ನಾನು ಪ್ರಧಾನಿಯಾಗಿದ್ದರೆ ನೋಟು ನಿಷೇಧಿಕರಣದ ಫೈಲ್ ನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ- ರಾಹುಲ್ ಗಾಂಧಿ

    

Last Updated : Mar 10, 2018, 07:44 PM IST
ನಾನು ಪ್ರಧಾನಿಯಾಗಿದ್ದರೆ ನೋಟು ನಿಷೇಧಿಕರಣದ ಫೈಲ್ ನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ- ರಾಹುಲ್ ಗಾಂಧಿ  title=

ನವದೆಹಲಿ:ನರೇಂದ್ರ ಮೋದಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಸರ್ಕಾರದ ನೋಟು ನಿಷೇದದ ಕಾಯ್ದೆ ಬಗ್ಗೆ ಪ್ರಸ್ತಾಪಿಸುತ್ತಾ ಅದು ಉತ್ತಮ ಯೋಜನೆಯಲ್ಲ, ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾದ ಕಾಯ್ದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನು ಮುಂದುವರೆದು ಅವರು" ನಾನು ಪ್ರಧಾನಿಯಾಗಿದ್ದರೆ ಈ ನೋಟು ನಿಷೇಧ ಪ್ರಸ್ತಾಪದ ಫೈಲ್ ನನ್ನ ಬಳಿ ಬಂದಾಗ ಅದನ್ನು  ಕಸದ ಬುಟ್ಟಿಗೆ ಎಸೆಯುತ್ತಿದ್ದೆ" ಎಂದು ತಿಳಿಸಿದರು,

ಮಲೇಷಿಯಾದ ರಾಜಧಾನಿ ಕೌಲಾಲಂಪುರದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು  ಮೋದಿ ಸರ್ಕಾರದ ನೋಟು ನಿಷೇದದ ಕಾಯ್ದೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಸರ್ಕಾರವು ನವಂಬರ್ 8 2016 ರಂದು ನೋಟು ನಿಷೇದ ಕಾಯ್ದೆ ಯನ್ನು ಜಾರಿಗೆ ತಂದಿತ್ತು.ಇದಕ್ಕೆ ದೇಶದೆಲ್ಲೆಡೆ ಸಾಮಾನ್ಯ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

Trending News