ಖಾಸಗಿ ಸಂವಹನವನ್ನು ಬಹಿರಂಗಪಡಿಸಿದ ರಿಪಬ್ಲಿಕ್ ಟಿವಿ ಕ್ರಮದಿಂದ ತೀವ್ರ ನಿರಾಸೆಯಾಗಿದೆ- ಬಾರ್ಕ್

ಖಾಸಗಿ ಮತ್ತು ಗೌಪ್ಯ ಸಂವಹನಗಳನ್ನು ಬಹಿರಂಗಪಡಿಸುವ ಮೂಲಕ ಮತ್ತು ಅದನ್ನು ತಪ್ಪಾಗಿ ನಿರೂಪಿಸುವ ಮೂಲಕ ರಿಪಬ್ಲಿಕ್ ನೆಟ್‌ವರ್ಕ್‌ನ ಕ್ರಮಗಳ ಬಗ್ಗೆ ತೀವ್ರ ನಿರಾಶೆಯಾಗಿದೆ ಎಂದು ಬಾರ್ಕ್ ಭಾನುವಾರ ಹೇಳಿದೆ.

Last Updated : Oct 18, 2020, 05:38 PM IST
ಖಾಸಗಿ ಸಂವಹನವನ್ನು ಬಹಿರಂಗಪಡಿಸಿದ ರಿಪಬ್ಲಿಕ್ ಟಿವಿ ಕ್ರಮದಿಂದ ತೀವ್ರ ನಿರಾಸೆಯಾಗಿದೆ- ಬಾರ್ಕ್  title=
ಸಾಂದರ್ಭಿಕ ಚಿತ್ರ

ನವದೆಹಲಿ: ಖಾಸಗಿ ಮತ್ತು ಗೌಪ್ಯ ಸಂವಹನಗಳನ್ನು ಬಹಿರಂಗಪಡಿಸುವ ಮೂಲಕ ಮತ್ತು ಅದನ್ನು ತಪ್ಪಾಗಿ ನಿರೂಪಿಸುವ ಮೂಲಕ ರಿಪಬ್ಲಿಕ್ ನೆಟ್‌ವರ್ಕ್‌ನ ಕ್ರಮಗಳ ಬಗ್ಗೆ ತೀವ್ರ ನಿರಾಶೆಯಾಗಿದೆ ಎಂದು ಬಾರ್ಕ್ ಭಾನುವಾರ ಹೇಳಿದೆ.

'ನಡೆಯುತ್ತಿರುವ ತನಿಖೆಯ ಬಗ್ಗೆ ಬಾರ್ಕ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಇದು ಕಾನೂನು ಜಾರಿ ಸಂಸ್ಥೆಗೆ ಅಗತ್ಯವಾದ ನೆರವು ನೀಡುತ್ತಿದೆ. ಖಾಸಗಿ ಮತ್ತು ಗೌಪ್ಯ ಸಂವಹನಗಳನ್ನು ಬಹಿರಂಗಪಡಿಸುವ ಮೂಲಕ ಮತ್ತು ಅದನ್ನು ತಪ್ಪಾಗಿ ನಿರೂಪಿಸುವ ಮೂಲಕ ರಿಪಬ್ಲಿಕ್ ನೆಟ್‌ವರ್ಕ್‌ನ ಕ್ರಮಗಳಿಂದ ಬಾರ್ಕ್ ತೀವ್ರ ನಿರಾಶೆಗೊಂಡಿದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಟಿಆರ್‌ಪಿ ರೇಟಿಂಗ್ ತಿರುಚುವ ದಂಧೆ ಭೇದಿಸಿದ ಮುಂಬೈ ಪೋಲಿಸ್

ಅಕ್ಟೋಬರ್ 16 ರಂದು ರಿಪಬ್ಲಿಕ್ ನೆಟ್‌ವರ್ಕ್‌ನ ಸಿಇಒ ವಿಕಾಸ್ ಖನ್‌ಚಂದಾನಿ ಅವರು ತಮ್ಮ ವಿರುದ್ಧದ ತನಿಖೆಯಲ್ಲಿ ಸಂಸ್ಥೆಯ ವಿಜಿಲೆನ್ಸ್ ತಂಡವು ಯಾವುದೇ ತಪ್ಪನ್ನು ಕಂಡುಕೊಂಡಿಲ್ಲ ಎಂದು ಖಚಿತಪಡಿಸಬೇಕು ಎಂದು ಕೋರಿ ಬಾರ್ಕ್ ಗೆ ಇಮೇಲ್ ಬರೆದಿದ್ದರು. ಆದರೆ ಅಕ್ಟೋಬರ್ 17 ರಂದು ಬಾರ್ಕ್ ಇದನ್ನು ಇಮೇಲ್ ಮಾಡಿದೆ ಎಂದು ರಿಪಬ್ಲಿಕ್ ನೆಟ್ವರ್ಕ್ ಹೇಳಿಕೊಂಡಿದೆ.

ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ಹಗರಣದ ಹಿನ್ನೆಲೆಯಲ್ಲಿ ಅಕ್ಟೋಬರ್ 15 ರಂದು, ಭಾಷೆಗಳಾದ್ಯಂತ ಸುದ್ದಿ ಚಾನೆಲ್‌ಗಳ ಸಾಪ್ತಾಹಿಕ ರೇಟಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಬಾರ್ಕ್ ಘೋಷಿಸಿತ್ತು.

ಕೆಲವು ವರದಿಗಳ ಪ್ರಕಾರ, ಮುಂಬೈ ಪೊಲೀಸರು ಈವರೆಗೆ ಆರು ಜನರನ್ನು ನಿರ್ದಿಷ್ಟ ಚಾನೆಲ್‌ಗಳ ರೇಟಿಂಗ್‌ಗಳ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಬಂಧಿಸಿದ್ದಾರೆ.

Trending News