Shukra Ast 2021: ಫೆ.14ರಂದು ಅಸ್ತನಾದ ಶುಕ್ರ, ಯಾವ ರಾಶಿಯ ಜನರ ಮೇಲೆ ಏನು ಪ್ರಭಾವ

Shukra Ast 2021: ಸುಖ ಸಂಪನ್ನತೆ ಹಾಗೂ ಪ್ರೀತಿಯ ಗ್ರಹನಾಗಿರುವ ಶುಕ್ರ ಫೆಬ್ರುವರಿ 14ರಂದು ಅಸ್ತನಾಗಿದ್ದಾನೆ. ಏಪ್ರಿಲ್ 18 ರಂದು ಆತ ಪುನಃ ಉದಯಿಸಲಿದ್ದಾನೆ. ಈ ಸುಕ್ರಾಸ್ತ ಯಾವ ರಾಶಿಯ ಜನರಿಗೆ ಶುಭ ಸಂಕೇತವಾಗಿದೆ ಹಾಗೂ ಯಾವ ರಾಶಿಯ ಜನರಿಗೆ ಕಠಿಣವಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.

ನವದೆಹಲಿ: Shukra Ast 2021 - ಜೋತಿಷ್ಯ (Astrology) ಶಾಸ್ತ್ರದ ಪ್ರಕಾರ ಶುಕ್ರಗ್ರಹ ಭೌತಿಕ ಸುಖ-ಸಂಪನ್ನತೆ, ಭೋಗ-ವಿಲಾಸಿ, ವೈವಾಹಿಕ ಸುಖದ ಜೋಗೆಗೆ ಪ್ರೀತಿ ಹಾಗೂ ರೋಮಾನ್ಸ್ ಗೆ (Laxury Life) ಕಾರಣವಾಗುವ ಗ್ರಹ. ಇದೆ ಕಾರಣದಿಂದ ಶಾಸ್ತ್ರಗಳಲ್ಲಿ ಈ ಗ್ರಹವನ್ನು (Venus) ತುಂಬಾ ಮಹತ್ವಪೂರ್ಣ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶುಕ್ರ ಶುಭನಾಗಿದ್ದಾನೆ ಹಾಗೂ ಈತನ ಕಾರಣವೇ ಯಾವುದೇ ಒಂದು ವ್ಯಕ್ತಿಯ ಮೇಲೆ ದೇವಿ ಲಕುಮಿಯ (Goddess Lakshmi) ಕೃಪೆ ನಿರಂತರವಾಗಿರುತ್ತದೆ ಹಾಗೂ ಅವರಿಗೆ ಹಣದ ಕೊರತೆ ಎಂದಿಗೂ ಎದುರಾಗುವುದಿಲ್ಲ. ಹಾಗೆ ನೋಡಿದರೆ ಜೋತಿಷ್ಯ (Zodiac Sign) ಲೆಕ್ಕಾಚಾರದಲ್ಲಿ ಶುಕ್ರ ಗ್ರಹದ (Venus Planet) ಗೋಚರ 23 ದಿನಗಳದ್ದಾಗಿರುತ್ತದೆ. ಅಂದರೆ, ಶುಕ್ರಗ್ರಹ ಕೇವಲ 23 ದಿನಗಳವರೆಗೆ ಯಾವುದೇ ಒಂದು ರಾಶಿಯಲ್ಲಿರುತ್ತಾನೆ. ಆದರೆ, ಈ ಬಾರಿ ಶುಕ್ರ 61 ದಿನಗಳ ಕಾಲ ಅಸ್ತನಾಗಿದ್ದಾನೆ ಅಂದರೆ 2 ತಿಂಗಳುಗಳ ಕಾಲ ಆತ ಅಸ್ತನಾಗಿದ್ದಾನೆ.

 

ಇದನ್ನು ಓದಿ- Vasant Panchmi 2021: ನಾಳೆ ವಸಂತ ಪಂಚಮಿ, ಅಪ್ಪಿ-ತಪ್ಪಿಯೂ ಕೂಡ ಈ 5 ಕೆಲಸ ಮಾಡಬೇಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /2

ಈ ರಾಶಿಯ ಜನರು ಎಚ್ಚರಿಕೆಯಿಂದ ಇರಬೇಕು 1. ಮೇಷ - ಶುಕ್ರ ಅಸ್ತನಾದ ಕಾರಣ ಮೇಷ ರಾಶಿಯ ಜನರ ಆರ್ಥಿಕ ಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಖರ್ಚಿನ ಮೇಲೆ ನಿಯಂತ್ರಣವಿರಲಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ. ಸಂಗಾತಿಯ ಜೊತೆಗೆ ವಿವಾದ ಬೇಡ. 2. ವೃಷಭ - ಶುಕ್ರಾಸ್ತ ವೃಷಭ ರಾಶಿಯ ಜನರಿಗೆ ಕಷ್ಟಗಳನ್ನು ತಂದಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ತುಂಬಾ ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಯಾರ ಮೇಲೂ ತಕ್ಷಣವೇ ಭರವಸೆ ಬೇಡ. ಮಾನ ಹಾನಿಯ ಸಾಧ್ಯತೆ. 3. ಕರ್ಕ - ಶುಕ್ರ ಶುಭಗ್ರಹನಾಗಿದ್ದಾನೆ ಹೀಗಾಗಿ ಆತ ಅಸ್ತನಾಗುವುದು ಕರ್ಕ ರಾಶಿಯ ಜನರಿಗೆ ಶುಭವಲ್ಲ. ಹೀಗಾಗಿ ಈ ಕಾಲದಲ್ಲಿ ಯಾವುದೇ ಶುಭಕಾರ್ಯ ಮಾಡಬೇಡಿ. ವಾದ-ವಿವಾದದಿಂದ ದೂರ ಉಳಿಯಿರಿ. ಹೊಸ ಯೋಜನೆಗಳಲ್ಲಿ ಯಶಸ್ಸು ಲಭಿಸುವುದಿಲ್ಲ. ಆದರೆ ಕರಿಯರ್ ನಲ್ಲಿ ಉತ್ತಮ ಫಲಿತಾಂಶಗಳು ಸಿಗುವ ಸಾಧ್ಯತೆ ಇದೆ. 4. ಕನ್ಯಾ - ಕನ್ಯಾ ರಾಶಿಯ ಜನರಿಗೂ ಕೂಡ ಈ ಎರಡು ತಿಂಗಳ ಅವಧಿಯಲ್ಲಿ ಭಾರಿ ಏರಿಳಿತಗಳು ಕಾಣಲು ಸಿಗಲಿವೆ. ಖರ್ಚು ಹೆಚ್ಚಾಗಲಿದೆ. ಹೀಗಾಗಿ ಖರ್ಚನ್ನು ನಿಯಂತ್ರಿಸಿ.  ಗೆಳೆಯರು ಹಾಗೂ ಸಂಗಾತಿಗಳ ಬಗ್ಗೆಯೂ ಕಾಳಜಿ ವಹಿಸಿ. 5. ತುಲಾ - ಶುಕ್ರ ಗ್ರಹ ಅಸ್ತನಾಗಿರುವುದರಿಂದ ತುಲಾ ರಾಶಿಯವರ ವೈವಾಹಿಕ ಜೀವನ ಪ್ರಭಾವಿತಗೊಳ್ಳಲಿದೆ. ಕಠಿಣ ಕಾಲ ಎದುರಾಗಲಿದೆ. ಮದುವೆಯ ಮಾತುಕತೆಗಳು ಸಾಗುತ್ತಿದ್ದರೆ ಬಿಗಡಾಯಿಸುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಮೇಲೂ ಕೂಡ ನಕಾರಾತ್ಮಕ ಪ್ರಭಾವ ಉಂಟಾಗಲಿದೆ ಹಾಗೂ ಭೌತಿಕ ಸುಖದಲ್ಲಿ ಕೊರತೆ ಎದುರಾಗಲಿದೆ. 6. ವೃಶ್ಚಿಕ - ಶುಕ್ರ ಅಸ್ತನಾಗಿರುವ 2 ತಿಂಗಳಲ್ಲಿ ವೃಶ್ಚಿಕ ರಾಶಿಯ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಅವಶ್ಯಕತೆ ಇದೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ವಾದ-ವಿವಾದಗಳಿಂದ ದೂರ ಉಳಿಯಿರಿ. ಆರ್ಥಿಕ ಸ್ಥಿತಿ ಬಿಗಡಾಯಿಸಲಿದೆ. ಖರ್ಚನ್ನು ನಿಯಂತ್ರಿಸಿ. 7. ಮೀನ - ಮೀನ ರಾಶಿ ಜನರ ಆಗುವ ಕೆಲಸಗಳು ನಿಂತು ಹೋಗಲಿವೆ. ಹಣಕಾಸಿನ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇದೆ. ಖರ್ಚನ್ನು ಕಡಿಮೆ ಮಾಡಿ ಹಾಗೂ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ.

2 /2

ಈ ರಾಶಿಯ ಜನರಿಗೆ ಲಾಭ 1. ಮಿಥುನ - ಮಿಥುನ ರಾಶಿಯ ಜನರಿಗೆ ಶುಕ್ರಾಸ್ತದಿಂದ ಲಾಭವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಸರಗಳು ಹಾಗೂ ಶುಭ ಪರಿಣಾಮಗಳು ಸಿಗಲ್ವೆ. ಆದರೆ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಎಂದುರಾಗಳಿವೆ. 2. ಸಿಂಹ - ಸಿಂಹ ರಾಶಿಯ ಜನರಿಗೆ ಈ ಸಮಯದಲ್ಲಿ ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ ಹಾಗೂ ನಿಮ್ಮ ಆತ್ಮವಿಶ್ವಾಸದಲ್ಲಿ ಹೆಚ್ಚಳವಾಗಲಿದೆ. ಆದರೆ ಸಿಟ್ಟಿನ ಮೇಲೆ ನಿಯಂತ್ರಣವಿರಲಿ. 3. ಧನು - ಶುಕ್ರಾಸ್ತ ಧನು ರಾಶಿಯ ಜನರಿಗೆ ಶುಭ ಸಂಕೇತವಾಗಿದೆ. ಧನಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ. ಆದರೆ ಖರ್ಚು ಹೆಚ್ಚಾಗಲಿದೆ. ಹೀಗಾಗಿ ಖರ್ಚಿನ ಮೇಲೆ ನಿಯಂತ್ರಣವಿರಲಿ. ಸಹೋದರ-ಸಹೋದರಿಯರ ಹಾಗೂ ಕುಟುಂಬ ಸದಸ್ಯರ ಸಹಯೋಗ ಸಿಗಲಿದೆ. 4. ಮಕರ - ಮಕರ ರಾಶಿಯವರ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಸಿಟ್ಟಿನ ಮೇಲೆ ನಿಯಂತ್ರಣವಿಡಿ. ಜೀವನದಲ್ಲಿ ಮುಂದೆ ಸಾಗಲು ಸರಿಯಾದ ಕಾರ್ಯತಂತ್ರ ರೂಪಿಸುವ ಆವಶ್ಯಕತೆ ಇದೆ. 5. ಕುಂಭ - ಈ ರಾಶಿಯ ಜನರಿಗೆ ಶುಕ್ರಾಸ್ತದ ಮಿಶ್ರ ಫಲಗಳು ಲಭಿಸಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ.