Photos: ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ 5 ಧನ್ಸು ಕಾರುಗಳು, ಅವುಗಳ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ

                   

ಮುಂದಿನ ತಿಂಗಳು 5 ಧನ್ಸು ಕಾರುಗಳು ಮಾರುಕಟ್ಟೆಗೆ ಪ್ರವೇಶಿಸಲಿವೆ. ದೇಶದಲ್ಲಿ ಎಸ್ಯುವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಕಾರುಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಕೆಲವು ಹೊಸ ಪ್ರವೇಶ ಮಟ್ಟದ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ನವೀಕರಿಸಿದ ಆವೃತ್ತಿಯನ್ನು ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ತರುವ ನಿರೀಕ್ಷೆಯಿದ್ದು, ಆ ಕಾರುಗಳ ಬಗ್ಗೆ ತಿಳಿಯೋಣ...

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಹೀಂದ್ರಾ (Mahindra) ಕಂಪನಿಯ ಅತ್ಯಂತ ಯಶಸ್ವಿ ಕಾರುಗಳ ಪಟ್ಟಿಯಲ್ಲಿ ಬೊಲೆರೊ ಕೂಡ ಸ್ಥಾನ ಪಡೆದಿದೆ.  ಏಪ್ರಿಲ್‌ನಲ್ಲಿ ಕಂಪನಿಯು ಈ ಕಾರಿನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಕಾರಿನಲ್ಲಿ, ನೀವು ಈಗ ಸ್ವಯಂಚಾಲಿತ ಎಸಿ, ರಿಯರ್ ಎಸಿ ವೆಂಟ್, ಸನ್‌ರೂಫ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಗ್ರಿಲ್, ಏರ್‌ಬ್ಯಾಗ್ ಮುಂತಾದ ವೈಶಿಷ್ಟ್ಯಗಳನ್ನು ನೋಡಬಹುದು.

2 /5

ಫ್ರೆಂಚ್ ಕಾರು ತಯಾರಕ ಸಿಟ್ರಾನ್ ತನ್ನ ಕಾರು ಸಿ 5 ಏರ್‌ಕ್ರಾಸ್ ಅನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಿದೆ. ಈ ಕಾರನ್ನು ಏಪ್ರಿಲ್ 7 ರಂದು ಬಿಡುಗಡೆ ಮಾಡಲಾಗುವುದು. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಈ ಕಾರು 2.0 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು 177 ಪಿಎಸ್ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಪನೋರಮಿಕ್ ಸನ್‌ರೂಫ್, 8.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲೆಕ್ಟ್ರಿಕ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನಂತಹ ವೈಶಿಷ್ಟ್ಯಗಳನ್ನು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

3 /5

ಅಲ್ಕಾಜಾರ್ 7 ಆಸನಗಳ ಎಸ್‌ಯುವಿ (SUV) ಕಾರ್ ಆಗಿದ್ದು, ಹ್ಯುಂಡೈ ಕಂಪನಿಯು ಏಪ್ರಿಲ್ 6 ರಂದು ಇದನ್ನು ಜಾಗತಿಕವಾಗಿ ಬಿಡುಗಡೆ ಮಾಡಲಿದೆ. ತಜ್ಞರ ಪ್ರಕಾರ, ಈ ಕಾರನ್ನು ಎಸ್‌ಯುವಿ ಕ್ರೆಟಾದ 7 ಆಸನಗಳ ಆವೃತ್ತಿ ಎಂದೂ ಕರೆಯಲಾಗುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್‌ನಂತಹ ಐಶಾರಾಮಿ ಕಾರುಗಳಿಗೆ ಟಕ್ಕರ್ ನೀಡುವ ನಿರೀಕ್ಷೆಯಿದೆ. ಈ ಕಾರು 1.5 ಲೀಟರ್ ಸಾಮರ್ಥ್ಯದ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಪಡೆಯಲಿದೆ. ಇದಲ್ಲದೆ, 1.4 ಲೀಟರ್ ಸಾಮರ್ಥ್ಯದ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಕಾರಿನ ಮುಂಭಾಗದಲ್ಲಿ ನೀಡಬಹುದು. ಕಾರಿನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ಇದಲ್ಲದೆ, 7.0 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್, ವಾಹನ ಸ್ಥಿರತೆ ನಿರ್ವಹಣೆ, ಐಸೊಫಿಕ್ಸ್ ಮೌಂಟೆಡ್ ಸೀಟ್, ಹಿಲ್ ಸ್ಟಾರ್ಟ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ವಿತರಣೆ (ಇಬಿಡಿ) ವೈಶಿಷ್ಟ್ಯಗಳನ್ನು ಕಾರಿನಲ್ಲಿ ಕಾಣಬಹುದು ಎನ್ನಲಾಗಿದೆ. ಇದನ್ನೂ ಓದಿ- ಡೀಸೆಲ್/ಪೆಟ್ರೋಲ್ ಕಾರುಗಳಲ್ಲಿ ಯಾವುದು ಉತ್ತಮ? Maruti Suzukiಯ ಲೆಕ್ಕಾಚಾರ ಏನು ಗೊತ್ತಾ?

4 /5

ಮಾರುತಿ ಸುಜುಕಿ (Maruti Suzuki) ದೇಶದ ಮೊದಲ ಬಜೆಟ್ ಎಎಂಟಿ ಕಾರು ಸೆಲೆರಿಯೊದ ಹೊಸ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ತರಲಿದೆ. ಹೊಸ ಆವೃತ್ತಿಯು ಪ್ರಸ್ತುತ ಸೆಲೆರಿಯೊಗಿಂತ ಗಾತ್ರದಲ್ಲಿ ದೊಡ್ಡದಾಗಿದೆ, ಇದು ಈ ಕಾರಿನಲ್ಲಿ ಹೆಚ್ಚಿನ ಲೆಗ್ ಜಾಗವನ್ನು ನೀಡುತ್ತದೆ. ಮಾರುತಿ ಅದರಲ್ಲಿ ಆಪಲ್ ಮತ್ತು ಆಂಡ್ರಾಯ್ಡ್‌ಗೆ ಆಟೋ ಸಂಪರ್ಕವನ್ನು ಒದಗಿಸಿದೆ. ಅಲ್ಲದೆ, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯವಸ್ಥೆಯನ್ನು ಸಹ ಕಾಣಬಹುದು ಎಂದು ಕಂಪನಿಯ ಮೂಲಗಳು ತಿಳಿಸಿವೆ. ಇದನ್ನೂ ಓದಿ - SBI, HDFC, ICICI ಖಾತೆದಾರರೇ ಎಚ್ಚರ! OTPಗೆ ಸಂಬಂಧಿಸಿದ ಈ ಮಾಹಿತಿ ತಪ್ಪದೇ ತಿಳಿಯಿರಿ

5 /5

ಸ್ಕೋಡಾ ಆಕ್ಟೇವಿಯಾ ಕಾರನ್ನು ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ಆರಂಭದಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಕಂಪನಿಯು ಈ ಕಾರಿನಲ್ಲಿ 2-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ವರ್ಚುವಲ್ ಕಾಕ್‌ಪಿಟ್‌ನಂತಹ ವೈಶಿಷ್ಟ್ಯಗಳೊಂದಿಗೆ ತಾಪನ ಕಾರ್ಯ ಮತ್ತು ಪರ್ಫೆಕ್ಟ್ ಇಂಟೀರಿಯರ್ ಅನ್ನು ಸಹ ನೀಡುತ್ತಿದೆ. 1.5 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಈ ಕಾರನಲ್ಲಿ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ನೀಡಬಹುದು. ಇದರೊಂದಿಗೆ, ಪೆನೋರಮಿಕ್ ಸನ್‌ರೂಫ್, ಮಸಾಜ್ ಫಂಕ್ಷನ್ ಸೀಟ್ ಮತ್ತು ಮೂರು-ವಲಯ ಹವಾಮಾನ ನಿಯಂತ್ರಣ ಸೇರಿದಂತೆ ಹಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಕಾಣಬಹುದು. ಭಾರತದಲ್ಲಿ ಮುಂಬರುವ 5 ಆಸನಗಳ ಕಾರಿನ ಬೆಲೆ ಸುಮಾರು 18 ಲಕ್ಷ ರೂಪಾಯಿಗಳು (ಎಕ್ಸ್ ಶೋ ರೂಂ) ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.