ಯಾಂಗೋನ್: ಮ್ಯಾನ್ಮಾರ್ ದೇಶದ ಕೌನ್ಸಿಲರ್ ಆಗಿರುವ ಆಂಗ್ ಸಾನ್ ಸೂಕಿ ಅವರ ನಿವಾಸದ ಕಂಪೌಂಡ್ ಬಳಿ ಗುರುವಾರದಂದು ಬೆಳಿಗ್ಗೆ ಪೆಟ್ರೋಲ್ ಬಾಂಬನ್ನು ಎಸೆಯಲಾಗಿದೆ.
ಈ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿನ್ಹುವಾ ಗೆ ನೀಡಿರುವ ಹೇಳಿಕೆಯಲ್ಲಿ ರಾಜ್ಯ ಕೌನ್ಸಿಲರ್ ಕಚೇರಿಯ ನಿರ್ದೇಶಕ-ಜನರಲ್ ಯು ಜಾವ್ ಹೆಟೆ ಸ್ಪಷ್ಟಪಡಿಸಿದ್ದಾರೆ.
ಜಾವ್ ಹೆಟೆಯ ಪ್ರಕಾರ, ದಾಳಿ ನಡೆದ ವೇಳೆಯಲ್ಲಿ ಆಂಗ್ ಸಾನ್ ಸೂಕಿ ನಿವಾಸದಲ್ಲಿರಲಿಲ್ಲ, ಆಗ ಅವರು ಮಯನ್ಮಾರ ರಾಜಧಾನಿ ನಯ್ ಪೈ ಟ್ಯಾವ್ ನಲ್ಲಿದ್ದರು ಎಂದು ವರದಿಯಾಗಿದೆ. ಈವರೆಗೂ ಈ ದಾಳಿಯ ಹಿಂದಿನ ಉದ್ದೇಶ ತಿಳಿದಿಲ್ಲ ಎಂದು ಹೇಳಲಾಗಿದೆ.