ಇಟಲಿ : ಇಟಲಿಯಲ್ಲಿ ಕಾಣೆಯಾದ ಹಳ್ಳಿಯೊಂದು 70 ವರ್ಷಗಳ ನಂತರ ಪತ್ತೆಯಾಗಿದೆ. ಈ ಗ್ರಾಮವು 70 ವರ್ಷಗಳ ಹಿಂದೆ ಕಣ್ಮರೆಯಾಗಿದ್ದು, ಒಂದು ಸರೋವರದ ದಡದಲ್ಲಿ ಪತ್ತೆಯಾಗಿದೆ. ಸುಮಾರು ವರ್ಷಗಳವರೆಗೆ ಈ ಹಳ್ಳಿಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಈ ಗ್ರಾಮದ ಹೆಸರು ರೆಸಿಯಾ ಲೇಕ್ (Lake Resia). ಇದು ಇಟಲಿಯ (Italy) ದಕ್ಷಿಣ ಟೈರೋಲ್‌ನ (South Tyrol) ಪಶ್ಚಿಮ ಭಾಗದಲ್ಲಿದೆ. ಇದು ರೆಸ್ಚೆನ್ ಪಾಸ್‌ನಿಂದ ದಕ್ಷಿಣಕ್ಕೆ 2 ಕಿ.ಮೀ ದೂರದಲ್ಲಿದೆ. 1950 ರಿಂದ ಈ ಗ್ರಾಮ ನಾಪತ್ತೆಯಾಗಿತ್ತು. ಅನೇಕ ವರ್ಷಗಳಿಂದ ಯಾರಿಗೂ ಈ ಗ್ರಾಮದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. 70 ವರ್ಷಗಳ ನಂತರ ಕಂಡುಬಂದ ಈ ಗ್ರಾಮದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಈ ಹಳ್ಳಿಯ ಹೆಸರು ಕ್ಯೂರೋನ್ (Curon). ಅನೇಕ ವರ್ಷಗಳವರೆಗೆ ಸಾವಿರಾರು ಕುಟುಂಬಗಳು ಇಲ್ಲಿ ನೆಲೆಸಿತ್ತು. 70 ವರ್ಷಗಳ ಹಿಂದೆ ಜಲವಿದ್ಯುತ್ ಸ್ಥಾವರವನ್ನು (hydroelectric plant) ನಿರ್ಮಿಸಲು ಸರ್ಕಾರ ಅಣೆಕಟ್ಟು ನಿರ್ಮಿಸಿ ಎರಡು ಸರೋವರಗಳನ್ನು ವಿಲೀನಗೊಳಿಸಿತ್ತು. ಈ ಎರಡು ಸರೋವರಗಳು ಒಂದಾಗುತ್ತಿದ್ದಂತೆ ಕ್ಯೂರಾನ್ ಗ್ರಾಮದ ಅಸ್ತಿತ್ವವೇ ಕಳೆದು ಹೋಯಿತು. ಇಲ್ಲಿದ್ದ ಗ್ರಾಮ ಕಣ್ಮರೆಯೇ ಆಯಿತು.
Dopo 71 anni dalla costruzione della diga che ha dato luce al lago di Resia, sono riaffiorati i resti dell’antico villaggio di Curon.
Che strana sensazione camminare in mezzo alle macerie delle case...
Curon così non si era mai vista#curon #lagodiresia #reschensee pic.twitter.com/1XcfsPgEYc
— Louise DM 🇮🇹 (@AvventuraL) May 18, 2021
ಈ ಇಡೀ ಪ್ರದೇಶವು ನೀರಿನಲ್ಲಿ (water) ಮುಳುಗಿ ಹೋದ ಕಾರಣ, ಈ ಗ್ರಾಮದ ಜನರು ಸ್ಥಳಾಂತರಗೊಂಡಿದ್ದರು. ಸುಮಾರು 400 ಜನ ಈ ಗ್ರಾಮವನ್ನು ತೊರೆಯುವಂತಾಗಿತ್ತು. ಇದೀಗ ಇಟ್ನಿಯ ದಕ್ಷಿಣ ಭಾಗದ ಪಶ್ಚಿಮ ಭಾಗದಲ್ಲಿ, ದುರಸ್ತಿ ಕಾರ್ಯ ನಡೆಸಲಾಯಿತು. ಬಹಳ ವರ್ಷಗಳ ನಂತರ, ಇಲ್ಲಿನ ನೀರನ್ನು ಸಂಪೂರ್ಣವಾಗಿ ಖಾಲಿಮಾಡಲಾಗಿತ್ತು. ಈ ಸಂದರ್ಭದಲ್ಲಿ ಕ್ಯೂರಾನ್ ಗ್ರಾಮದ ಅವಶೇಷಗಳು ಕಂಡುಬಂದವು
. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.