ನವದೆಹಲಿ: Devprayag Cloudburst - ಮಂಗಳವಾರ Uttarakhand ರಾಜ್ಯದ ದೇವ್‌ಪ್ರಯಾಗ್‌ನಲ್ಲಿ ಮೋಡ ಸ್ಫೋಟಗೊಂಡ ಕಾರಣ ಬಂದ ನೀರಿನ ರಭಸಕ್ಕೆ ಪ್ರದೇಶದ ಅನೇಕ ಕಟ್ಟಡಗಳು ನೆಲಸಮಗೊಂಡಿವೆ. ಪುರಸಭೆಯ ವಿವಿಧೋದ್ದೇಶ ಕಟ್ಟಡ ಮತ್ತು ಐಟಿಐ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಧರೆಗುರುಳಿವೆ. ನೀರಿನೊಂದಿಗೆ ಬಂದ ಅವಶೇಷಗಳ ಅಡಿ 8 ಅಂಗಡಿಗಳು ಸಂಪೂರ್ಣ ಹುದುಗಿಹೊಗಿವೆ. ಆದರೆ, ಕೊವಿಡ್ (Covid-19) ಕರ್ಫ್ಯೂ ಕಾರಣ ಹೆಚ್ಚಿನ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ನೀರಿನೊಂದಿಗೆ ಹರಿದು ಬಂದ ಅವಶೇಷಗಳ ಕಾರಣ ಭಾಗಿರಥಿ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಟಿಹರಿ (Tehri) SHO, ಇದುವರೆಗೆ 12-13 ಅಂಗಡಿಗಳು ನೆಲಕ್ಕುರುಳಿವೆ ಎಂದು ಹೇಳಿದ್ದಾರೆ. ಘಟನೆಯ ಕುರಿತು ಅಲರ್ಟ್ ಘೋಷಿಸಲಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Cloudburst was reported at 5 pm today. Around 12-13 shops and several other properties have been damaged. Since most of these shops were closed due to lockdown, no casualty has been reported yet. Water level is on the rise here, rescue operation underway: MS Rawat, SHO Devprayag pic.twitter.com/GyMxnNzelq
— ANI (@ANI) May 11, 2021
Uttarakhand: Several shops and houses damaged due to a cloudburst in Tehri district's Devprayag area
"No casualties have been reported yet. SDRF teams are on their way to the spot," says DGP Ashok Kumar (in file photo) pic.twitter.com/8PlT1ave9L
— ANI (@ANI) May 11, 2021
— sonal lakhera (@sonallakhera1) May 11, 2021
ಮೋಡದ ಸ್ಫೋಟದ ಕಾರಣ ಶಾಂತಾ ನದಿಯಲ್ಲಿ ಬಂದ ಬಿರುಗಾಳಿಯ ಕಾರಣ ನಗರದ ಶಾಂತಿ ಬಜಾರ್ ಸಂಪೂರ್ಣ ಜಲಾವೃತ್ತಗೊಂಡಿದೆ. ಮೂರು ಅಂತಸ್ತಿನ ಐಟಿಐನ ಕಟ್ಟಡ ಸಂಪೂರ್ಣವಾಗಿ ನೆಲಕಚ್ಚಿದೆ ಎನ್ನಲಾಗಿದೆ. ಶಾಂತಾ ನದಿಯುದ್ದಕ್ಕೂ ಹತ್ತಕ್ಕೂ ಹೆಚ್ಚು ಅಂಗಡಿಗಳು ಕೊಚ್ಚಿ ಹೋಗಿವೆ. ದೇವಪ್ರಯಾಗ್ ನಗರದಿಂದ ಬಸ್ ನಿಲ್ದಾಣದ ಕಡೆಗೆ ಸಾಗುವ ಮಾರ್ಗ ಮತ್ತು ಬ್ರಿಡ್ಜ್ ಸಂಪೂರ್ಣ ಕೊಚ್ಚಿಹೋಗಿದೆ. ಅವಶೇಷಗಳ ಅಡಿ ಸಿಲುಕಿಕೊಂಡವರ ಬಗ್ಗೆ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಕರೋನಾ ಕರ್ಫ್ಯೂ ಕಾರಣದಿಂದಾಗಿ, ಐಟಿಐ ಕಟ್ಟಡ ಸೇರಿದಂತೆ ಅಂಗಡಿ-ಮುಂಗಟ್ಟುಗಳು ಮುಚ್ಚಿರುವ ಕಾರಣ ಅಪಾರ ಪ್ರಮಾಣದ ಪ್ರಾಣಹಾನಿ ತಪ್ಪಿದೆ.
अलकनंदा और भागीरथी नदियों के संगम स्थल देवप्रयाग में दैवीय आपदा की सूचना है। बताया गया है कि ऊंची पहाड़ी में बादल फटने से देवप्रयाग में कई दुकानें और आवासीय भवन क्षतिग्रस्त हुए हैं। ईश्वर की कृपा है कि इस प्राकृतिक घटना में कोई जनहानि नहीं हुई है।
— Tirath Singh Rawat (@TIRATHSRAWAT) May 11, 2021
ಇದನ್ನೂ ಓದಿ- BCCI ಎಚ್ಚರಿಕೆ : ಕೊರೋನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಸರಣಿಯಿಂದಲೇ ಔಟ್..!
ಮಂಗಳವಾರ ಸಂಜೆ ಸುಮಾರು ನಾಲ್ಕು ಗಂಟೆಯ ಸುಮಾರಿಗೆ ದಶರಥ ಪರ್ವತದ ಮೇಲೆ ಮೋಡ ಸ್ಫೋಟಗೊಂಡ ಕಾರಣ, ಅಲ್ಲಿಂದ ಹುಟ್ಟಿಕೊಳ್ಳುವ ಶಾಂತ ನದಿಯಲ್ಲಿ ಪ್ರವಾಹ ಉಂಟಾಗಿದೆ. ಶಾಂತಾ ನದಿ ಬಸ್ ನೆಲೆಯಿಂದ ಶಾಂತಿ ಬಜಾರ್ ಮೂಲಕ ಸಾಗಿ ಭಾಗೀರಥಿ ನದಿಯನ್ನು ಸೇರುತ್ತದೆ. ಪ್ರವಾಹದೊಂದಿಗೆ (Heavy Flood) ಬಂದ ಭಾರಿ ಬೌಲ್ದರ್ ನಿಂದ ಶಾಂತಿ ಬಜಾರ್‌ನಲ್ಲಿ ಅಪಾರ ಹಾನಿ ಸಂಭವಿಸಿದೆ. ಐಟಿಐನ ಮೂರು ಅಂತಸ್ತಿನ ಕಟ್ಟಡವು ಸಂಪೂರ್ಣ ನೆಲಕಚ್ಚಿದೆ. ಕಟ್ಟಡದ ಸೆಕ್ಯುರಿಟಿ ಗಾರ್ಡ್ ದಿವಾನ್ ಸಿಂಗ್ ಜಿಗಿದು ತನ್ನ ಪ್ರಾಣ ರಕ್ಷಿಸಿಕೊಂಡಿದ್ದಾನೆ. ಐಟಿಐ ಭವನದಲ್ಲಿದ್ದ ಕಂಪ್ಯೂಟರ್ ಕೇಂದ್ರ, ಖಾಸಗಿ ಬ್ಯಾಂಕುಗಳು, ವಿದ್ಯುತ್, ಫೋಟೋ ಅಂಗಡಿಗಳು ಕೂಡ ಧರೆಗುರುಳಿವೆ. ಮತ್ತೊಂದೆಡೆ, ಶಾಂತಾ ನದಿಗೆ ಹೊಂದಿಕೊಂಡಂತೆ ಇರುವ ಸೇತುವೆ, ರಸ್ತೆ ಸೇರಿದಂತೆ ಆಭರಣ, ಬಟ್ಟೆ, ಸಿಹಿತಿಂಡಿಗಳ ಅಂಗಡಿಗಳು ಇತ್ಯಾದಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಶಾಂತಿ ಬಜಾರ್‌ನಲ್ಲಿ ಕೋಟ್ಯಾಂತರ ರೂಪಾಯಿಗಳ ಹಾನಿ ಸಂಭವಿಸಿದೆ ಎಂದು ಆರಂಭಿಕ ಅಂದಾಜು ವ್ಯಕ್ತಪಡಿಸಲಾಗುತ್ತಿದೆ. ಇದುವರೆಗೆ ಪೊಲೀಸರು ಯಾವುದೇ ಸಾವು-ನೋವುಗಳ ಕುರಿತು ವರದಿ ಮಾಡಿಲ್ಲ. ಕರೋನಾ ಕರ್ಫ್ಯೂ ಜಾರಿಯಲ್ಲಿರದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎಂದು ವರ್ತಿಸಲಾಗುತ್ತಿದೆ.
ಇದನ್ನೂ ಓದಿ-ಗೋವಾ ಆಸ್ಪತ್ರೆಯಲ್ಲಿ 26 ಕೊರೊನಾ ರೋಗಿಗಳ ಸಾವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.