ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲು ದೀಪಾವಳಿಯ 'ಲಕ್ಷ್ಮಿ ಪೂಜೆ'ಯಂದು ಈ ತಪ್ಪುಗಳನ್ನು ಮಾಡಬೇಡಿ

ಎಲ್ಲಿ ಸ್ವಚ್ಛತೆ, ಸಂತೋಷವಿರುತ್ತದೆಯೋ ಆ ಮನೆಯನ್ನು ಲಕ್ಷ್ಮಿ ಪ್ರವೇಶ ಮಾಡ್ತಾಳೆ

Last Updated : Nov 9, 2020, 03:33 PM IST
  • ದೀಪಾವಳಿಯಂದು ಮನೆಯಲ್ಲಿ ಸುಖ-ಸಮೃದ್ಧಿಗಾಗಿ ದೇವಿ ಲಕ್ಷ್ಮಿಯ ಆರಾಧನೆ ಮಾಡ್ತಾರೆ
  • ಲಕ್ಷ್ಮಿ ಪೂಜೆಯ ದಿನ ಮನೆಯ ಹಿರಿಯರನ್ನು ಗೌರವಿಸಬೇಕು
  • ಎಲ್ಲಿ ಸ್ವಚ್ಛತೆ, ಸಂತೋಷವಿರುತ್ತದೆಯೋ ಆ ಮನೆಯನ್ನು ಲಕ್ಷ್ಮಿ ಪ್ರವೇಶ ಮಾಡ್ತಾಳೆ
ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲು ದೀಪಾವಳಿಯ 'ಲಕ್ಷ್ಮಿ ಪೂಜೆ'ಯಂದು ಈ ತಪ್ಪುಗಳನ್ನು ಮಾಡಬೇಡಿ title=
Image courtesy: Zee5

ದೀಪಾವಳಿಯಂದು ಮನೆಯಲ್ಲಿ ಸುಖ-ಸಮೃದ್ಧಿ, ವೈಭವಕ್ಕಾಗಿ ಭಕ್ತರು ದೇವಿ ಲಕ್ಷ್ಮಿಯ ಆರಾಧನೆ ಮಾಡ್ತಾರೆ. ಆದ್ರೆ, ಈ ದಿನ ನಾವು ಮಾಡುವ ಕೆಲವೊಂದು ಕೆಲಸ ದೇವಿಯ ಮುನಿಸಿಗೆ ಕಾರಣವಾಗುತ್ತದೆ. ವರ್ಷ ಪೂರ್ತಿ ದೇವಿ ಅವಕೃಪೆ ನಮ್ಮ ಮೇಲಿದ್ದು, ಬಡತನ, ಕಷ್ಟ, ಆರ್ಥಿಕ ಸಂಕಷ್ಟ ನಮ್ಮನ್ನು ಕಾಡುತ್ತೆದೆ. ಹಾಗಾಗಿ ಮರೆತೂ ದೀಪಾವಳಿ(Diwali) ಯಂದು ಲಕ್ಷ್ಮಿ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.

ಈ ದಿನ ಸಂಜೆ ಹೊತ್ತಿನಲ್ಲಿ ಮಲಗಬಾರದು. ಇದ್ರಿಂದ ಮನೆಯಲ್ಲಿ ದರಿದ್ರ ಆವರಿಸುತ್ತದೆ. ಯಾಕೆಂದ್ರೆ ಸಂಜೆ ಹೊತ್ತಿನಲ್ಲಿ ತಾಯಿ ಲಕ್ಷ್ಮಿ ಮನೆಗೆ ಬರ್ತಾಳೆ. ಈ ವೇಳೆ ಮಲಗಿದ್ರೆ ತಾಯಿ ಕೋಪಗೊಂಡು ಮನೆಯಿಂದ ವಾಪಸ್ ಹೋಗ್ತಾಳೆ ಎಂದು ಹೇಳಲಾಗುತ್ತದೆ. 

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಮಗೆ ಈ ಕನಸುಗಳು ಬಿದ್ರೆ ಅಷ್ಟೈಶ್ವರ್ಯ ಪ್ರಾಪ್ತಿ..!
ಲಕ್ಷ್ಮಿ ಪೂಜೆಯ ದಿನ ಮನೆಯ ಹಿರಿಯರನ್ನು ಗೌರವಿಸಬೇಕು. ಮರೆತೂ ಅವರಿಗೆ ಕೆಟ್ಟ ಶಬ್ದಗಳ ಪ್ರಯೋಗ ಮಾಡಬಾರದು. ಹಿರಿಯರನ್ನು ಪ್ರೀತಿಯಿಂದ ನೋಡಿಕೋಡ್ರೆ ಲಕ್ಷ್ಮಿ ಪ್ರಸನ್ನಳಾಗ್ತಾಳೆ.
ಈ ದಿನ ಕುಟುಂಬಸ್ಥರು ಗಲಾಟೆ, ಜಗಳ ಮಾಡಬಾರದು. ಶಾಂತವಾಗಿ, ಪ್ರೀತಿಯಿಂದಿರುವ ಮನೆಯನ್ನು ಮಾತ್ರ ಲಕ್ಷ್ಮಿ ಪ್ರವೇಶ ಮಾಡ್ತಾಳೆ.

ಕರೋನಾ: ಈ ರಾಜ್ಯ ಸರ್ಕಾರದಿಂದ ದೀಪಾವಳಿ ಮಾರ್ಗಸೂಚಿ ಬಿಡುಗಡೆ, ಪ್ರಮುಖ ವಿಷಯಗಳನ್ನು ತಿಳಿಯಿರಿ
ಎಲ್ಲಿ ಸ್ವಚ್ಛತೆ, ಸಂತೋಷವಿರುತ್ತದೆಯೋ ಆ ಮನೆಯನ್ನು ಲಕ್ಷ್ಮಿ ಪ್ರವೇಶ ಮಾಡ್ತಾಳೆ. ಹಾಗಾಗಿ ಮನೆಯ ಪ್ರತಿಯೊಂದು ಭಾಗವನ್ನೂ ಸ್ವಚ್ಛಗೊಳಿಸಬೇಕು. ಮನೆಯ ಹೊರಗೆ ರಂಗೋಲಿ ಹಾಕಬೇಕು. ಜೊತೆಗೆ ಹೂವಿನ ಮಾಲೆಯನ್ನು ಹಾಕಿ ಅಲಂಕಾರ ಮಾಡಬೇಕು.

Trending News