Global Outage: Amazon, Ebay ಸೇರಿದಂತೆ ಹಲವು ಇ-ಕಾಮರ್ಸ್, ನ್ಯೂಜ್ ಪ್ಲಾಟ್ಫಾರ್ಮ್ ಗಳ ಜಾಗತಿಕ ಕಾರ್ಯಸ್ಥಗಿತ

Global Outage: ವಿಶ್ವದ ಕೆಲವು ಜನಪ್ರಿಯ ವೆಬ್‌ಸೈಟ್‌ಗಳು ಜಾಗತಿಕ ಸ್ಥಗಿತವನ್ನು (Global Outage) ಅನುಭವಿಸಿವೆ. ಇದರಿಂದ ಅವುಗಳ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮ ಟ್ರಾಫಿಕ್ ನಿಂತುಹೋಗಿದೆ. 

Written by - Nitin Tabib | Last Updated : Jun 8, 2021, 07:04 PM IST
  • ಜಾಗತಿಕ ಸ್ಥಗಿತತೆ ಎದುರಿಸಿದ ವಿಶ್ವದ ಜನಪ್ರೀಯ ವೆಬ್ ಸೈಟ್ ಗಳು .
  • ಕಾರ್ಯ ಸ್ಥಗಿತಗೊಳಿಸಿದ ಅಮೆಜಾನ್, ಇಬೇಗಳಂತಹ ಪ್ರಮುಖ ಇ-ಕಾಮರ್ಸ್ ವೆಬ್ ಸೈಟ್ ಗಳು
  • ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದ Cloud Computing ಸೇವೆ ಒದಗಿಸುವ Fastly.
Global Outage: Amazon, Ebay ಸೇರಿದಂತೆ ಹಲವು ಇ-ಕಾಮರ್ಸ್, ನ್ಯೂಜ್ ಪ್ಲಾಟ್ಫಾರ್ಮ್ ಗಳ ಜಾಗತಿಕ ಕಾರ್ಯಸ್ಥಗಿತ title=
Global Outage (Representational Image))

Global Outage: ವಿಶ್ವದ ಕೆಲವು ಜನಪ್ರಿಯ ವೆಬ್‌ಸೈಟ್‌ಗಳು ಜಾಗತಿಕ ಸ್ಥಗಿತವನ್ನು (Global Outage) ಅನುಭವಿಸಿವೆ. ಇದರಿಂದ ಅವುಗಳ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮ ಟ್ರಾಫಿಕ್ ನಿಂತುಹೋಗಿದೆ. ಗಾರ್ಡಿಯನ್(Guardian), ದಿ ನ್ಯೂಯಾರ್ಕ್ ಟೈಮ್ಸ್(The Newyork Times), ದಿ ಫೈನಾನ್ಶಿಯಲ್ ಟೈಮ್ಸ್ (The Financial Times) ಮತ್ತು ಬ್ಲೂಮ್‌ಬರ್ಗ್ ನ್ಯೂಸ್ (Bloomberg New) ಸೇರಿದಂತೆ ಹಲವಾರು ಸುದ್ದಿ ವೆಬ್‌ಸೈಟ್‌ಗಳು (News Websites) ಡೌನ್ ಆಗಿವೆ. ಇವುಗಳ ಜೊತೆಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್(Amazon), ಇಬೇ(eBay) ಇತ್ಯಾದಿಗಳೂ ಕೂಡ ಡೌನ್ ಆಗಿವೆ. ಈ ಪ್ರಕರಣ ಕಂಟೆಂಟ್ ಡಿಸ್ಟ್ರೀಬ್ಯುಶನ್  ನೆಟ್‌ವರ್ಕ್ (Content Distribution Network) ಅಥವಾ CDNಗೆ ಸಂಬಂಧಿಸಿದೆ. ಈ ಕಾರಣದಿಂದಾಗಿ, ವಿಶ್ವದ ಅತಿದೊಡ್ಡ ವೆಬ್‌ಸೈಟ್‌ಗಳು ಸಂಪರ್ಕ ವೈಫಲ್ಯ ಮತ್ತು “Error 503 Service Unavailable”  ಎಂದು ತೋರಿಸುತ್ತಿವೆ.

ಇದನ್ನೂ ಓದಿ-Google ನಿಂದ ಸರ್ಚ್ ಮತ್ತು ಲೊಕೇಷನ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ತಿಳಿಯಿರಿ

Reddit ಕೂಡ ಸ್ವಲ್ಪ ಸಮಯದವರೆಗೆ ಇಳಿಯಿತು. ಇದರೊಂದಿಗೆ, Twitch, GitHub ಮತ್ತು Quora ಸಹ ಈ ಜಾಗತಿಕ ನಿಲುಗಡೆಗೆ ಬಲಿಯಾಗಿವೆ. ಈ ಪ್ರಭಾವಕ್ಕೆ ಒಳಗಾದ ಇತರ ಕೆಲವು ವೆಬ್‌ಸೈಟ್‌ಗಳಲ್ಲಿ Stack Overflow, gov.uk, Hulu, HBO Max, PayPal, Vimeo ಹಾಗೂ  Shopify ಕೂಡ ಶಾಮೀಲಾಗಿವೆ.

ಇದನ್ನೂ ಓದಿ- WhatsApp New Feature: WhatsAppನಿಂದ ಹೊಸ ವೈಶಿಷ್ಟ್ಯ ಬಿಡುಗಡೆ, ಹೇಗೆ ಬಳಸಬೇಕು?

Cloud Computing ಸೇವೆ ಒದಗಿಸುವ Fastly ತನಿಖೆ ನಡೆಸುತ್ತಿದೆ
Fastly ಯುಎಸ್ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಸೇವಾ ಪೂರೈಕೆದಾರ ಕಂಪನಿಯಾಗಿದೆ. ಇದು ಅಮೆಜಾನ್ ಸೇರಿದಂತೆ ನಿಲುಗಡೆಯಿಂದ ಪ್ರಭಾವಿತಗೊಂಡ  ಕೆಲ ಪ್ರಮುಖ ವೆಬ್‌ಸೈಟ್‌ಗಳನ್ನು ಹೋಸ್ಟ್ ಮಾಡುತ್ತದೆ. ಪ್ರಸ್ತುತ ತನ್ನ CDN ಸರ್ವರ್‌ಗಳಲ್ಲಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು Fastly ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಕಂಪನಿಯ ವೆಬ್‌ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಕಂಪನಿ ತನ್ನ CDN ಸೇವೆಗಳ ಕಾರ್ಯಕ್ಷಮತೆಯ ಮೇಲೆ ಸಂಭವನೀಯ ಪರಿಣಾಮದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ-ನಿಮ್ಮ WhatsApp account ಸಕ್ರೀಯವಾಗಿಲ್ಲದಿದ್ದರೆ ಡಿಲಿಟ್ ಆಗಲಿದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News