ಗಜೇಂದ್ರಗಡ: ಸಂವಿಧಾನ ಓದು ಅಭಿಯಾನವನ್ನು ರಾಜ್ಯದಾದ್ಯಂತ ಮುನ್ನಡೆಸಿ, ಸಹಯಾನ, ಚಿಂತನ ಉತ್ತರ ಕನ್ನಡ ಸೇರಿದಂತೆ ವಿವಿಧ ಸಂಘಟನೆಗಳು, ಅಭಿಯಾನಗಳಲ್ಲಿ ಸಕ್ರಿಯರಾಗಿದ್ದ ಪ್ರಗತಿಪರ ಚಿಂತನೆಯ ಹೋರಾಟಗಾರ, ಕೋವಿಡ್ ಸೋಂಕು ತಗುಲಿ ಅಗಲಿ ಹೋದ ಪ್ರಾಧ್ಯಾಪಕ ವಿಠ್ಠಲ ಭಂಡಾರಿಯವರಿಗೆ ಗೌರವ ನುಡಿನಮನ ಸಲ್ಲಿಸಲಾಯಿತು.
ಪಟ್ಟಣದ ಸಿಐಟಿಯು ಕಾರ್ಯಾಲಯದದಲ್ಲಿ ಎಸ್.ಎಫ್. ಐ, ಡಿ.ವೈ.ಎಫ್.ಐ, ಸಿ.ಐ.ಟಿ.ಯು, ಎ.ಐ.ಎ.ಡಬ್ಲ್ಯು,ಯು, ಡಿ.ಎಚ್.ಎಸ್. ಸಂಘಟನೆಗಳ ವತಿಯಿಂದ ನುಡಿ ನಮನ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ - Coronavirus: ಭಾರತಕ್ಕೆ ಕರೋನಾದಿಂದ ಯಾವಾಗ ಸಿಗಲಿದೆ ಮುಕ್ತಿ? ವಿಜ್ಞಾನಿಗಳು ಏನಂತಾರೆ!
ಸಭೆಯಲ್ಲಿ ಕಾರ್ಮಿಕ ಮುಖಂಡ ಮಾರುತಿ ಚಿಟಗಿ ಮಾತನಾಡುತ್ತ, ಎಡಪಂಥೀಯ ವಿಚಾರಧಾರೆಗಳಿಂದ ವಿಠ್ಠಲ ಅವರು ಸಾಕಷ್ಟು ಪ್ರಭಾವಿತರಾಗಿದ್ದರು. ಸಿರಸಿಯ ಕೆರೆಕೋಣದಲ್ಲಿ ಸಹಯಾನದಂತ ಸಾಂಸ್ಕೃತಿಕ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಅವರ ಪಾತ್ರ ದೊಡ್ಡದು,ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರನ್ನು ಸಹಯಾನಕ್ಕೆ ಕರೆಯಿಸಿ ಅವರದೇ ರಚನೆಯ ಕಾನೂನು ಓದು ಎನ್ನುವ ಪುಸ್ತಕದ ಕುರಿತು ಅನೇಕ ಉಪನ್ಯಾಸಗಳನ್ನು ಆಯೋಜಿಸಿ,ರಾಜ್ಯಾದ್ಯಂತ ಯಶಸ್ವಿಯಾಗಿ ವಿಸ್ತರಿಸಿದ್ದರು.
ಬಡವರು, ದೀನ ದುರ್ಬಲರು, ಕಾರ್ಮಿಕರು, ರೈತರ ಬಗ್ಗೆ ಅತೀವ ಕಾಳಜಿ ತೋರುತ್ತಿದ್ದ ವಿಠ್ಠಲ ಭಂಡಾರಿ ಸಣ್ಣ ವಯಸ್ಸಿನಲ್ಲಿ ತೀರಿ ಹೋಗಿರುವುದು ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಹಿನ್ನಡೆಯಾದಂತೆ ಎಂದರು.
ಕೃಷಿ ಕೂಲಿಕಾರ ಸಂಘಟನೆಯ ಬಾಲು ರಾಠೋಡ ಮಾತನಾಡಿ, ವಿದ್ಯಾರ್ಥಿ ಚಳುವಳಿಯ ಮೂಲಕ ಗುರುತಿಸಿಕೊಂಡ ವಿಠ್ಠಲರವರು ನೊಂದವರ ಪರವಾಗಿ ಧ್ವನಿ ಎತ್ತುವ ಮೂಲಕ ಇಡೀ ರಾಜ್ಯಾದ್ಯಂತ ಸಂವಿಧಾನ ಓದು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದರು ಎಂದು ಸ್ಮರಿಸಿದರು.
ಇದನ್ನೂ ಓದಿ: ಕರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಆಟಗಾರ : IPL 2021ರ ಆದಾಯವನ್ನು ಸಿಎಂ ರಿಲೀಫ್ ಫಂಡ್ ಗೆ ನೀಡಲು ನಿರ್ಧಾರ
ಮೆಹಬೂಬ್ ಹವಾಲ್ದಾರ್, ಗಣೇಶ್ ರಾಠೋಡ, ಅಲ್ಲಾಭಕ್ಷಿ ಮುಚ್ಚಾಲಿ, ರುದ್ರಪ್ಪ ರಾಠೋಡ, ವೀರೇಶ ರಾಠೋಡ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.
-ರವಿ ಹೊನವಾಡ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.