Art Therapy: ಕೊರೊನಾ (Corona) ಮಹಾಮಾರಿಯ ಲಾಕ್ಡೌನ್ನಲ್ಲಿ ಸಿಲುಕಿರುವ, ಸ್ವಯಂ ಪ್ರೇರಿತ ನಿರ್ಬಂಧಕ್ಕೆ ಒಳಗಾದವರು ಮತ್ತು ಖಿನ್ನತೆ (Depression) ಹಾಗೂ ಆತಂಕಕ್ಕೆ(Anxity) ಒಳಗಾದ ಜನರಿಗೆ ಆರ್ಟ್ ಥೆರಪಿ (Art Therapy)ಒಂದು ಉತ್ತಮ ಥೆರಪಿಯಾಗಿ ಸಾಬೀತಾಗುತ್ತಿದೆ.
Art Therapy: ಕೊರೊನಾ ಪ್ರಕೋಪ (Corona Pandemic) ನಿಲ್ಲುವ ಮಾತೆ ಎತ್ತುತ್ತಿಲ್ಲ. ವಿಶ್ವಾದ್ಯಂತ ಕೊರೊನಾ ಮಹಾಮಾರಿ ಕಾರಣ ಜನಸಾಮಾನ್ಯರ ಜೀವನ ಸಂಪೂರ್ಣ ಪ್ರಭಾವಿತಗೊಂಡಿದೆ. ಇದರ ಕಾರಣ ಜನರು ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದರೆ, ಹಲವರು ಮಾನಸಿಕ ಖಿನ್ನತೆಗೆ (Depression) ಒಳಗಾಗುತ್ತಿದ್ದಾರೆ. ಭಯ ಹಾಗೂ ಒಂಟಿತನದಲ್ಲಿ ಜೀವಿಸುತ್ತಿರುವ ಜನರು ಖಿನ್ನದೆ ಹಾಗೂ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇವೆಲ್ಲವುಗಳ ನಡುವೆ ಅರ್ಥ ಥೆರಪಿ ಇಂತಹ ಜನರಿಗೆ ಭಾರಿ ನೆಮ್ಮದಿ ನೀಡುವ ಕೆಲಸ ಮಾಡುತ್ತಿದೆ. ಆರ್ಟ್ ಥೆರಪಿ ಅಂದರೆ, ಜನರು ಡ್ರಾಯಿಂಗ್ ಹಾಗೂ ಪೇಂಟಿಂಗ್ ಸಹಾಯದಿಂದ ತಮ್ಮ ಒಂಟಿತನವನ್ನು ದೂರಗೊಳಿಸುತ್ತಿದ್ದಾರೆ.
ಇದನ್ನೂ ಓದಿ- Does sunlight kill the coronavirus?: ಬಿಸಿಲಿನಲ್ಲಿ ಶಕ್ತಿ ಕಳೆದುಕೊಳ್ಳುತ್ತದೆಯೇ ಕೊರೊನಾ ವೈರಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಆರ್ಟ್ ಥೆರಪಿ ಲಾಭಗಳೇನು?: 1. ಸ್ಟ್ರೆಸ್ ಕಡಿಮೆಯಾಗುತ್ತದೆ - ಒಂದು ವೇಳೆ ನೀವು ಸತತವಾಗಿ ಖಿನ್ನತೆಗೆ ಒಳಗಾಗುತ್ತಿದ್ದರೆ, ಒಂದು ಪೆನ್ಸಿಲ್ ಹಾಗೂ ಹಾಳೆಯನ್ನು ತೆಗೆದುಕೊಂಡು ಡ್ರಾಯಿಂಗ್ ಮಾಡಲು ಕುಳಿತುಕೊಳ್ಳಿ ಹಾಗೂ ನಿಮ್ಮಷ್ಟಕ್ಕೆ ನೀವು ಸೃಜನಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಇದರಿಂದ ನಿಮಗೆ ಆರಾಮ ಸಿಗಲಿದೆ. ಈ ಕುರಿತು 2007,2016 ಹಾಗೂ 2018 ರಲ್ಲಿ ನಡೆಸಲಾಗಿರುವ ಅಧ್ಯಯನಗಳ ಪ್ರಕಾರ, ಮಾನಸಿಕ ಸಮಸ್ಯೆಗಳಿಗೆ ಒಳಗಾದ ಜನರಿಗೆ ಇದರಿಂದ ಭಾರಿ ನೆಮ್ಮದಿ ಸಿಕ್ಕಿದ್ದು, ಶೇ.22 ರಷ್ಟು ಪೀಡಿತರು ಸಂಪೂರ್ಣ ಗುಣಮುಖರಾಗಿದ್ದಾರೆ ಎನ್ನಲಾಗಿದೆ.
2. ಮಾನಸಿಕ ಶಕ್ತಿ ಹೆಚ್ಚಳಕ್ಕೆ ಅವಶ್ಯಕ- ಡ್ರಾಯಿಂಗ್ ಹಾಗೂ ಮೈಂಡ್ ಫುಲ್ ನೆಸ್ ಅಂದರೆ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತವೆ. ಒಂದು ವೇಳೆ ನೀವು ಆರ್ಟ್ ಥೆರಪಿಯತ್ತ ಹೆಜ್ಜೆಯನ್ನಿಟ್ಟರೆ, ಅಧಿಕ ಖುಷಿ ಪಡುವಿರಿ ಮತ್ತು ನಿಮ್ಮ ಪ್ರಾಡಕ್ಟಿವಿಟಿ ಕೂಡ ಹೆಚ್ಚಾಗಲಿದೆ. ಇದರಿಂದ ನಿಮ್ಮ ಮೆಂಟಲ್ ಪಾಬ್ಲಂ ಅಪಾಯ ಶೇ.50ರಷ್ಟು ಕಡಿಮೆಯಾಗಲಿದೆ.
3. ಅನಾವಶ್ಯಕ ಸಂಗತಿಗಳಿಂದ ದೂರವಿಡುತ್ತದೆ - ಖಿನ್ನತೆ ಸಾಮಾನ್ಯವಾಗಿ ವದಂತಿಗಳು ಹಾಗೂ ನಕಾರಾತ್ಮಕ ಮಾತುಗಳನ್ನು ಕೇಳುವುದರಿಂದ ಹೆಚ್ಚಾಗುತ್ತದೆ. ಕಲೆಯತ್ತ ನೀವು ನಿಮ್ಮ ಗಮನಹರಿಸಿದಾಗ, ಮಾನಸಿಕವಾಗಿ ನೀವು ಈ ನಕಾರಾತ್ಮಕ ಮಾತುಗಳನ್ನು ಸಹಿಸುವ ಶಕ್ತಿ ಹೆಚ್ಚಿಸುವಿರಿ. 2016ರಲ್ಲಿ ಅಮೇರಿಕಾದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಹಲವು ಸಮಯದವರೆಗೆ ನಿಮ್ಮನ್ನು ನೀವು ಡ್ರಾಯಿಂಗ್ ನಲ್ಲಿ ತೊಡಗಿಸಿಕೊಳ್ಳುವುದರಿಂದ, ಅದು ನಿಮಗೆ ಶಾಂತಿ ನೀಡುತ್ತದೆ ಮತ್ತು ಇದು ಖಿನ್ನತೆಯನ್ನು ದೂರ ಮಾಡುವ ಏಕಮಾತ್ರ ವಿಧಾನವಾಗಿದೆ.
4. ಫೋಕಸ್ ಹೆಚ್ಚಾಗುತ್ತದೆ - ಜನರ ಗಮನ ಕೇಂದ್ರೀಕರಣಕ್ಕೆ ಆರ್ಟ್ ಥೆರಪಿ ತುಂಬಾ ಲಾಭಕಾರಿಯಾಗಿದೆ. ಖಿನ್ನತೆಗೆ ಒಳಗಾದ ಜನರು ಯಾವುದೇ ಒಂದು ಸಂಗತಿಯ ಕಡೆಗೆ ತಮ್ಮ ಗಮನ ಕೇಂದ್ರೀಕರಿಸುವುದಿಲ್ಲ. ಹೀಗಾಗಿ ಕಲೆ ಅವರಲ್ಲಿ ಕಾನ್ಸಂಟ್ರೇಶನ್ ಹೆಚ್ಚಿಸುತ್ತದೆ. ಇದಲ್ಲದೆ ನಿಮ್ಮೊಳಗಿರುವ ಋಣಾತ್ಮಕ ಭಾವನೆಯನ್ನು ದೂರಗೊಳಿಸುತ್ತದೆ. ಇದು ನಿಮ್ಮಲ್ಲಿ ತಾಳ್ಮೆಯನ್ನು ಹೆಚ್ಚಿಸಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ.