ವೈರಲ್ ವಿಂಕ್ 'ಪ್ರಿಯಾ ವಾರಿಯರ್' ಸ್ಯಾಂಡಲ್ ವುಡ್ ಗೆ ಬರ್ತಾರಂತೆ !

    

Last Updated : Feb 22, 2018, 06:32 PM IST
ವೈರಲ್ ವಿಂಕ್ 'ಪ್ರಿಯಾ ವಾರಿಯರ್' ಸ್ಯಾಂಡಲ್ ವುಡ್ ಗೆ ಬರ್ತಾರಂತೆ ! title=

ಬೆಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸುನಾಮಿಯ ಅಲೆಯನ್ನೇ ಸೃಷ್ಟಿಸಿದ್ದ ಕಣ್ಸನ್ನೆ ಕುವರಿ ಪ್ರಿಯಾ ವಾರಿಯರ್ ಚಂದನವನದಲ್ಲಿ ಲವ್ ಗನ್ ಮೂಲಕ ಕನ್ನಡಿಗರ ಹೃದಯ ಕದಿಯಲು ಬರುತ್ತಿದ್ದಾರೆ ಎನ್ನುವ ಸುದ್ದಿಯೊಂದು ಗಾಂಧಿ ನಗರದಲ್ಲಿ ಸುಳಿದಾಡುತ್ತಿದೆ.

ಹಾಗಾದ್ರೆ ಈ ಚಿತ್ರ ಯಾವುದೆನ್ನುತ್ತಿರಾ? ಯೋಗಿ ಲವ್ಸ್ ಸುಪ್ರಿಯಾ ಎನ್ನುವ ಚಿತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿದೆ. ಒರು ಅದಾರ್ ಲವ್ ಚಿತ್ರ ದ ಟಿಸರ್ ನಲ್ಲಿ ಕೇವಲ್ ಕಣ್ಸನ್ನೆ ಮಾಡುವುದಕ್ಕೆ ಸಾಕಷ್ಟು ಹವಾ ಎಬ್ಬಿಸಿದ್ದ ಈ ಮಲಿಯಾಳಿ ಪೋರಿ. ಕೊನೆಗೆ ಯೋಗಿಯ ಪ್ರಯತ್ನದಿಂದಾಗಿ ಕನ್ನಡಕ್ಕೆ ಬರುವುದು ಖಚಿತವೆನ್ನುತ್ತಿವೆ ಗಾಂಧಿ ನಗರದ ಮೂಲಗಳು.

ಚಿತ್ರದ ಕತೆ ಕೇಳಿ ಒಪ್ಪಿಗೆ ನೀಡಿರುವ ಪ್ರಿಯಾ ವಾರಿಯರ್, ಇನ್ನು ಕೇವಲ ಅಂತಿಮ ಹಂತದ ಮಾತುಕತೆಯೊಂದಿಗೆ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕೇವಲ ಕಣ್ಸನ್ನೆಗೆ ಇಷ್ಟು ಪ್ರಸಿದ್ದಿ ಪಡೆದಿರುವ ಪ್ರಿಯಾ ವಾರಿಯರ್ ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಿಂದ ಸಾಕಷ್ಟು ಆಫರ್ ಗಳು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Trending News