ನವದೆಹಲಿ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ದಿನವಿಡೀ ಟ್ರೆಂಡಿಂಗ್ ನಲ್ಲಿದ್ದಾರೆ, ಇದಕ್ಕೆ ಕಾರಣವೇನೆಂದರೆ ಮುಂಬರುವ ಅವರ ಚಿತ್ರ 'ಮೇಡೇ' ನಲ್ಲಿ ಅವರು ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪಾಕೆಟ್ ಮನಿಗಾಗಿ ಕನ್ನಡಕ್ಕೆ ಬಂದ ಈ ನಟಿ ಬಾಲಿವುಡ್ ನಲ್ಲಿ ಫುಲ್ ಮಿಂಚಿಂಗ್..!
Can’t express how thrilled iam to be on board ( literally 😝) as a copilot in #MAYDAY . It’s a dream come true to work with @SrBachchan sir . @ajaydevgn thankyouuu and preparing for takeoff ✈️ 💪🏼💪🏼 https://t.co/SLBLVEpTg4
— Rakul Singh (@Rakulpreet) November 19, 2020
ಖ್ಯಾತ ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನು ಮೊದಲು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಕುಲ್ ಪ್ರೀತ್ ಸಿಂಗ್ 'ಸಹ ಪೈಲೆಟ್ ಆಗಿ ಮೇ ಡೇಯಲ್ಲಿ ನಟಿಸುತ್ತಿರುವುದಕ್ಕೆ ನಾನು ಎಷ್ಟು ಸಂತಸಗೊಂಡಿದ್ದೇನೆ ಎಂಬುದನ್ನು ವ್ಯಕ್ತಪಡಿಸಲಾಗುತ್ತಿಲ್ಲ, ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸುವಂತಹ ನನ್ನ ಕನಸು ನನಸಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ ಅವರು ಅಜಯ್ ದೇವಗನ್ ಅವರಿಗೂ ಕೂಡ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ತನ್ನ Bikini ಪೋಸ್ ಕುರಿತು Bold ಹೇಳಿಕೆ ನೀಡಿದ Rakul Preet Singh
ಅಮೀತಾಬ್ ಬಚ್ಚನ್ ಮತ್ತು ಅಜಯ್ ದೇವ್‌ಗನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಮೇಡೇ' ಚಿತ್ರದಲ್ಲಿ ರಾಕುಲ್ ಪ್ರೀತ್ ಸಹ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರವನ್ನು ಅಜಯ್ ದೇವ್‌ಗನ್ ನಿರ್ಮಿಸಿ ನಿರ್ದೇಶಿಸಲಿದ್ದಾರೆ.