ನ್ಯೂಯಾರ್ಕ್: ಭಾರತದ ವಿರುದ್ಧ ಪಾಕಿಸ್ತಾನ (Pakistan) ನಡೆಸಿದ ಮತ್ತೊಂದು ದುಷ್ಕೃತ್ಯ ಪಿತೂರಿ ವಿಫಲವಾಗಿದೆ. ವಿಶ್ವಸಂಸ್ಥೆಯ 1267 ಸಮಿತಿಯಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಯಲ್ಲಿ ಇಬ್ಬರು ಭಾರತೀಯರ ಹೆಸರನ್ನು ಸೇರಿಸಲು ಪಾಕಿಸ್ತಾನ ವಿಫಲವಾಗಿದೆ.
ವಿಶ್ವಸಂಸ್ಥೆಯಲ್ಲಿ ಯುನೈಟೆಡ್ ಕಿಂಗ್ಡಮ್, ಅಮೆರಿಕ, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಪಾಕಿಸ್ತಾನದ ಹಕ್ಕುಗಳನ್ನು ತಿರಸ್ಕರಿಸಿದವು ಮತ್ತು ಈ ಭಾರತೀಯರನ್ನು ಭಯೋತ್ಪಾದಕರು ಎಂದು ಘೋಷಿಸಲು ಪಾಕಿಸ್ತಾನಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.
'ಫೇಕ್ ನ್ಯೂಸ್' ಪ್ರಸಾರ ಮಾಡಿದ್ದಕ್ಕಾಗಿ ಪಾಕಿಸ್ತಾನದ ವಿರುದ್ಧ ಭಾರತದ ವಾಗ್ದಾಳಿ
ಯುಎನ್ (UN) ಸೆಕ್ಯುರಿಟಿ ಕೌನ್ಸಿಲ್ನ ಭಯೋತ್ಪಾದಕರ ಪಟ್ಟಿಯಲ್ಲಿ ಇಬ್ಬರು ಭಾರತೀಯ ನಾಗರಿಕರಾದ ಗೋಬಿಂದ ಪಟ್ನಾಯಕ್ ಮತ್ತು ಅಂಗರ ಅಪ್ಪಾಜಿ ಅವರ ಹೆಸರನ್ನು ಸೇರಿಸಲು ಪಾಕಿಸ್ತಾನ ಬಯಸಿದೆ. ಈ ಇಬ್ಬರು ಭಾರತೀಯರ ವಿರುದ್ಧ ಸಾಕ್ಷ್ಯಗಳನ್ನು ಮಂಡಿಸಲು ವಿಶ್ವಸಂಸ್ಥೆಯ ಸದಸ್ಯರು ಪಾಕಿಸ್ತಾನಕ್ಕೂ ಸಮಯ ನೀಡಿದ್ದರು. ಆದರೆ ಅದು ವಿಫಲವಾಗಿದೆ. ಪಾಕಿಸ್ತಾನವು ಸಾಕ್ಷ್ಯಗಳನ್ನು ಸಂಗ್ರಹಿಸುವವರೆಗೆ ಈ ವಿಷಯವನ್ನು ತಡೆಹಿಡಿಯಲಾಯಿತು, ಆದರೆ ಪಾಕಿಸ್ತಾನವು ಯಾವುದೇ ಪುರಾವೆಗಳನ್ನು ನೀಡಲು ಸಾಧ್ಯವಾಗಲಿಲ್ಲ.
'ಅನೈತಿಕ' ಎಂದು ಕರೆಯುವ ಮೂಲಕ ಐದು ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ ಪಾಕಿಸ್ತಾನ
ವಿಶ್ವಸಂಸ್ಥೆಯ ಭಾರತದ ರಾಯಭಾರಿ, "ಭಯೋತ್ಪಾದನೆಗೆ ಧಾರ್ಮಿಕ ಬಣ್ಣವನ್ನು ನೀಡುವ ಮೂಲಕ 1267 ವಿಶೇಷ ಪ್ರಕ್ರಿಯೆಯನ್ನು ರಾಜಕೀಯಗೊಳಿಸುವ ಪಾಕಿಸ್ತಾನದ ಅಸಹ್ಯಕರ ಪ್ರಯತ್ನವನ್ನು ಯುಎನ್ ಭದ್ರತಾ ಮಂಡಳಿಯು ವಿಫಲಗೊಳಿಸಿದೆ. ಪಾಕಿಸ್ತಾನದ ಈ ಪ್ರಯತ್ನವನ್ನು ನಿಲ್ಲಿಸಿದ ಎಲ್ಲ ಕೌನ್ಸಿಲ್ ಸದಸ್ಯರಿಗೆ ಧನ್ಯವಾದಗಳು ಎಂದಿದ್ದಾರೆ.
Pakistan’s blatant attempt to politicize 1267 special procedure on terrorism by giving it a religious colour, has been thwarted by UN Security Council. We thank all those Council members who have blocked Pakistan’s designs. @MEAIndia @DrSJaishankar @PMOIndia @harshvshringla
— PR UN Tirumurti (@ambtstirumurti) September 2, 2020
ವಾಸ್ತವವಾಗಿ ಕಳೆದ ವರ್ಷ ಮಸೂದ್ ಅಜರ್ ಅವರನ್ನು ಯುಎನ್ ಭಯೋತ್ಪಾದಕ ಎಂದು ಪಟ್ಟಿ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ಇಬ್ಬರು ಭಾರತೀಯರನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವ ಪಾಕಿಸ್ತಾನದ ಈ ಕ್ರಮವನ್ನು ಸೇಡು ತೀರಿಸಿಕೊಳ್ಳುವ ಕ್ರಮವಾಗಿ ನೋಡಲಾಗುತ್ತಿದೆ. ಯುಎನ್ ಘೋಷಿತ ಭಯೋತ್ಪಾದಕ ಮಸೂದ್ ಅಜರ್ ಪಾಕಿಸ್ತಾನದ ಭೂಮಿಯಿಂದ ಕಾರ್ಯ ನಿರ್ವಹಿಸುತ್ತಿರುವ ಜೈಶ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥರಾಗಿದ್ದು, ಪುಲ್ವಾಮಾ ಸೇರಿದಂತೆ ಭಾರತದಲ್ಲಿ ಹಲವಾರು ದಾಳಿಗಳ ಹೊಣೆ ಹೊತ್ತಿದ್ದಾನೆ.