Moderna Vaccine ಸಾರ್ವಜನಿಕ ಬಳಕೆಗೆ ಅನುಮತಿ ನೀಡಿದ ಅಮೇರಿಕಾ, ಟ್ವೀಟ್ ಮೂಲಕ ಮಾಹಿತಿ ನೀಡಿದ Trumph

Moderna Vaccine: ಅಮೆರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡುವ ಮೂಲಕ ಮಾಡರ್ನಾ (Moderna Vaccine) ಲಸಿಕೆಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Written by - Nitin Tabib | Last Updated : Dec 18, 2020, 08:55 PM IST
  • Moderna ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕಿನ್ಸ್ ಬಳಕೆಗೆ ಅಮೆರಿಕಾದಲ್ಲಿ ಅನುಮೋದನೆ.
  • ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
  • ಶೀಘ್ರದಲ್ಲಿಯೇ ವ್ಯಾಕ್ಸಿನ್ ವಿತರಣೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದ ಡೊನಾಲ್ಡ್ ಟ್ರಂಪ್
Moderna Vaccine ಸಾರ್ವಜನಿಕ ಬಳಕೆಗೆ ಅನುಮತಿ ನೀಡಿದ ಅಮೇರಿಕಾ, ಟ್ವೀಟ್ ಮೂಲಕ ಮಾಹಿತಿ ನೀಡಿದ Trumph title=
Moderna Vaccine (Photo: File)

ವಾಷಿಂಗ್ಟನ್: Moderna Vaccine: ಮಾಡರ್ನಾ ವ್ಯಾಕ್ಸಿನ್ ಗೆ ಅನುಮತಿ ನೀಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಈ ಮಾಹಿತಿ ನೀಡಿದ್ದು,  ಶೀಘ್ರದಲ್ಲಿಯೇ ವ್ಯಾಕ್ಸಿನ್ ವಿತರಣೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಈ ಕುರಿತು ಹೇಳಿರುವ ಟ್ರಂಪ್ ಯುರೋಪ್ ಹಾಗೂ ವಿಶ್ವದ ಇತರೆ ದೇಶಗಳು ಅದರಲ್ಲೂ ವಿಶೇಷವಾಗಿ ಜರ್ಮನಿ, ಫ್ರಾನ್ಸ್, ಸ್ಪೇನ್ ಹಾಗೂ ಇಟಲಿ ದೇಶಗಳು ಚೀನಾ ವೈರಸ್ ನ ಕೆಟ್ಟ ಪ್ರಭಾವಕ್ಕೆ ಒಳಗಾಗಿವೆ. ಹೀಗಾಗಿ ಇದೀಗ ವ್ಯಾಕ್ಸಿನ್ ಬಿಡುಗಡೆಯಾಗಿದೆ ಎಂದಿದ್ದಾರೆ.

ಇದನ್ನು ಓದಿ- ರಷ್ಯಾದ ಸ್ಪುಟ್ನಿಕ್ ವಿ ಕೊರೊನಾ ಲಸಿಕೆ ಫಿಜರ್, ಮಾಡರ್ನಾ ಗಿಂತಲೂ ಅಗ್ಗ...!

ಅಮೆರಿಕಾದಲ್ಲಿ ಫೈಜರ್ ಮೂಲಕ ಅಭಿವೃದ್ಧಿಪಡಿಸಲಾಗಿರುವ ಕೊವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಪ್ರಸ್ತುತ ಅಲ್ಲಿ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಈ ಲಸಿಕೆಗಳನ್ನು ಆರೋಗ್ಯ ರಕ್ಷಕರಿಗೆ ನೀಡಲಾಗುತ್ತಿದೆ.

ಇದನ್ನು ಓದಿ- Coronavirus ಸಂಕಷ್ಟದ ನಡುವೆಯೇ ಭರವಸೆಯ ಹೇಳಿಕೆ ನೀಡಿದ AstraZeneca

ಮೊರ್ಡಾನಾ (Moderna) ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಆಹಾರ ಮತ್ತು ಔಷಧಿ ಪ್ರಾಧಿಕಾರದ (ಎಫ್‌ಡಿಎ) ಸಲಹಾ ಸಮಿತಿಯು ಇಂದು ಅನುಮೋದನೆ ನೀಡಿದೆ . ಅಮೆರಿಕದಲ್ಲಿ ಇದುವರೆಗೆ 3,10,000 ಕ್ಕೂ ಹೆಚ್ಚು ಜನರು ಕರೋನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದುಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News