ಶಬರಿಮಲೆಗೆ ತೆರಳುವ ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಶಬರಿಮಲೆ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಭಕ್ತರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಲೇಬೇಕು

Last Updated : Nov 9, 2020, 04:50 PM IST
  • ಶಬರಿಮಲೆ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಭಕ್ತರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಲೇಬೇಕು
  • ಕೇರಳದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಹೊರಡಿಸಿರುವ ಮಾರ್ಗಸೂಚಿ
  • ವೆಬ್‍ಸೈಟ್‍ನ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಣಿ
ಶಬರಿಮಲೆಗೆ ತೆರಳುವ ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ title=
Image Courtesy ZEE5

ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರ ಶ್ರೀ ಶಬರಿಮಲೆ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಭಕ್ತರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಲೇಬೇಕು. ಕೇರಳದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ ಶ್ರೀ ಕ್ಷೇತ್ರ ಶಬರಿಮಲೆಗೆ ತೆರಳುವ ಭಕ್ತರು ಸರ್ಕಾರ ಹೊರಡಿಸಿರುವ ಈ ಮಾರ್ಗಸೂಚಿಗಳನ್ನು ಕಡ್ಡಾಯವಗಿ ಪಾಲನೆ ಮಾಡಲೇಬೇಕೆಂದು ಸೂಚನೆ ನೀಡಿದೆ.

ಈ ಬಾರಿ ಕೋವಿಡ್(covid-19) ಹಿನ್ನೆಲೆಯಲ್ಲಿ ಕೆಲವು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ ಭಕ್ತರು ಸಹಕರಿಸಬೇಕೆಂದು ಕೋರಲಾಗಿದೆ.

Corona ದಿಂದ ರಕ್ಷಣೆ ಒದಗಿಸಲಿದೆಯಂತೆ BCG Vaccine, ರಿಸರ್ಚ್ ನಿಂದ ತಿಳಿದುಬಂದಿದೆ ಈ ಸಂಗತಿ

ಮಾರ್ಗಸೂಚಿಗಳು: ಎಲ್ಲಾ ಯಾತ್ರಾತ್ರಿಗಳು ವೆಬ್‍ಸೈಟ್‍ನ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಅನುಮತಿ ನೀಡಿದವರಿಗೆ ಮಾತ್ರ ಶಬರಿಮಲೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ 1 ಸಾವಿರ ಯಾತ್ರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಾರಾಂತ್ಯದಲ್ಲಿ ಪ್ರತಿದಿನ 2 ಸಾವಿರ ಹಾಗೂ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಮುಂದಿನ ಮಹಾಮಾರಿಗೆ ಸಿದ್ಧರಾಗಿ, ವಿಶ್ವದ ನಾಯಕರುಗಳಿಗೆ WHO ಎಚ್ಚರಿಕೆ

ಶಬರಿಗೆ ಭೇಟಿ ನೀಡುವ 48 ಗಂಟೆ ಅವಧಿಗೆ ಮುನ್ನ ಕೋವಿಡ್ -19 ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಪ್ರವೇಶ ಸ್ಥಳದಲ್ಲಿ ಆಂಟಿಜನ್ ಟೆಸ್ಟ್ ವ್ಯವಸ್ಥೆ ಮಾಡಲಾಗಿದ್ದು, ಇದರ ವೆಚ್ಚವನ್ನು ಭಕ್ತರೇ ಭರಿಸಬೇಕು. 10 ವರ್ಷಕ್ಕೊಳಪಟ್ಟು ಮತ್ತು 60ರಿಂದ 65 ವರ್ಷ ಮೇಲ್ಪಟ್ಟವರು ಹಾಗೂ ಕಾಯಿಲೆ ಲಕ್ಷಣಗಳಿರುವ ಇರುವಂತವರಿಗೆ ಅನುಮತಿ ಇರುವುದಿಲ್ಲ.

ಮೆಗಾಸ್ಟಾರ್ ಚಿರಂಜೀವಿಗೆ ಕರೊನಾ..!

ಬಿಪಿಎಲ್(BPL) ಕಾರ್ಡ್, ಆಯುಷ್ಮಾನ್ ಕಾರ್ಡ್ ಸೇರಿದಂತೆ ಇತ್ಯಾದಿ ಕಾರ್ಡ್ ಹೊಂದಿರುವವರು ಯಾತ್ರೆಗೆ ತೆರಳುವ ಸಂದರ್ಭದಲ್ಲಿ ತಮ್ಮ ಬಳಿ ಇಟ್ಟುಕೊಳ್ಳಬೇಕು. ತುಪ್ಪದ ಅಭಿಷೇಕ, ಪಂಪಾನದಿ ಸ್ನಾನ, ಸನ್ನಿಧಾನದಲ್ಲಿ ರಾತ್ರಿ ತಂಗುವುದು ಹಾಗೂ ಪಂಪಾ ಮತ್ತು ಗಣಪತಿ ಕೋವಿಲ್‍ಗೆ ಅವಕಾಶವಿರುವುದಿಲ್ಲ.

ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ: AIIMS ನಿರ್ದೇಶಕರು ಹೇಳಿದ್ದಿಷ್ಟು

ಯಾತ್ರಾತ್ರಿಗಳ ಪ್ರಯಾಣಕ್ಕೆ ಏರುಮೇಲು ಮತ್ತು ವೇದಸಾರಿಖರ ಮಾರ್ಗದಲ್ಲಿ ಮಾತ್ರ ಅವಕಾಶವಿರುತ್ತದೆ. ಯಾತ್ರಾತ್ರಿಗಳು https://sabarimalaonline.org/ ವೆಬ್‍ಸೈಟ್‍ನಲ್ಲಿ ಹೆಸರುಗಳನ್ನು ನೋಂದಾಯಿಸಬೇಕು.

Trending News