ನವದೆಹಲಿ: ಕರೋನಾ ಮಹಾಮಾರಿ ಇಡೀ ವಿಶ್ವದ ಸ್ವರೂಪವನ್ನೇ ಬದಲಾಯಿಸಿದೆ. ಕರೋನಾ ಸಾಂಕ್ರಾಮಿಕ ರೋಗವು ಲಕ್ಷಾಂತರ ಸಾವುಗಳಿಗೆ ಕಾರಣವಾಗಿದೆ ಮತ್ತು ವಿಶ್ವಾದ್ಯಂತ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಮುಂದಿನ ಸಾಂಕ್ರಾಮಿಕ ರೋಗ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಆದರೆ ಅದಕ್ಕೂ ಮುನ್ನವೇ ವಿಶ್ವ ಆರೋಗ್ಯ ಸಂಸ್ಥೆ ಮುಂಬರುವ ಸಾಂಕ್ರಾಮಿಕ ರೋಗದ ಬಗ್ಗೆ ವಿಶ್ವದ ನಾಯಕರುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ 73 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ (WHA) ಶುಕ್ರವಾರ ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಯಾರಿ ನಡೆಸುವಂತೆ ವಿಶ್ವದ ನಾಯಕರುಗಳನ್ನು ಕೋರಿದೆ. ವಿಶ್ವ ಆರೋಗ್ಯ ಅಸೆಂಬ್ಲಿಯ ಈ ಸಭೆಯನ್ನುವರ್ಚ್ಯುಅಲ್ ರೂಪದಲ್ಲಿ ನಡೆಸಲಾಗಿದೆ.
ಇದನ್ನು ಓದಿ- 2022ರ ಮೊದಲು ಯುವ, ಆರೋಗ್ಯವಂತ ಜನರಿಗೆ ಸಿಗಲ್ಲವಂತೆ ಕರೋನಾ ಲಸಿಕೆ: WHO ಹೇಳಿದ್ದೇನು?
ಮುಂದಿನ ಸಾಂಕ್ರಾಮಿಕ ರೋಗಕ್ಕೆ ನಾವು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕರೋನಾ ವೈರಸ್ ಸೋಂಕನ್ನು ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ನಿವಾರಿಸುವಲ್ಲಿ ಬಲವಾದ ತುರ್ತು ಆರೋಗ್ಯ ಮೂಲಸೌಕರ್ಯ ಹೊಂದಿರುವ ದೇಶಗಳು ವೇಗವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿವೆ ಎಂದು ನಾವು ಈ ವರ್ಷ ನೋಡಿದ್ದೇವೆ. ಆರೋಗ್ಯ ಸೇವೆಗಳ ಬಗ್ಗೆ ಒಂದು ದೇಶವು ಸಾಕಷ್ಟು ಗಮನ ಹರಿಸಿದಾಗ ಮಾತ್ರ ಸ್ಥಿರ ಪ್ರಪಂಚದ ಅಡಿಪಾಯ ಸಾಧ್ಯ ಎಂದು ಡಬ್ಲ್ಯುಎಚ್ಒ ಎತ್ತಿ ತೋರಿಸಿದೆ. ಕರೋನಾ ಸಾಂಕ್ರಾಮಿಕವು ಒಂದು ರೀತಿಯಲ್ಲಿ ಜ್ಞಾಪಕವಾಗಿದೆ ಎಂದು ಅಂತರರಾಷ್ಟ್ರೀಯ ಸಂಸ್ಥೆ ಹೇಳಿದೆ, ಆರೋಗ್ಯವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯ ಅಡಿಪಾಯವಾಗಿದೆ ಎಂಬುದನ್ನು ಇದು ನಮಗೆ ನೆನಪಿಸಿದೆ ಅಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ಹೇಳಿದೆ.
ಇದನ್ನು ಓದಿ- WHO ತಪ್ಪಿನ ಕಾರಣ ಹರಡಿದೆ Coronavirus? WHO ಮುಖ್ಯಸ್ಥರ ರಾಜೀನಾಮೆಗೆ ಹೆಚ್ಚಾದ ಒತ್ತಡ
ಕರೋನಾ ವೈರಸ್ ಹರಡುವಿಕೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ದೇಶಗಳನ್ನು ಶ್ಲಾಘಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಇದು ಜಾಗತಿಕ ಬಿಕ್ಕಟ್ಟಾಗಿದ್ದರೂ, ಅನೇಕ ದೇಶಗಳು ಮತ್ತು ನಗರಗಳು ವೈರಸ್ ಅನ್ನು ವಿಶಾಲ ಸಾಕ್ಷ್ಯ ಆಧಾರಿತ ವಿಧಾನದಿಂದ (ಎವಿಡೆ ಬೇಸ್ಡ್ ಅಪ್ರೋಚ್) ಯಶಸ್ವಿಯಾಗಿ ವೈರಸ್ ಹರಡುವಿಕೆಯನ್ನುಯಶಸ್ವಿಯಾಗಿ ತದೆಗತ್ತಿವೆ ಅಥವಾ ಅಥವಾ ನಿಯಂತ್ರಿಸಿವೆ. ಆದರೂ ಕೂಡ ಕೋವಿಡ್ -19 ವಿರುದ್ಧ 'ವಿಜ್ಞಾನ, ಪರಿಹಾರ ಮತ್ತು ಒಗ್ಗಟ್ಟನ್ನು' ಸಂಯೋಜಿಸುವ ಮೂಲಕ ಮಾತ್ರ ಹೋರಾಡಬಹುದು ಎಂದು ಡಬ್ಲ್ಯುಎಚ್ಒ ಒತ್ತಿ ಹೇಳಿದೆ.
ಇದನ್ನು ಓದಿ- ಇನ್ನೂ ಎಷ್ಟು ತಿಂಗಳು ಮುಂದುವರೆಯಲಿದೆ ಕರೋನಾ ಕಾಳಗ, ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ಕರೋನಾ ವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ರಾಷ್ಟ್ರಗಳ ಕೊಡುಗೆಯನ್ನು ಎತ್ತಿ ತೋರಿಸಿದ ಅಂತರರಾಷ್ಟ್ರೀಯ ಸಂಸ್ಥೆ, ಇದು ಅಭೂತಪೂರ್ವ ಘಟನೆಯಾಗಿದ್ದು, ಲಸಿಕೆ ಖರೀದಿ ತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಆರೋಗ್ಯ ರಕ್ಷಣೆಯೊಂದಿಗೆ ಇಡೀ ಜಗತ್ತು ಒಟ್ಟಾಗಿ ಕೆಲಸ ಮಾಡುತ್ತಿದೆ. ಒಟ್ಟಾರೆ ಗುಣಮಟ್ಟ ಸುಧಾರಿಸುತ್ತಿದೆ. ಕರೋನಾ ಲಸಿಕೆ ಮತ್ತು ಅದರ ಪ್ರಯೋಗದ ವೇಗವನ್ನು ಹೆಚ್ಚಿಸುವ ಯೋಜನೆಯಲ್ಲಿ ಇಡೀ ಜಗತ್ತು ಒಟ್ಟಾಗಿ ಕೆಲಸ ಮಾಡಿದೆ ಎಂದು ತನ್ನ ಹೇಳಿಕೆಯಲ್ಲಿ ಜಾಗತಿಕ ಸಂಘಟನೆ ತಿಳಿಸಿದೆ. ಆದರೆ ಈಗ ನಾವು ಲಸಿಕೆ ಜಗತ್ತಿಗೆ ಬಿಡುಗಡೆಯಾದಾಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಇದು ಎಲ್ಲಾ ದೇಶಗಳಿಗೂ ಸಮನಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸಂಸ್ಥೆ ಹೇಳಿದೆ.