ಬೆಂಗಳೂರು : ಸದಾ ತನ್ನ ವಿಭಿನ್ನ ಕಾರ್ಯಗಳಿಂದ ಸುದ್ದಿಯಲ್ಲಿರುವ ಸಂಸದ ತೇಜಸ್ವಿ ಸೂರ್ಯ ಈಗ ಏರೋ ಶೋದಲ್ಲಿ ಕೂಡಾ ಸದ್ದು ಮಾಡಿದ್ದಾರೆ. ಬೆಂಗಳೂರಿನ ಯಲಹಂಕ ಏರ್ ಬೇಸ್ ನಲ್ಲಿ ನಡೆಯುತ್ತಿರುವ ಏರೋ ಶೋ 2021ರಲ್ಲಿ ತೇಜಸ್ವಿ ಸೂರ್ಯ, ಯುದ್ದ ವಿಮಾನ ತೇಜಸ್ ನಲ್ಲಿ 30 ನಿಮಿಷಗಳವರೆಗೆ ಹಾರಾಟ ನಡೆಸಿದ್ದಾರೆ.
ಏರೋ ಇಂಡಿಯಾ 2021ರ (Aero India) ಭಾಗವಾಗಿ ಬೆಂಗಳೂರಿನ ಯಲಹಂಕದಲ್ಲಿ ಏರೋ ಶೋ (Air show) ನಡೆಯುತ್ತಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳದ್ದೇ ಕಾರುಬಾರು. ಭಾರತೀಯ ವಾಯುಸೇನೆಯ ಶಕ್ತಿ ಪ್ರದರ್ಶನ ಇಲ್ಲಿ ನಡೆಯುತ್ತಿದೆ. ಏರೋ ಶೋದಲ್ಲಿ ಭಾಗಿಯಾಗಿರುವ ಯುದ್ಧ ವಿಮಾನಗಳ ಹಾರಾಟ, ಕಸರತ್ತುಗಳನ್ನು ನೋಡುವುದೇ ಚಂದ.ಇಂದು ಏರೋ ಶೋನಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ (Thejaswi Surya), ತೇಜಸ್ (Tejas) ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
Onboard LCA Tejas at #AeroIndia2021#CelebrateLCATejas pic.twitter.com/3z0OQapyRB
— Tejasvi Surya (@Tejasvi_Surya) February 4, 2021
ಇದನ್ನೂ ಓದಿ : Aero India 2021 : ಬಾನಂಗಳದಲ್ಲಿ ಇಂದಿನಿಂದ ಲೋಹದ ಹಕ್ಕಿಗಳ ಕಲರವ
ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ 'ಮೇಕ್ ಇನ್ ಇಂಡಿಯಾ' (Make in India) ಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಅದರ ಭಾಗವಾಗಿ 83 ಎಲ್.ಸಿ.ಎ ತೇಜಸ್ ಉತ್ಪಾದನಾ ಕಾಮಗಾರಿಯನ್ನು ಬೆಂಗಳೂರಿನ ಪ್ರತಿಷ್ಠಿತ ಹೆಚ್.ಎ. ಎಲ್ (HAL) ಗೆ ಒದಗಿಸಿದೆ. 'ತೇಜಸ್' ಉತ್ಪಾದನೆಯಿಂದ ಬೆಂಗಳೂರು ನಗರದಲ್ಲಿ ಔದ್ಯೋಗಿಕ ಅವಕಾಶಗಳು ಹೆಚ್ಚಲಿದ್ದು, ತೇಜಸ್ ಅನ್ನು ಜಾಗತಿಕ ಮಟ್ಟದ ಬ್ರಾಂಡ್ ಆಗಿ ಪರಿವರ್ತನೆಗೊಳಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ" ಎಂದು ಸಂಸದ ಶ್ರೀ ತೇಜಸ್ವೀ ಸೂರ್ಯ ತಿಳಿಸಿದ್ದಾರೆ.
ಭದ್ರತೆ ಮೇಲಿನ ಕ್ಯಾಬಿನೆಟ್ ಕಮಿಟಿಯು 48,000 ಕೋಟಿ ರೂ, ಗಳ 73 ಮಾರ್ಕ್ 1 ಎ ವರ್ಷನ್ ಮತ್ತು 10 ಮಾರ್ಕ್ 2 ಟ್ರೆನರ್ ತೇಜಸ್ ಯುದ್ಧ ವಿಮಾನಗಳ ಗುತ್ತಿಗೆಯನ್ನು ಜನವರಿ 13 2021 ರಂದು ಹೆಚ್.ಎ. ಎಲ್ ಗೆ ವಹಿಸಿದೆ.
ಇದನ್ನೂ ಓದಿ : ಏರೋ ಇಂಡಿಯಾ 2021 ಉದ್ಘಾಟನಾ ವೇದಿಕೆಯಲ್ಲಿ ಕನ್ನಡ ಕಣ್ಮರೆ – ಹೆಚ್ ಡಿಕೆ ಅಸಮಾಧಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.