VIDEO: ಬಾನಂಗಳದಲ್ಲಿ ಗೋಚರಿಸಲಿದ್ದಾನೆ 'ನೀಲಿ ಚಂದಿರ'!

      

Last Updated : Jan 31, 2018, 09:52 AM IST
VIDEO: ಬಾನಂಗಳದಲ್ಲಿ ಗೋಚರಿಸಲಿದ್ದಾನೆ 'ನೀಲಿ ಚಂದಿರ'! title=
Pic: NASA

ವಾಷಿಂಗ್ಟನ್: ಇಂದು 'ಚಂದ್ರ ಗ್ರಹಣ' ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ, ಆದರೆ ಈ ಬಾರಿಯ ಚಂದ್ರ ಗ್ರಹಣ ಅತ್ಯಂತ ಅಪರೂಪದ ಚಂದ್ರಗ್ರಹಣ. ಕಾರಣ, ಅಮೇರಿಕಾ ಬಾಹ್ಯಾಕಾಶ ಸಂಸ್ಥೆಯು ಇಂದು ಬಾನಂಗಳದಲ್ಲಿ 'ನೀಲಿ ಚಂದಿರ' ಗೋಚರಿಸಲಿದ್ದಾನೆ ಎಂದು ತಿಳಿಸಿದೆ. ಇದನ್ನು 'ಸೂಪರ್ ಬ್ಲೂ ಮೂನ್' ಎಂದೂ ಸಹ ಕರೆಯುತ್ತಾರೆ.  

ಈ ಹಿಂದೆ, 2017ರ ಡಿಸೆಂಬರ್ 3 ಹಾಗೂ 2018ರ ಜನವರಿ 1ರಂದು ತಕ್ಕಮಟ್ಟಿಗೆ ನೀಲಿ ಚಂದಿರನ ಗೋಚರವಾಗಿತ್ತು. ಆದರೆ, ಇಂದು (ಜನವರಿ 31) ನೀಲಿ ಚಂದಿರ ಪೂರ್ಣ ಪ್ರಮಾಣದಲ್ಲಿ ಗೋಚರಿಸಲಿದ್ದಾನೆ. ಈ ಮೂರು 'ಸೂಪರ್ ಮೂನ್' ನೋಟ ನೋಡುವುದು ಬಹುಶಃ ಈ ವರ್ಷ ಕೊನೆಯ ಅವಕಾಶ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಇಂದಿನ ಹುಣ್ಣಿಮೆ ಮೂರು ವಿಶೇಷತೆಗಳನ್ನು ಹೊಂದಿದೆ...
ಮೊದಲನೆಯದಾಗಿ ಇದು 36 ವರ್ಷಗಳ ನಂತರ ಸಂಭವಿಸುತ್ತಿರುವ ಸಂಪೂರ್ಣ ಚಂದ್ರಗ್ರಹಣ. ಎರಡನೆಯದಾಗಿ ಚಂದ್ರನು ಸಾಮಾನ್ಯಕ್ಕಿಂತ 14 ಪ್ರತಿಶತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ. ಮೂರನೆಯದಾಗಿ, ಚಂದ್ರನು ತಾಮ್ರ ಹಾಗೂ ನೀಲಿ ವರ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ.

'ಸೂಪರ್ ಬ್ಲೂ ಮೂನ್' ಭೂಮಿಯ ನೆರಳಿನಲ್ಲಿ ಹಾದುಹೋಗುತ್ತಿರುವ ಸಂಪೂರ್ಣ ಚಂದ್ರ ಗ್ರಹಣದ ದೃಶ್ಯವನ್ನು ನೀವೇ ನೋಡಿ... 

Trending News