ನವದೆಹಲಿ : ನಿಮಗೆ ನೆಲ್ಲಿ ಕಾಯಿಯ ಔಷಧೀಯ ಗುಣಗಳ (benefits of gooseberry) ಬಗ್ಗೆ ಖಂಡಿತಾ ಗೊತ್ತಿರಬೇಕು. ನೆಲ್ಲಿಕಾಯಿಗೆ ಆಯುರ್ವೆದದಲ್ಲಿ ಬಹಳ ಮಹತ್ವ ಇದೆ. ಆದರೆ, ನೆಲ್ಲಿಕಾಯಿ ದೇಹಾರೋಗ್ಯಕ್ಕೆ ಮಾತ್ರ ಅಲ್ಲ, ತ್ವಚೆಯ ಆರೋಗ್ಯವನ್ನೂ (Skin care) ಕಾಪಾಡುತ್ತದೆ. ನಿಮ್ಮ ಚರ್ಮವನ್ನು ಹೆಲ್ತಿ ಆಗಿಡುತ್ತದೆ. ಯಾಕೆಂದರೆ, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಬಿ ಕಾಂಪ್ಕೆಕ್ಸ್, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣ, ಕಾರ್ಬೋಹೈಡ್ರೇಟ್, ಆಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ದವಾಗಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಎ ತ್ವಚೆಯ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ.
ನೆಲ್ಲಿಕಾಯಿ ಯಾವ ರೀತಿಯಲ್ಲಿ ತ್ವಚೆಯ ಆರೋಗ್ಯ ಕಾಪಾಡುತ್ತದೆ.
1. ಚರ್ಮದ ಕಲೆಗಳನ್ನು ನಿವಾರಿಸುತ್ತದೆ :
ನಿತ್ಯವೂ ನೆಲ್ಲಿಕಾಯಿ ಜ್ಯೂಸ (gooseberry juice) ಕುಡಿದರೆ ಚರ್ಮದ ಮೇಲೆ ಕಲೆಗಳು ಮೂಡುವುದಿಲ್ಲ. ನೆಲ್ಲಿಕಾಯಿಯಲ್ಲಿರುವ ಕೆಲವು ಪೋಷಕಾಂಶಗಳು ಚರ್ಮದಲ್ಲಿ ಕಲೆಗಳು ಉಂಟಾಗಲು ಅವಕಾಶ ನೀಡುವುದಿಲ್ಲ.
ಇದನ್ನೂ ಓದಿ : Anemia Symptoms: ಈ ರೋಗಲಕ್ಷಣಗಳು ನಿಮ್ಮ ದೇಹದಲ್ಲಿ ರಕ್ತದ ಕೊರತೆಯ ಸಂಕೇತವಾಗಿರಬಹುದು!
2. ತ್ವಚೆಯನ್ನು ಕೋಮಲವಾಗಿಡುತ್ತದೆ :
ವಿಟಮಿನ್ ಸಿ ಪೋಷಕಾಂಶದ ಅತಿ ಉತ್ತಮ ಮೂಲ ನೆಲ್ಲಿಕಾಯಿ. ಹಾಗಾಗಿ ಇದು ಚರ್ಮದಲ್ಲಿರುವ ಕೊಲೇಜನ್ ಸೆಲ್ ಗಳನ್ನು ಹೆಚ್ಚುವರಿಯಾಗಿ ಉತ್ಪತ್ತಿಮಾಡಲು ನೆರವಾಗುತ್ತದೆ. ಹಾಗಾಗಿ ನೆಲ್ಲಿಕಾಯಿ ಚರ್ಮವನ್ನು (gooseberry fior skin care) ಸುಕೋಮಲವಾಗಿಡುತ್ತದೆ.
3. ತ್ವಚೆಯ ನೆರಿಗೆಯನ್ನು ಕಡಿಮೆ ಮಾಡುತ್ತದೆ :
ಚರ್ಮದಲ್ಲಿ ನೆರಿಗೆಗಳು (wrinkles on face) ಕಂಡುಬಂದರೆ ತ್ವಚೆಯ ಸೌಂದರ್ಯ ಹಾಳಾಗುತ್ತದೆ. ನೆಲ್ಲಿಕಾಯಿ ಜ್ಯೂಸ್ ನಿಯಮಿತವಾಗಿ ಕುಡಿಯುತ್ತಿದ್ದರೆ ಚರ್ಮದಲ್ಲಿ ನೆರಿಗೆಗಳು ಮೂಡುವುದಿಲ್ಲ.
ಇದನ್ನೂ ಓದಿ : ಗರಂ ಮಸಾಲೆ ಬಳಸಿದರೆ ಆರೋಗ್ಯದ ಮೇಲಾಗುವ ನಾಲ್ಕು ಪ್ರಯೋಜನಗಳು
ಇವೆಲ್ಲಾ ಸಾಂಪ್ರದಾಯಿಕ ಜ್ಞಾನವಾಗಿದ್ದು, ಅನ್ವಯ ಮಾಡುವ ಮೊದಲು ತಜ್ಞರ ಸಲಹೆ ಪಡೆಯವುದು ಅತಿ ಮುಖ್ಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ