SBIನ ಈ ಯೋಜನೆಯಲ್ಲಿ ತಿಂಗಳಿಗೆ 1000 ರೂ.ಉಳಿತಾಯ ಮಾಡಿದ್ರೆ, 1.59ಲಕ್ಷ ಗ್ಯಾರಂಟಿ ರಿಟರ್ನ್

SBI RD Scheme - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿದರ ನೀಡುತ್ತದೆ. 

SBI RD Scheme - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿದರ ನೀಡುತ್ತದೆ. SBI ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ SBI ತನ್ನ RD ಸ್ಕೀಮ್ ಮೇಲೆ 3 ರಿಂದ 5 ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇ.5.3 ರಷ್ಟು ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತದೆ.

 

ಇದನ್ನೂ ಓದಿ- ಮಾರ್ಚ್ 1 ರಿಂದ Corona Vaccination ಎರಡನೇ ಹಂತ ಆರಂಭ, ಯಾರಿಗೆ ಸಿಗಲಿದೆ ಲಸಿಕೆ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. SBI ನೀಡುತ್ತಿದೆ ಉತ್ತಮ ರಿಟರ್ನ್ - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಹೂಡಿಕೆ ಮಾಡುವ ಮೂಲಕ ಉತ್ತಮ ರಿಟರ್ನ್ ಪಡೆಯುವ ಅವಕಾಶ ಕಲ್ಪಿಸುತ್ತಿದೆ. ಇದರಲ್ಲಿ ವಿಶೇಷತೆ ಎಂದರೆ ನೀವು ಪ್ರತಿ ತಿಂಗಳಿಗೆ 1 ಸಾವಿರ ರೂ. ಮಾತ್ರ ಹೂಡಿಕೆ ಮಾಡುವ ಮೂಲಕ 1.59 ಲಕ್ಷ ರೂ.ಗಳ ನಿಶ್ಚಿತ ರಿಟರ್ನ್ ಪಡೆಯಬಹುದು. ಹಾಗಾದರೆ ಬನ್ನಿ ಈ ಯೋಜನೆಯ ಕುರಿತು ವಿವರವಾಗಿ ತಿಳಿದುಕೊಳ್ಳೋಣ.

2 /6

2. RD ಖಾತೆಯ ಮೇಲೆ SBI ಉತ್ತಮ ಬಡ್ಡಿ ನೀಡುತ್ತದೆ - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿದರ ನೀಡುತ್ತದೆ. SBI ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ SBI ತನ್ನ RD ಸ್ಕೀಮ್ (SBI Scheme Alert) ಮೇಲೆ 3 ರಿಂದ 5 ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇ.5.3 ರಷ್ಟು ವಾರ್ಷಿಕ ಬಡ್ಡಿಯನ್ನು ಪಾವತಿಸುತ್ತದೆ.

3 /6

3. ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿಯ ಲಾಭ - ಒಂದು ವೇಳೆ ಯಾವುದೇ ಹಿರಿಯ ನಾಗರಿಕರು RD ಖಾತೆಯಲ್ಲಿ ಹೂಡಿಕೆ ಮಾಡಿದರೆ, ಅವರಿಗೆ ಶೇ.0.80ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. ಅಂದರೆ 5 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ RD ಹೂಡಿಕೆಯ ಮೇಲೆ SBI ಶೇ.6.2ರಷ್ಟು ಬಡ್ಡಿ ನೀಡುತ್ತದೆ.

4 /6

4. SBIನ RD ಯೋಜನೆಯ ಪೆನಾಲ್ಟಿ ನಿಯಮ ಏನು ಹೇಳುತ್ತದೆ -  ಒಂದು ವೇಳೆ ನೀವೂ ಕೂಡ ಆರ್‌ಡಿ ಖಾತೆಯನ್ನು ತೆರೆದಿದ್ದರೆ  ಮತ್ತು ನಿಗದಿತ ಸಮಯದಲ್ಲಿ ಕಂತು ಪಾವತಿಸದಿದ್ದರೆ, ಎಸ್‌ಬಿಐ  ದಂಡ ಸಹ ವಿಧಿಸುತ್ತದೆ. 5 ವರ್ಷಕ್ಕಿಂತ ಕಡಿಮೆ ಇರುವ ಆರ್‌ಡಿಗಳಲ್ಲಿ 100 ಕ್ಕೆ 1.5 ರೂ. 5 ವರ್ಷಕ್ಕಿಂತ ಮೇಲ್ಪಟ್ಟ ಆರ್‌ಡಿಗಳಿಗೆ 100 ರೂಪಾಯಿಗೆ 2 ರೂ. ಪೆನಾಲ್ಟಿ ವಿಧಿಸಲಾಗುತ್ತದೆ. ಅಂದರೆ 1000 ರೂಪಾಯಿಗೆ 20 ರೂಪಾಯಿ ದಂಡ ವಿಧಿಸಲಾಗುತ್ತದೆ. 6 ತಿಂಗಳವರೆಗೆ ಒಂದು ವೇಳೆ ನೀವು ಹಣವನ್ನು ನಿರಂತರವಾಗಿ ಠೇವಣಿ ಮಾಡದಿದ್ದರೆ, ಎಸ್‌ಬಿಐ ನಿಮ್ಮ ಖಾತೆಯನ್ನು ನಿಲ್ಲಿಸಿ, ಎಲ್ಲಾ ಹಣವನ್ನು ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸುತ್ತದೆ.

5 /6

5.SBI RD ಯೋಜನೆಯ (SBI RD Scheme) ಸೇವಾ ಶುಲ್ಕ - SBIನ RDಯಲ್ಲಿ ಒಂದು ವೇಳೆ ನೀವು 3-4 ಬಾರಿ ಸರಿಯಾಗಿ ಹಣ ಜಮಾ ಮಾಡದೆ ಹೋದಲ್ಲಿ, ಬ್ಯಾಂಕ್ ನಿಮ್ಮಿಂದ 10 ರೂ. ಸೇವಾ ಶುಲ್ಕ ಪಡೆಯುತ್ತದೆ.

6 /6

6. ಹೇಗೆ ಸಂಪಾದಿಸಬೇಕು 1.59 ಲಕ್ಷ ರೂ. - SBI ಕ್ಯಾಲ್ಕುಲೇಟರ್ (SBI RD Calculator) ಪ್ರಕಾರ ಒಂದು ವೇಳೆ ನಿಮ್ಮ ವಯಸ್ಸು 60 ವರ್ಷಕ್ಕಿಂತ ಕಡಿಮೆಯಾಗಿದ್ದರೆ ಹಾಗೂ ತಿಂಗಳಿಗೆ 1000 ರೂ. ಲೆಕ್ಕದಲ್ಲಿ 120 ತಿಂಗಳಿಗೆ ನೀವು ಹಣವನ್ನು ಹೂಡಿಕೆ ಮಾಡಿದಲ್ಲಿ, 10 ವರ್ಷಗಳ ಬಳಿಕ ಶೇ.5.4ರ ಬಡ್ಡಿದರದಲ್ಲಿ 1 ಲಕ್ಷ 59 ಸಾವಿರದ 155 ರೂ.ರಿಟರ್ನ್ ಪಡೆಯಬಹುದು.