"ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಿಎಎ ಜಾರಿ ಇಲ್ಲ"

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ (ಮಾರ್ಚ್ 19) ಅಸ್ಸಾಂನಲ್ಲಿ ತಮ್ಮ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುವುದಾಗಿ ಘೋಷಿಸಿದರು.

Last Updated : Mar 19, 2021, 05:38 PM IST
 "ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸಿಎಎ ಜಾರಿ ಇಲ್ಲ"   title=

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ (ಮಾರ್ಚ್ 19) ಅಸ್ಸಾಂನಲ್ಲಿ ತಮ್ಮ ಪಕ್ಷಕ್ಕೆ ಅಧಿಕಾರಕ್ಕೆ ಬಂದರೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯಾಗದಂತೆ ನೋಡಿಕೊಳ್ಳುವುದಾಗಿ ಘೋಷಿಸಿದರು.

ಅಸ್ಸಾಂನ ದಿಬ್ರುಗಡದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳುತ್ತದೆ'ಎಂದು ಹೇಳಿದರು.

ಇದನ್ನೂ ಓದಿ: 'ಬೆತ್ತದಿಂದ ಬಾರಿಸುವ' ರಾಹುಲ್ ಹೇಳಿಕೆಗೆ ಪ್ರಧಾನಿ ನೀಡಿದ ಉತ್ತರವೇನು?

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ನಡೆಸಿದ ಅವರು“ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ ಎಂದು ನೀವು ಭಾವಿಸುತ್ತೀರಿ. ಯುವಕರು ನಿರುದ್ಯೋಗಿಗಳು, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಸಿಎಎ ಇದೆ. ಅಸ್ಸಾಂನ ಜನರು ದೆಹಲಿಗೆ ಬಂದರೆ ಅವರ ಸಂಸ್ಕೃತಿ, ಭಾಷೆಯನ್ನು ಮರೆಯುವಂತೆ ನಾವು ಕೇಳುವಂತಿಲ್ಲ. ನಾಗ್ಪುರದಲ್ಲಿ ಜನಿಸಿದ ಒಂದು ಶಕ್ತಿ, ಇಡೀ ದೇಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ (Rahul Gandhi) ಆರೋಪಿಸಿದರು.

ಇದನ್ನೂ ಓದಿ: CAAಯಿಂದಾಗಿ ರಾಹುಲ್ ಗಾಂಧಿಗೆ ಪೌರತ್ವ ಕಳೆದುಕೊಳ್ಳುವ ಭಯ; ಬಿಜೆಪಿ ನಾಯಕ

ಏತನ್ಮಧ್ಯೆ, ದಿಬ್ರುಗಡದ ದಿಂಜಾಯ್ನಲ್ಲಿ ಚಹಾ ಎಸ್ಟೇಟ್ ಕಾರ್ಮಿಕರನ್ನು ಉದ್ದೇಶಿಸಿ ಚಹಾ ಉದ್ಯಮಕ್ಕಾಗಿ ವಿಶೇಷ ಸಚಿವಾಲಯವನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದರು."ಚಹಾ ಉದ್ಯಮಕ್ಕಾಗಿ, ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾವು ವಿಶೇಷ ಸಚಿವಾಲಯವನ್ನು ಪ್ರಾರಂಭಿಸುತ್ತೇವೆ. ನಮ್ಮ ಪ್ರಣಾಳಿಕೆ ಚಹಾ ಬುಡಕಟ್ಟು, ಜನರೊಂದಿಗೆ ಸಮಾಲೋಚಿಸುತ್ತಿದೆ ಮತ್ತು ಮುಚ್ಚಿದ ಬಾಗಿಲುಗಳ ಹಿಂದೆ ರಚಿಸಲಾಗಿಲ್ಲ" ಎಂದು ಭರವಸೆ ನೀಡಿದರು.

ಇದನ್ನೂ ಓದಿ: ನಿಮ್ಮ ಕೆಲವು ಮ್ಯಾಜಿಕಲ್ ವ್ಯಾಯಾಮವನ್ನು ಮಾಡಿ, 'Modinomics ಗೆ ರಾಹುಲ್ ಗಾಂಧಿ ವ್ಯಂಗ್ಯ

ಅಸ್ಸಾಂ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿದ ರಾಹುಲ್ ಗಾಂಧಿ, “ಬಿಜೆಪಿ 351 ರೂ ಭರವಸೆ ನೀಡಿದೆ., ಆದರೆ ಅಸ್ಸಾಂ ಚಹಾ ಕಾರ್ಮಿಕರಿಗೆ ನೀಡಿರುವುದು 167 ರೂ ಆಗಿದೆ.ನಾನು ನರೇಂದ್ರ ಮೋದಿ ಅಲ್ಲ, ನಾನು ಸುಳ್ಳು ಹೇಳುವುದಿಲ್ಲ. ಇಂದು, ನಾವು ನಿಮಗೆ 5 ಗ್ಯಾರಂಟಿಗಳನ್ನು ನೀಡುತ್ತೇನೆಚಹಾ ಕಾರ್ಮಿಕರಿಗೆ 365 ರೂ, ಸಿಎಎ ವಿರುದ್ಧವಾಗಿ ನಿಲ್ಲುವುದು, 5 ಲಕ್ಷ ಉದ್ಯೋಗ ಸೃಷ್ಟಿ, 200 ಯುನಿಟ್ ಉಚಿತ ವಿದ್ಯುತ್ ಮತ್ತು ಗೃಹಿಣಿಯರಿಗೆ 2000 ರೂಗಳನ್ನು ನೀಡುತ್ತೇವೆ" ಎಂದು ಘೋಷಿಸಿದರು.

ಮಾರ್ಚ್ 27 ರಿಂದ ಅಸ್ಸಾಂ 126 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.

Trending News