Airtel Payments Bank: ‘Pay To Contacts’ ಸೇವೆ ಆರಂಭಿಸಿದ Airtel, ಇಲ್ಲಿದೆ ವಿವರ

Airtel Payments Bank - ಏರ್ಟೆಲ್ ಪೇಮೆಂಟ್ ಬ್ಯಾಂಕ್ ಆರಂಭಿಸಿರುವ ಈ ಸೇವೆಯ ಸಹಾಯದಿಂದ, ಇದೀಗ ಬಳಕೆದಾರರು ಮೊಬೈಲ್ ಫೋನ್‌ನಲ್ಲಿರುವ ಸಂಪರ್ಕ ಪಟ್ಟಿಯ ಯಾವುದೇ ಸಂಖ್ಯೆಗೆ ಹಣವನ್ನು ವರ್ಗಾಯಿಸಬಹುದು.

Written by - Nitin Tabib | Last Updated : Jul 8, 2021, 10:10 PM IST
  • Pay To Contact ಸೇವೆ ಆರಂಭಿಸಿದ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್.
  • ಖಾತೆ ಸಂಖ್ಯೆ, ಯುಪಿಐ ಐಡಿ ನಮೂದಿಸದೆ ಹಣ ವರ್ಗಾವಣೆ ಸಾಧ್ಯ.
  • ಈ ವರ್ಷದ ಆರಂಭದಲ್ಲಿ ಸುರಕ್ಷಿತ ಹಣ ವರ್ಗಾವಣೆಗೆ Airtel Safe Pay ಬಿಡುಗಡೆ ಮಾಡಲಾಗಿತ್ತು.
Airtel Payments Bank: ‘Pay To Contacts’ ಸೇವೆ ಆರಂಭಿಸಿದ Airtel, ಇಲ್ಲಿದೆ ವಿವರ title=
Airtel Payments Bank (File Photo)

Airtel Payments Bank ತನ್ನ ಗ್ರಾಹಕರಿಗೆ ನೂತನ ಸೇವೆಯೊಂದನ್ನು ಆರಂಭಿಸಿದೆ. ಹೌದು, ಇದೀಗ UPI ಪೇಮೆಂಟ್ಸ್ ಗಳಿಗಾಗಿ (UPI Payments)  ಏರ್ಟೆಲ್ ಪೇ ಟು ಕಾಂಟಾಕ್ಟ್ ಸೇವೆ (Pay To Contact) ಆರಂಭಿಸಿದೆ.  ಏರ್ಟೆಲ್ ಪೇಮೆಂಟ್ ಬ್ಯಾಂಕ್ ಆರಂಭಿಸಿರುವ ಈ ಸೇವೆಯ ಸಹಾಯದಿಂದ, ಇದೀಗ ಬಳಕೆದಾರರು ಮೊಬೈಲ್ ಫೋನ್‌ನಲ್ಲಿರುವ ಸಂಪರ್ಕ ಪಟ್ಟಿಯ ಯಾವುದೇ ಸಂಖ್ಯೆಗೆ ಹಣವನ್ನು ವರ್ಗಾಯಿಸಬಹುದು. ಇದಕ್ಕಾಗಿ, ಇದೀಗ ಯಾರೂ ಯುಪಿಐ ಐಡಿ ಮತ್ತು ಬ್ಯಾಂಕ್ ಖಾತೆ ಸಂಖ್ಯೆಯನ್ನು ದಾಖಲಿಸುವ ಅಗತ್ಯವಿಲ್ಲ.

ಈ ಕುರಿತು ಕಂಪನಿ ಜಾರಿಗೊಳಿಸಿರುವ ಹೇಳಿಕೆಯ ಪ್ರಕಾರ, ಗ್ರಾಹಕರು ಪೇ ಟು ಕಾಂಟಾಕ್ಟ್ ಸೇವೆಯ ಮೂಲಕ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದೆ. ಅಷ್ಟೇ ಅಲ್ಲ ಗ್ರಾಹಕರು ತಮ್ಮ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡದೆ ಮತ್ತು ಯುಪಿಐ ಐಡಿಯನ್ನು ನಮೂದಿಸದೆಯೇ ಹಣವನ್ನು ವರ್ಗಾಯಿಸಲು ಸಾಧ್ಯವಾಗಲಿದೆ. ಇದು ಗ್ರಾಹಕರ ಸಮಯ ಉಳಿತಾಯ ಮಾಡಲಿದೆ. ಇದಲ್ಲದೆ, ಗ್ರಾಹಕರು ಭೀಮ್ ಯುಪಿಐ (BHIM UPI) ವಿಭಾಗಕ್ಕೆ ಭೇಟಿ ನೀಡುವ ಮೂಲಕ, ಪೇ ಮನಿ ಗುಂಡಿಯನ್ನು (Pay Money-To Contacts) ಕ್ಲಿಕ್ಕಿಸುವುದರ ಮೂಲಕ ಸುಲಭವಾಗಿ ಹಣವನ್ನು ಕಳುಹಿಸಲು ಸಾಧ್ಯವಾಗಲಿದೆ ಎಂದು ಏರ್ಟೆಲ್ ಹೇಳಿದೆ.

Airtel Pay to Contact ಬಳಕೆ ಹೇಗೆ? 
>> ಮೊದಲು Airtel Payments Bank ಖಾತೆ ತೆರೆಯಲು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
>> ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ.
>> ಮಾಹಿತಿಯನ್ನು ತುಂಬಲು Aadhaar Card, Voter ID, Driving License ಅಥವಾ  PAN Card ಗಳಲ್ಲಿನ ಯಾವುದಾದರೊಂದು ದಾಖಲೆ ಬಳಸಿ. 
>> ಯಾವುದೇ ಒಂದು ಐಡಿ ಕಾರ್ಡ್ ಮೂಲಕ ನೋಂದಣಿ ಮಾಡಿ.
>> ಇದಾದ ಬಳಿಕ OTP ನಮೂದಿಸಿ. 
>> OTP ಪರಿಶೀಲನೆಯ ಬಳಿಕ Airtel Account ಓಪನ್ ಮಾಡಿ.

ಇದನ್ನೂ ಓದಿ-Group Health Insurance: ಶೇ.30 ರಷ್ಟು ದುಬಾರಿಯಾದ ಗ್ರೂಪ್ ಹೆಲ್ತ್ ಇನ್ಸುರೆನ್ಸ್ ಪಾಲಸಿ, ಕಂಪನಿಗಳು ಹೇಳಿದ್ದೇನು?

Airtel Safe Pay
ಈ ವರ್ಷದ ಆರಂಭದಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗಾಗಿ Safe Pay ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಏರ್ಟೆಲ್ ನ ಈ ವೈಶಿಷ್ಟ್ಯ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಲ್ಲಿ ಅತ್ಯಂತ ಸುರಕ್ಷಿತ ಎಂದು ಹೇಳಲಾಗಿದೆ. ಇದರಲ್ಲಿ ಬಳಕೆದಾರರಿಗೆ Extra Layer Security ಸಿಗುತ್ತದೆ. ಈ ಸೇವೆಯನ್ನು ಬಳಸಿ ಬ್ಯಾಂಕಿಂಗ್ ಫ್ರಾಡ್, ಫಿಶಿಂಗ್ ಹಾಗೂ ಪಾಸ್ವರ್ಡ್ ಕಳ್ಳತನದಂತಹ ಘಟನೆಗಳಿಂದ ಪಾರಾಗಬಹುದು ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ-New Way To Stop Covid 19 - Coronavirus ತಡೆಗಟ್ಟಲು ಹೊಸ ದಾರಿ ಕಂಡು ಹಿಡಿದ ವಿಜ್ಞಾನಿಗಳು

Airtel Safe Pay ಸೇವೆಯನ್ನು ಹೀಗೆ ಸಕ್ರೀಯಗೊಳಿಸಿ
>> Airtel Safe Pay ವೈಶಿಷ್ಟ್ಯವನ್ನು ಸಕ್ರೀಯಗೊಳಿಸಲು ಮೊದಲು Airtel Thanks Appಗೆ ಭೇಟಿ ನೀಡಿ.
>> ಅಲ್ಲಿ ಕೆಳಗಡೆ ನೀಡಲಾಗಿರುವ Banking Section ಮೇಲೆ ಕ್ಲಿಕ್ಕಿಸಿ ನಂತರ ಸೇಫ್ ಪೆ ಆಯ್ಕೆಯನ್ನು ಕ್ಲಿಕ್ಕಿಸಿ.
>> ಈಗ Toggle ಗುಂಡಿಯನ್ನೊಮ್ಮೆ ಒತ್ತಿ. ಈಗ ನಿಮ್ಮ ಏರ್ಟೆಲ್ ಸೇಫ್ ಪೆ ಸೇವೆ ಸಕ್ರೀಯಗೊಳ್ಳಲಿದೆ.

ಇದನ್ನೂ ಓದಿ-ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ, 8 ರಾಜ್ಯಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News