Pakistan ಪ್ರಧಾನಿ Imran Khanಗೆ ಭಾರಿ ತಪರಾಕಿ ಹಾಕಿದ Supreme Court

ಪಾಕಿಸ್ತಾನದ ಪಂಜಾಬ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪಾಕ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಖಾಜಿ ಫೀಜ್ ಇಸಾ, ಸ್ಥಳೀಯ ಸಂಸ್ಥೆಗಳನ್ನು ವಿಸರ್ಜಿಸುವ ಮೂಲಕ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ ಎಂದು ಹೇಳಿದ್ದಾರೆ. ಪಂಜಾಬ್ ಸರ್ಕಾರ 2019ರಲ್ಲಿ ರಾಜ್ಯದ ಅಂತರ ಸ್ತಹೀಯ ಸಂಸ್ಥೆಗಳನ್ನು ವಿಸರ್ಜಿಸಿತ್ತು.

Written by - Nitin Tabib | Last Updated : Feb 5, 2021, 09:51 PM IST
  • ಪಾಕ್ ಸುಪ್ರೀಂ ಕೋರ್ಟ್ ನಿಂದ ಗಂಭೀರ ಹೇಳಿಕೆ.
  • ದೇಶವನ್ನು ಸುವ್ಯವಸ್ಥಿತವಾಗಿ ಸರ್ಕಾರ ನಾಶಗೊಳಿಸುತ್ತಿದೆ.
  • ಮಾಧ್ಯಮ ಸ್ವಾತಂತ್ರ್ಯದ ಕುರಿತು ಕೂಡ ಗಂಭೀರ ಹೇಳಿಕೆ.
Pakistan ಪ್ರಧಾನಿ Imran Khanಗೆ ಭಾರಿ ತಪರಾಕಿ ಹಾಕಿದ Supreme Court title=
Pakistan Supreme Court (File Photo)

ಇಸ್ಲಾಮಾಬಾದ್: ಪಾಕಿಸ್ತಾನದ (Pakistan)  ಸುಪ್ರೀಂ ಕೋರ್ಟ್ (Supreme Court) ದೊಡ್ಡ  ಟಿಪ್ಪಣಿಯೊಂದನ್ನು ಮಾಡಿದೆ. ಪಾಕಿಸ್ತಾನವನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಖಾಜಿ ಫೀಜ್ ಇಸಾ (Justice Qazi Feez Isa) ಹೇಳಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ನಿರ್ಮೂಲನೆ ಮಾಡಲಾಗುತ್ತಿದೆ, ಮಾಧ್ಯಮಗಳ ಮೇಲೆ ನಿಗಾ ಇಡಲಾಗುತ್ತಿದೆ ಮತ್ತು ಆಡಳಿತ ಎಂದು ಕರೆಯಲ್ಪಡುವ ಯಾವುದೂ ಪಾಕಿಸ್ತಾನದಲ್ಲಿ ಉಳಿದಿಲ್ಲ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಸರ್ಕಾರದ ವಿರುದ್ಧ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಈ ಹೇಳಿಕೆ ಬಂದಿದೆ. ಇದರಲ್ಲಿ ಪಂಜಾಬ್ ಸರ್ಕಾರವು 2019 ರಲ್ಲಿ ಸ್ಥಳೀಯ ಸರ್ಕಾರದ ಚುನಾವಣೆಯನ್ನು ರದ್ದುಗೊಳಿಸಿತ್ತು ಮತ್ತು ಅದರ ಅವಧಿ ಪೂರ್ಣಗೊಳ್ಳುವ ಮೊದಲು ಅವುಗಳ ಎಲ್ಲ ಅಧಿಕಾರಗಳನ್ನು ಕಸಿದುಕೊಂಡಿತ್ತು.

ಪ್ರಜಾಪ್ರಭುತ್ವದ ಹತ್ಯೆ ಮಾಡಿದ ಪಂಜಾಬ್ ಸರ್ಕಾರ
ಪಾಕಿಸ್ತಾನದ ಪಂಜಾಬ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಪಾಕ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಖಾಜಿ ಫೀಜ್ ಇಸಾ, ಸ್ಥಳೀಯ ಸಂಸ್ಥೆಗಳನ್ನು ವಿಸರ್ಜಿಸುವ ಮೂಲಕ ಸರ್ಕಾರ (Imran Khan Government) ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ ಎಂದು ಹೇಳಿದ್ದಾರೆ. ಪಂಜಾಬ್ ಸರ್ಕಾರ 2019ರಲ್ಲಿ ರಾಜ್ಯದ ಅಂತರ ಸ್ತಹೀಯ ಸಂಸ್ಥೆಗಳನ್ನು ವಿಸರ್ಜಿಸಿತ್ತು.  ಈಗ ಪಂಜಾಬ್ ಸರ್ಕಾರ ಹೊಸ ವ್ಯವಸ್ಥೆಯನ್ನು ರೂಪಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ನ್ಯಾಯಮೂರ್ತಿ ಇಸಾ ಅವರು ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಇದನ್ನು ಕೇಳಲಿಲ್ಲ ಎಂದು ಹೇಳಿದ್ದಾರೆ. ಇದು ಮಾರ್ಷಲ್ ಕಾನೂನು ಹೊಂದಿರುವ ದೇಶದಲ್ಲಿ ಮಾತ್ರ ಸಂಭವಿಸುತ್ತದೆ. ಒಂದು ವೇಳೆ ಇದು ಪಂಜಾಬ್ ನಲ್ಲಿ ನಡೆದಿದ್ದರೆ ಅದು ಪಾಕ್ ಸಂವಿಧಾನದ ವಿರುದ್ಧ ಕೃತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ-Pak Economic Crisis: ಸಂಪೂರ್ಣ ದಿವಾಳಿಯತ್ತ ಪಾಕಿಸ್ತಾನ, ಜಿನ್ನಾ ಕೊನೆಯ ಗುರುತಿನ ಹರಾಜಿಗೆ ಮುಂದಾದ ಇಮ್ರಾನ್ ಸರ್ಕಾರ

ತಮ್ಮ ನೆಚ್ಚಿನ ಪ್ರತಿನಿಧಿಗಳ ಆಯ್ಕೆ ಮಾಡುವವರೆಗೂ ಸರ್ಕಾರ ಇದೇ ರೀತಿ ಮಾಡಲಿದೆ
ಈ ಕುರಿತು ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಜಸ್ಟಿಸ್ ಇಸಾ, ತಮ್ಮ ನೆಚ್ಚಿನ ಜನಪ್ರತಿನಿಧಿಗಳ ಆಯ್ಕೆಯಾಗುವವರೆಗೂ ಪಂಜಾಬ್ ಸರ್ಕಾರ ತನ್ನೀ ಕೃತ್ಯ ಮುಂದುವರೆಸಲಿದೆ. ಸ್ಥಳೀಯ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ 18 ಬಿಲಿಯನ್ ಹಣ ಖರ್ಚು ಮಾಡಿದೆ. ಇಷ್ಟೊಂದು ಹಣ ಎಲ್ಲಿಂದ ಬರಲಿದೆ ಎಂದು ಜಸ್ಟಿಸ್ ಪ್ರಶ್ನಿಸಿದ್ದಾರೆ.

ಇದನ್ನು ಓದಿ- Pakistan ಪ್ರಧಾನಿ ಖುರ್ಚಿಗೆ ಕಂಟಕ, Imran Khan ಆತಂಕ ಹೆಚ್ಚಿಸಿದ ಜ್ಯೋತಿಷಿ

ಮಾಧ್ಯಮಗಳ ಸ್ವಾತಂತ್ರ್ಯದ (Media Freedom) ಬಗ್ಗೆಯೂ ಕೂಡ ಅವರು ಕಠಿಣ ನಿಲುವು ತಳೆದಿದ್ದಾರೆ. ಪಾಕಿಸ್ತಾನದಲ್ಲಿ ಮಾಧ್ಯಮ ಕೂಡ ಸ್ವತಂತ್ರವಾಗಿಲ್ಲ. ಅದನ್ನು ನಿಯಂತ್ರಿಸಲಾಗುತ್ತಿದೆ. ನಿಜವಾದ ಪತ್ರಕರ್ತರನ್ನು ದೇಶದಿಂದ ಹೊರಗಟ್ಟಲಾಗುತಿದೆ ಹಾಗೂ ಪಾಕಿಸ್ತಾನವನ್ನು ಸುವ್ಯವಸ್ಥಿತ ಪದ್ಧತಿಯಲ್ಲಿ ಸರ್ವನಾಶ ಮಾಡಲಾಗುತ್ತಿದೆ ಎಂದು ಜಸ್ಟಿಸ್ ಇಸಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ-ಮಾಜಿ ಪತ್ನಿ ಸೇರಿದಂತೆ ಎಲ್ಲರನ್ನೂ ಟ್ವಿಟ್ಟರ್ ನಲ್ಲಿ Unfollow ಮಾಡಿದ ಇಮ್ರಾನ್ ಖಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News