/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಕೋಲ್ಕತ್ತಾ: ‘ಈ ಭಾರಿ ಬಿಜೆಪಿ ಬಂಗಾಳ ಚುನಾವಣೆಯಲ್ಲಿ ಎರಡಂಕಿ ದಾಟುವುದೂ ಕಷ್ಟ. ಗೆಲುವಿಗಾಗಿ ಸಾಕಷ್ಟು ಹೆಣಗಾಡಲಿದೆ. ಒಂದು ವೇಳೆ ಅವರು ಗೆದ್ದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ’ ಎಂದು ಖ್ಯಾತ ರಾಜಕೀಯ ನಿಪುಣ ಪ್ರಶಾಂತ್​ ಕಿಶೋರ್​ ಸವಾಲು ಹಾಕಿದ್ದಾರೆ.

ಈ ಘಟನೆ ಬಗ್ಗೆ ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಪ್ರಶಾಂತ್​ ಕಿಶೋರ್(Prashant Kishor)​, ಬಹು ನಿರೀಕ್ಷಿತ ಪಶ್ಚಿಮ ಬಂಗಾಳದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬಂಗಾಳದಲ್ಲಿ ಈ ಭಾರಿ ಅಧಿಕಾರ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ ಈಗಾಗಲೇ ಸಾಕಷ್ಟು ಕಸರತ್ತು ನಡೆಸುತ್ತಿದೆ. ಕಳೆದ ಶನಿವಾರ ಮತ್ತು ಭಾನುವಾರ ಅಮಿತ್​ ಶಾ ಎರಡು ದಿನಗಳ ಬಂಗಾಳ ಪ್ರವಾಸವನ್ನೂ ಕೈಗೊಂಡು ಟಿಎಂಸಿ ಪ್ರಮುಖ 9 ಜನ ಶಾಸಕರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದಾರೆ. ಇದು ಸಾಮಾನ್ಯವಾಗಿ ಆಡಳಿತರೂಢ ಟಿಎಂಸಿ ಪಕ್ಷಕ್ಕೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಈ ಘಟನೆಯಿಂದಾಗಿ ಸಿಎಂ ಮಮತಾ ಬ್ಯಾನರ್ಜಿ ಸಹ ಇಕ್ಕಟ್ಟಿಗೆ ಸಿಲುಕಿದ್ದಾರೆ. 

ಮೋದಿ 'ಮನ್ ಕಿ‌ ಬಾತ್' ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ಕರೆ

ಪ್ರಶಾಂತ್​ ಕಿಶೋರ್​ ತಮ್ಮ ಟ್ವೀಟ್​ನಲ್ಲಿ, " ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಕಷ್ಟು ಹೈಪ್​ ನೀಡುತ್ತಿವೆ. ಆದರೆ, ಮಾಧ್ಯಮಗಳ ಮಾಧ್ಯಮಗಳು ಭಾರೀ ಪ್ರಚಾರದ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡುತ್ತಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ನಾನು ಈ ಕ್ಷೇತ್ರದಿಂದಲೇ ನಿವೃತ್ತಿ ಹೊಂದುತ್ತೇನೆ, ಬರೆದಿಟ್ಟುಕೊಳ್ಳಿ” ಎಂದು ಸವಾಲು ಹಾಕಿದ್ದಾರೆ.

Corona vaccine ಬಗ್ಗೆ ಶುಭ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್

ಐದು ವರ್ಷಗಳ ಕಾಲ ಬಂಗಾಳದ ಆಡಳಿತವನ್ನು ನಮಗೆ ಕೊಡಿ ಬಾಂಗ್ಲಾದೇಶ ವಲಸಿಗರ ಸಮಸ್ಯೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮಿತ್​ ಶಾ ಎರದು ದಿನಗಳ ಪ್ರವಾಸ ಕೈಗೊಂಡ ಮರುದಿನವೇ ಪ್ರಶಾಂತ್​ ಕಿಶೋರ್​ ಅವರ ಈ ಟ್ವೀಟ್​ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಮಿತ್​ ಶಾ ಬಂಗಾಳದಲ್ಲಿ ಕನಿಷ್ಟ 200 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದಾರೆ.

ಮಾತುಕತೆಗೆ ಬರುವಂತೆ ರೈತರಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ಆದರೆ, ಬಿಜೆಪಿ ಪಕ್ಷಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕ ರ್ಯಾಲಿಯನ್ನು ಆಯೋಜಿಸಲು ಉದ್ದೇಶಿಸಿದ್ದಾರೆ. ಮೂಲಗಳ ಪ್ರಕಾರ ಜನವರಿಯಲ್ಲಿ ಕೋಲ್ಕತ್ತಾದಲ್ಲಿ ಬಿಜೆಪಿ ವಿರೋಧಿ ನಾಯಕರ ಜಂಟಿ ರ್ಯಾಲಿಯನ್ನೂ ಆಯೋಜಿಸಲಾಗಿದೆ. ಈ ರ್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಎನ್​ಸಿಪಿ ಪಕ್ಷದ ಶರದ್​ ಪವಾರ್​ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ರ್ಯಾಲಿಗಳು ಯೋಜನೆಯಂತೆ ನಡೆದರೆ ಬಿಜೆಪಿಗೆ ಹಿನ್ನಡೆಯಾಗುವುದು ಖಚಿತ ಎನ್ನಲಾಗುತ್ತಿದೆ.

ಸರ್ಕಾರದ ಚಿಂತೆ ಹೆಚ್ಚಿಸಿದ ಕರೋನವೈರಸ್‌ನ ಹೊಸ ರೂಪಾಂತರ

Section: 
English Title: 
BJP will struggle to cross double digits in Bengal: Prashant Kisho
News Source: 
Home Title: 

ಪ. ಬಂಗಾಳ ಚುನಾವಣೆ: ಬಿಜೆಪಿಗೆ ಸವಾಲು ಎಸೆದ ಪ್ರಶಾಂತ್​ ಕಿಶೋರ್​!

Prashant Kishor: ಪ. ಬಂಗಾಳ ಚುನಾವಣೆ: ಬಿಜೆಪಿಗೆ ಸವಾಲು ಎಸೆದ ಪ್ರಶಾಂತ್​ ಕಿಶೋರ್​!
Yes
Is Blog?: 
No
Tags: 
Facebook Instant Article: 
Yes
Highlights: 

‘ಈ ಭಾರಿ ಬಿಜೆಪಿ ಬಂಗಾಳ ಚುನಾವಣೆಯಲ್ಲಿ ಎರಡಂಕಿ ದಾಟುವುದೂ ಕಷ್ಟ. ಗೆಲುವಿಗಾಗಿ ಸಾಕಷ್ಟು ಹೆಣಗಾಡಲಿದೆ. ಒಂದು ವೇಳೆ ಅವರು ಗೆದ್ದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ’

ಖ್ಯಾತ ರಾಜಕೀಯ ನಿಪುಣ ಪ್ರಶಾಂತ್​ ಕಿಶೋರ್​ ಸವಾಲು

ಐದು ವರ್ಷಗಳ ಕಾಲ ಬಂಗಾಳದ ಆಡಳಿತವನ್ನು ನಮಗೆ ಕೊಡಿ ಬಾಂಗ್ಲಾದೇಶ ವಲಸಿಗರ ಸಮಸ್ಯೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮಿತ್​ ಶಾ ಎರದು ದಿನಗಳ ಪ್ರವಾಸ ಕೈಗೊಂಡ ಮರುದಿನವೇ ಪ್ರಶಾಂತ್​ ಕಿಶೋರ್​ ಅವರ ಈ ಟ್ವೀಟ್​ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣ

Mobile Title: 
ಪ. ಬಂಗಾಳ ಚುನಾವಣೆ: ಬಿಜೆಪಿಗೆ ಸವಾಲು ಎಸೆದ ಪ್ರಶಾಂತ್​ ಕಿಶೋರ್​!
Publish Later: 
No
Publish At: 
Monday, December 21, 2020 - 14:03
Created By: 
Chennabasava A Kashinakunti
Updated By: 
Chennabasava A Kashinakunti
Published By: 
Chennabasava A Kashinakunti
Request Count: 
7