗಲಿದ್ದು, ಅವರು ಅಗ್ಗದ ದರದಲ್ಲಿ ವಿಮಾನ ಯಾತ್ರೆ ಕೈಗೊಳ್ಳಬಹುದಾಗಿದೆ. ವಿಮಾನಯಾನ ದರವನ್ನು ಹೆಚ್ಚಿಸುವ ನಿಷೇಧವನ್ನು ಸಚಿವಾಲಯವು ನವೆಂಬರ್ 24 ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್ ಬಳಿಕ  ವಿಮಾನಯಾನ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದ ನಂತರ ಮೇ 21 ರಂದು ಇದಕ್ಕೆ ಸಂಬಂಧಿಸಿದ ಆದೇಶ ಹೊರಡಿಸಲಾಗಿದೆ. ಇದರಲ್ಲಿ, ವಿಮಾನ ಪ್ರಯಾಣದ ಅಂತರದ ಆಧಾರದ ಮೇಲೆ ಶುಲ್ಕ ಶುಲ್ಕ ಶ್ರೇಣಿ ನಿರ್ಧರಿಸಲಾಗಿತ್ತು. ಕೋವಿಡ್ ಕೊವಿಡ್ ಮಹಾಮಾರಿ ಹರಡಿದ ನಂತರ, ಸಚಿವಾಲಯವು ದೇಶೀಯ ವಿಮಾನಯಾನ ಶುಲ್ಕ ಹೆಚ್ಚಳವನ್ನು ನಿಷೇಧಿಸಿತ್ತು ಮತ್ತು ವಿಮಾನಗಳಿಗೆ ಗರಿಷ್ಠ ಮತ್ತು ಕನಿಷ್ಠ ದರವನ್ನು ನಿಗದಿಪಡಿಸಿತ್ತು.

ವಿಮಾನ ಪ್ರಯಾಣಕ್ಕೆ ಹೆಚ್ಚಾಗುತ್ತಿರುವ ಬೇಡಿಕೆಯಿಂದಾಗಿ, ದರಗಳಲ್ಲಾಗುವ ಭಾರಿ ಹೆಚ್ಚಳವನ್ನು ತಡೆಯಲು ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದ್ದು, ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚವನ್ನು ಖಚಿತಪಡಿಸಿಕೊಳ್ಳಲು ಕಡಿಮೆ ಮಿತಿಯನ್ನು ನಿಗದಿಪಡಿಸಲಾಗಿದೆ. ಜೂನ್‌ನಲ್ಲಿಯೇ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ದೇಶೀಯ ಮಾರ್ಗದಲ್ಲಿ ದರವನ್ನು ನಿಗದಿಪಡಿಸುವುದಾಗಿ ಘೋಷಿಸಿದ್ದರು. ಆ ಸಮಯದಲ್ಲಿ ಈ ಕ್ಯಾಪಿಂಗ್ ಆಗಸ್ಟ್ 24 ಕ್ಕೆ ಇತ್ತು, ಅದನ್ನು ಇದೀಗ ಮತ್ತೆ 3 ತಿಂಗಳುಗಳ ಅವಧಿಗೆ ವಿಸ್ತರಿಸಲಾಗಿದೆ.

ಕ್ಯಾಪಿಂಗ್ ಎಷ್ಟಿದೆ?
ದೇಶೀಯ ವಿಮಾನಗಳಿಗೆ 40 ನಿಮಿಷಗಳಿಗಿಂತ ಕಡಿಮೆ, ಕನಿಷ್ಠ ಶುಲ್ಕವನ್ನು 2,000 ರೂ ಮತ್ತು ಗರಿಷ್ಠ ಶುಲ್ಕವನ್ನು 6,000 ರೂ. 40 ರಿಂದ 60 ನಿಮಿಷಗಳ ಮಿತಿ ಕ್ರಮವಾಗಿ 2,500 ರೂ ಮತ್ತು 7,500 ರೂ. 60 ರಿಂದ 90 ನಿಮಿಷಗಳ ಹಾರಾಟಕ್ಕೆ ಕನಿಷ್ಠ ಶುಲ್ಕವನ್ನು 3,000 ರೂ ಎಂದು ನಿಗದಿಪಡಿಸಲಾಗಿದೆ ಮತ್ತು ಗರಿಷ್ಠ ಶುಲ್ಕ 9,000 ರೂ. ಅದೇ ರೀತಿ 90 ರಿಂದ 120 ನಿಮಿಷಗಳವರೆಗೆ ಈ ಮಿತಿ 3,500 ರೂ ಮತ್ತು 10,000 ರೂ. 120 ನಿಮಿಷದಿಂದ 150 ನಿಮಿಷಗಳ ವಿಮಾನಗಳಿಗೆ, 4,500 ರಿಂದ 13,000 ರೂ. 150 ನಿಮಿಷದಿಂದ 180 ನಿಮಿಷಗಳವರೆಗೆ ಹಾರಾಟಕ್ಕೆ ಕನಿಷ್ಠ 5,500 ರೂ ಮತ್ತು ಗರಿಷ್ಠ 15,570 ರೂ. ನಿಗದಿಪಡಿಸಲಾಗಿದೆ.

Trending News