Caste Atrocities: 28 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ದೌರ್ಜನ್ಯ

ಪತಿ ಮೇಲ್ಜಾತಿಗೆ ಸೇರಿದ್ದರೆ, ಪತ್ನಿ ಪರಿಶಿಷ್ಟ ಪಂಗಡವಾದ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದಾರೆ.

Written by - Puttaraj K Alur | Last Updated : Jul 12, 2021, 12:17 PM IST
  • 28 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ
  • ಜುಲೈ 8ರಂದು ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದಿರುವ ಹೀನ ಕೃತ್ಯ
  • ಈ ಘಟನೆ ಬಳಿಕ ಕೆಳಸಮುದಾಯದ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ
Caste Atrocities: 28 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ದೌರ್ಜನ್ಯ title=
ದಂಪತಿ ಮೇಲೆ 28 ವರ್ಷಗಳ ನಂತರ ಹಲ್ಲೆ ನಡೆಸಲಾಗಿದೆ

ರೋಣ: ಅಂತರ್ಜಾತಿ, ಅಂತರ್ಧಮಿಯ ವಿವಾಹಗಳಿಗೆ ಹಿಂದಿನಿಂದಲೂ ವಿರೋಧವಿದೆ. ತಮ್ಮ ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗಲು ಪೋಷಕರು ಇಂದೂ ಕೂಡ ವಿರೋಧಿಸುತ್ತಾರೆ. ತಮ್ಮ ಮಗ-ಮಗಳು ಬೇರೆ ಜಾತಿಯವರನ್ನು ಮದುವೆಯಾದರೆ ಎಲ್ಲಿ ತಮ್ಮ ವರ್ಚಸ್ಸು ಹಾಳಾಗುತ್ತದೋ ಎಂಬ ಭಯದಲ್ಲಿ ಪೋಷಕರಿರುತ್ತಾರೆ. ಹೀಗಾಗಿ ಅಂತರ್ಜಾತಿ ವಿವಾಹ(Intercaste Marriage)ವಾಗುವವರ ಮೇಲೆ ಹಲ್ಲೆ, ದೌರ್ಜನ್ಯದಂತಹ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ. ಕೆಲವು ಸಲ ಮರ್ಯಾದಾ ಹತ್ಯೆಗಳು ಕೂಡ ನಡೆದಿವೆ. ಅದೇ ರೀತಿಯ ಘಟನೆಗೆ ಗದಗ ಜಿಲ್ಲೆ ಸಾಕ್ಷಿಯಾಗಿದೆ.

ಗದಗ ಜಿಲ್ಲೆ ರೋಣ(Ron) ತಾಲೂಕಿನಲ್ಲಿ ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಮೇಲೆ 28 ವರ್ಷಗಳ ಬಳಿಕ ಗಂಡನ ಮನೆಯವರು ಮಾರಣಾಂತಿಕ ಹಲ್ಲೆ( ನಡೆಸಿ ದೌರ್ಜನ್ಯವೆಸಗಿದ್ದಾರೆ. ಪತಿ ಮೇಲ್ಜಾತಿಗೆ ಸೇರಿದ್ದರೆ, ಪತ್ನಿ ಪರಿಶಿಷ್ಟ ಪಂಗಡವಾದ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದಾರೆ. ದಂಪತಿ ಮೇಲೆ ಹಲ್ಲೆ ನಡೆಸಿ ಹೀನ ಕೃತ್ಯವೆಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ, ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಜುಲೈ 8ರಂದು ಈ ಘಟನೆ ನಡೆದಿದೆ. ಈ ದಂಪತಿ ಮದುವೆಯಾಗಿ ಬರೋಬ್ಬರಿ 28 ವರ್ಷಗಳಾಗಿವೆ. ಆದರೆ ಗಂಡನ ಸಂಬಂಧಿಗಳು ಈಗ ಕ್ಯಾತೆ ತೆಗೆದು ದಂಪತಿ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯವೆಸಗಿದ್ದಾರೆ. ಜುಲೈ 9 ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ) ಕಾಯ್ದೆ(Prevention of Atrocities)ಯಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 ಈ ಘಟನೆ ಬಳಿಕ ರಾಜ್ಯದಲ್ಲಿರುವ  ಕೆಳಸಮುದಾಯಗಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕರ್ನಾಟಕ(Karnataka)ದಲ್ಲಿ 2020ರ ಏಪ್ರಿಲ್ 1 ರಿಂದ 2021ರ ಮಾರ್ಚ್ 31ರವರೆಗೆ ಕರ್ನಾಟಕದಲ್ಲಿ ಎಸ್‌ಸಿ /ಎಸ್‌ಟಿ ಸಮುದಾಯಗಳ ವಿರುದ್ಧ 2,327 ಕೊಲೆ, ಶೋಷಣೆ ಮತ್ತು ಇತರ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.54 ಕ್ಕಿಂತ ಹೆಚ್ಚಾಗಿದೆ. ಈ ಪ್ರಕರಣಗಳಲ್ಲಿ ಸಮುದಾಯದ ಜನರ ವಿರುದ್ಧ ಕೊಲೆ, ಶೋಷಣೆ, ಸುಟ್ಟಗಾಯಗಳು ಮತ್ತು ಇತರ ಅಪರಾಧಗಳು ಸೇರಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ ಅಂಶಗಳು ತಿಳಿಸಿವೆ.

ಇದನ್ನೂ ಓದಿ: HDK V/s Sumalatha: ‘ಬೇರೆಯವರಿಗೆ ಕೆಸರು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ’

ಏಪ್ರಿಲ್ 2020 ಮತ್ತು ಮೇ 2021ರ ನಡುವೆ 87 ಕೊಲೆಗಳು, 216 ಶೋಷಣೆ ಪ್ರಕರಣಗಳು, 2,024 ಇತರ ನಿದರ್ಶನಗಳು ಮತ್ತು 3 ಬೆಂಕಿ ಹಚ್ಚಿರುವ ಘಟನೆಗಳು ನಡೆದಿವೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಈ ಅಪರಾಧ(Crime)ಗಳಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ಸುಮಾರು 2,842.38 ಲಕ್ಷ ರೂ. ವ್ಯಯಿಸಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News