ಮುಂಬೈ: SBI Yono App Updates - ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಅಂದರೆ ಎಸ್‌ಬಿಐ (SBI) ತನ್ನ ಡಿಜಿಟಲ್ ಸಾಲ ನೀಡುವ ವೇದಿಕೆ ಯೋನೊ ಆಪ್‌ನ (You Only Need One App) ಮುಂದಿನ ಆವೃತ್ತಿಯನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಕುರಿತು ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ (Dinesh Khara) ಶುಕ್ರವಾರ ಈ ಮಾಹಿತಿ ನೀಡಿದ್ದಾರೆ.
ಇಂಡಸ್ಟ್ರಿ ಬಾಡಿ IMC ಆಯೋಜಿಸಿದ್ದ ಬ್ಯಾಂಕಿಂಗ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಖಾರಾ, 'ಬ್ಯಾಂಕ್ ಯೋನೊ ವೇದಿಕೆಯನ್ನು ಆರಂಭಿಸಿದ ವೇಳೆ ಆಗ ಇದನ್ನು ಕೇವಲ ಚಿಲ್ಲರೆ ವಿಭಾಗದ ಉತ್ಪನ್ನಗಳ ವಿತರಣಾ ವೇದಿಕೆಯಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ಎಸ್‌ಬಿಐ ಯೋನೊ ಸಾಮರ್ಥ್ಯವನ್ನು ಅಂತರರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಬಳಸಬಹುದು. ಏಕೆಂದರೆ ನಾವು ಈಗಾಗಲೇ ಚಿಲ್ಲರೆ ಕಾರ್ಯಾಚರಣೆಯನ್ನು ಹೊಂದಿದ್ದೇವೆ. ಇನ್ಮುಂದೆ ನಾವು ವ್ಯಾಪಾರಕ್ಕಾಗಿ ಕೂಡ YONO ಬಳಸಬಹುದು' ಎಂದು ಹೇಳಿದ್ದಾರೆ.
ಇದನ್ನೂ ಓದಿ-FD Interest Rates : FD ಮೇಲಿನ ಬಡ್ಡಿದರಗಳನ್ನು ಬದಲಸಿದ ಈ ಬ್ಯಾಂಕ್ : ಹೊಸ ದರಗಳು ಯಾವವು ಇಲ್ಲಿ ನೋಡಿ!
ಈ ಎಲ್ಲಾ ಸೌಕರ್ಯಗಳನ್ನು ನಾವು YONO Appನ ಮುಂದಿನ ಆವೃತ್ತಿಯಲ್ಲಿ ಹೇಗೆ ತರಬೇಕು ಎಂಬುದರ ಕುರಿತು ಇದೀಗ SBI ಯೋಚಿಸುತ್ತಿದೆ. ಪ್ರಸ್ತುತ ನಾವು ಈ ಎಲ್ಲ ಸಂಗತಿಗಳ ಕುರಿತು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲಿಯೇ App ನಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಿದ್ದೇವೆ ಎಂದು ಖಾರಾ ಹೇಳಿದ್ದಾರೆ.
ಇದನ್ನೂ ಓದಿ-Bank Holiday : 5 ದಿನ ಈ ರಾಜ್ಯಗಳಲ್ಲಿ ಬ್ಯಾಂಕ್ ಬಂದ್ : ನಿಮ್ಮ ನಗರವು ಈ ಪಟ್ಟಿಯಲ್ಲಿಲ್ಲದೆಯೇ?
ಭಾರತೀಯ ಸ್ಟೇಟ್ ಬ್ಯಾಂಕ್ ನ 2020-21ರ ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 3, 2021 ವರೆಗೆ ಸುಮಾರು 7.96 ಕೋಟಿ ಜನರು ಯೋನೋ ಆಪ್ ಡೌನ್ಲೋಡ್ ಮಾಡಿದ್ದಾರೆ ಹಾಗೂ 3.71ಕೋಟಿ ಜನರು ಈಗಾಗಲೇ ನೋಂದಣಿ ಕೂಡ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ-LIC Policy : ಪ್ರತಿ ತಿಂಗಳು ₹1302 ಪ್ರೀಮಿಯಂ ಪಾವತಿಸಿದರೆ ಸಿಗಲಿದೆ ₹27.60 ಲಕ್ಷ : ಈ ಪಾಲಿಸಿ ಯಾವುದು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.