ಮನೆಯಲ್ಲೊಂದಷ್ಟು ಗಿಡಗಳಿರಬೇಕು. ಮನೆಯೊಳಗೆ ಮನೆಯ ಸೌಂದರ್ಯ ಹೆಚ್ಚಿಸಲೂ ಗಿಡಗಳು ಬೇಕು.
ನವದೆಹಲಿ : ಮನೆಯಲ್ಲೊಂದಷ್ಟು ಗಿಡಗಳಿರಬೇಕು. ಮನೆಯೊಳಗೆ ಮನೆಯ ಸೌಂದರ್ಯ ಹೆಚ್ಚಿಸಲೂ ಗಿಡಗಳು ಬೇಕು. ಮನೆಯೊಳಗಿನ ಗಿಡ ಆಯ್ಕೆ ಮಾಡುವಾಗ ಒಂದಿಷ್ಟು ಚ್ಯೂಸಿ ಆಗಿರಿ. ಯಾಕೆಂದರೆ, ಮನೆಯೊಳಗಿನಕೆಲವೊಂದು ಗಿಡಗಳು ಕಾಯಿಲೆ, ಒತ್ತಡ ದೂರ ಮಾಡುತ್ತವೆ. ಮನೆಯ ಸದಸ್ಯರ ಹೆಲ್ತ್ ಕಾಪಾಡಲು ಚೆನ್ನಾಗಿರುತ್ತದೆ. ಅಂತಹ ಒಳಾಂಗಣ ಸಸ್ಯಗಳ ಬಗ್ಗೆ ತಿಳಿದುಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದಂತೆ ಅಲೋವೇರಾ ಲಾಭ ಎಲ್ಲರಿಗೂ ಗೊತ್ತಿದೆ. ಆದರೆ, ನಿಮಗೆ ಗೊತ್ತಿರಲಿ, ಅಲೋವೇರಾಗೆ ಅಶುದ್ಧ ಗಾಳಿಯನ್ನು ಶುದ್ದಗೊಳಿಸುವ ಶಕ್ತಿ ಇದೆ. ಅಲೋವೇರಾಗೆ ದಿನವೂ ನೀರುಣಿಸುತ್ತಿರಬೇಕು. ನೇರ ಸೂರ್ಯನ ಜಾಗ ಬೀಳದ ಜಾಗದಲ್ಲಿ ಅಲೋವೇರಾ ಗಿಡ ಇಡಬೇಕು.
ಸ್ಪೈಡರ್ ಪ್ಲಾಂಟ್ ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ. ಸೂರ್ಯನ ಬಿಸಿಲು ಬೀಳದ ಜಾಗದಲ್ಲಿ ಈ ಗಿಡವನ್ನಿಡಬೇಕು. ಇದಕ್ಕೆ ದಿನವೂ ನೀರುಣಿಸುವಅಗತ್ಯವಿಲ್ಲ. ಇದು ಗಾಳಿಯಲ್ಲಿರುವ ಕಾರ್ಬನ್ ಮಾನಾಕ್ಸೈಡ್ ಖತಂ ಮಾಡುತ್ತದೆ.
ಲ್ಯಾವೆಂಡರ್ ಕುರಿತಂತೆ ಹಲವಾರು ಔಷಧೀಯ ಲಾಭ ಇದೆ. ಇದು ಸೌಂದರ್ಯ ಥೆರಪಿ ತರಹ ಕೆಲಸ ಮಾಡುತ್ತದೆ. ತಲೆನೋವು ಕಡಿಮೆ ಮಾಡುತ್ತದೆ. ಕೀಟಗಳನ್ನು ಓಡಿಸುತ್ತದೆ. ಇಷ್ಟೇ ಅಲ್ಲ, ಇದರ ನೀಲಿ ಹೂಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಸ್ನೇಕ್ ಪ್ಲಾಂಟ್..ಇದೊಂದು ರೀತಿಯ ಏರ್ ಫ್ಯೂರಿಫೈಯರ್ ಪ್ಲಾಂಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ. ವಾಯು ಮಾಲಿನ್ಯ ಹೆಚ್ಚಿರುವ ಜಾಗದಲ್ಲಿರುವವರು ಈ ಸಸ್ಯವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಇದಕ್ಕೆ ಹೆಚ್ಚಿನ ಬಿಸಿಲು ಬೇಕಾಗಿಲ್ಲ. ಇದನ್ನು ಸಾಕುವುದು ಕೂಡಾ ಸುಲಭ.
ರೋಜಾಮೇರಿ ಗಿಡ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಏರ್ ಫ್ರೆಶ್ನರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದನ್ನು ಸ್ಟಡಿ ರೂಮಿನಲ್ಲಿಟ್ಟರೆ ಹೆಚ್ಚಿನ ಲಾಭ ಇದೆ. ಚಳಿಗಾಲದಲ್ಲಿ ಇದಕ್ಕೆ ಹೆಚ್ಚಿನ ನೀರು ಬೇಕಾಗಿಲ್ಲ. ಆದರೆ, ಬೇಸಿಗೆಯಲ್ಲಿ ಈ ಗಿಡವನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ.
ನೀವು ಪದೇ ಪದೇ ಟ್ರಾವೆಲ್ ಮಾಡುವವರಾಗಿದ್ದರೆ ರಬ್ಬರ್ ಪ್ಲಾಂಟ್ ನಿಮ್ಮ ಮನೆಗೆ ಪರ್ಫೆಕ್ಟ್ ಚಾಯ್ಸ್. ಇದರ ನಿರ್ವಹಣೆ ಕೂಡಾ ಸುಲಭ. ತುಂಬಾ ನೀರುಣಿಸಬೇಕಾದ ಅಗತ್ಯವಿಲ್ಲ. 6 – 8 ಅಡಿ ಬೆಳೆಯುತ್ತದೆ. ಇದರಲ್ಲಿ ಪರಾಗ ಕಣ ಬೆಳೆಯುವುದಿಲ್ಲ. ಹಾಗಾಗಿ, ಅಲರ್ಜಿಯ ಪ್ರಶ್ನೆಯೇ ಇಲ್ಲ. ಇದು ಗಾಳಿಯಲ್ಲಿರುವ ಕಾರ್ಬಾನ್ ಮಾನಾಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್ ನಿವಾರಿಸುತ್ತದೆ.
ಮನೆಯಲ್ಲಿ ಶಾಂತಿಯ ವಾತಾವರಣ ಕಲ್ಪಿಸುತ್ತದೆ ಪೀಸ್ ಲಿಲಿ. ಇದು ಮನೆಯ ಹವೆಯನ್ನು ಶುದ್ದವಾಗಿಡುತ್ತದೆ. ಅಂದರೆ ಗಾಳಿಯಲ್ಲಿನ ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ.
ಈ ಗಿಡ ನೋಡಲು ಬಹಳ ಸುಂದರವಾಗಿರುತ್ತದೆ. ಇದೊಂದು ಉತ್ತಮ ಏರ್ ಫ್ಯೂರಿಫೈಯರ್ ಗಿಡ. ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊಡೆದೋಡಿಸುತ್ತದೆ. ನಿರ್ವಹಣೆ ಕೂಡಾ ಸುಲಭ.